For the best experience, open
https://m.hosakannada.com
on your mobile browser.
Advertisement

Government employee: ಸರ್ಕಾರಿ ನೌಕರರಿಗೆ ಬೊಂಬಾಟ್ ಸುದ್ದಿ- ಕೊನೆಗೂ ದಶಕಗಳ ಬೇಡಿಕೆ ಈಡೇರಿಸಿದ ಸರ್ಕಾರ!!

02:42 PM Dec 02, 2023 IST | ಸುದರ್ಶನ್
UpdateAt: 03:11 PM Dec 02, 2023 IST
government employee  ಸರ್ಕಾರಿ ನೌಕರರಿಗೆ ಬೊಂಬಾಟ್ ಸುದ್ದಿ  ಕೊನೆಗೂ ದಶಕಗಳ ಬೇಡಿಕೆ ಈಡೇರಿಸಿದ ಸರ್ಕಾರ

Government employee : ರಾಜ್ಯ ಸರ್ಕಾರಿ ನೌಕರರ ದಶಕಗಳ ಬಹುದೊಡ್ಡ ಬೇಡಿಕೆಯನ್ನು ಕೊನೆಗೂ ಸರ್ಕಾರ ನೆರವೇರಿಸಲು ಮುಂದಾಗಿದ್ದು ಇನ್ಮುಂದ ನೌಕರರು ಆಸ್ತಿ ಖರೀದಿ ಮಾಡುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳೀಕರಣಗೊಳಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

Advertisement

ಹೌದು, ಕರ್ನಾಟಕದ ಸರ್ಕಾರಿ ನೌಕರರು (Government employee) ಆಸ್ತಿ ಖರೀದಿ (Property Purchase) ಮಾಡಲು ಹರಸಾಹಸವನ್ನೇ ಪಡಬೇಕಿತ್ತು. ಆದರೀಗ ಸರ್ಕಾರ ಈ ಸಮಸ್ಯೆಯನ್ನು ನಿವಾರಿಸಲು ಮುಂದಾಗಿದ್ದು, ಶೀಘ್ರದಲ್ಲಿಯೇ ಸರ್ಕಾರಿ ನೌಕರರ (Government employee) ಆಸ್ತಿ ಖರೀದಿ ಪ್ರಕ್ರಿಯೆಯನ್ನು ಸರಳೀಕರಿಸುವತ್ತ ಹೆಜ್ಜೆಯನ್ನಿಟ್ಟಿದ್ದು ನಿನ್ನೆ ನಡೆದ ರಾಜ್ಯಮಟ್ಟದ ಜಂಟಿ ಸಮಾಲೋಚನಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ.

ಅಂದಹಾಗೆ ನಿನ್ನೆ ನಡೆದ ಸಭೆಯಲ್ಲಿ ಸರ್ಕಾರಿ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸಲು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಇವುಗಳ ಕುರಿತು ಅಧಿಕೃತ ಆದೇಶ ಹೊರಬೀಳುವುದು ಮಾತ್ರ ಬಾಕಿ ಇದೆ.

Advertisement

ರಾತ್ರೋ ರಾತ್ರಿ ನ್ಯೂಯಾರ್ಕ್ ಗೆ ನುಗ್ಗಿದ ಯೋಗಿ ಸರ್ಕಾರದ ಬುಲ್ಡೋಜರ್ ಗಳು- ಕಟ್ಟಡಗಳು ನೆಲಸಮ !

ಆಸ್ತಿ ಖರೀದಿ ಪ್ರಕ್ರಿಯಯ ನಿಯಮವೀಗ ಸರಳ;
ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ಚರ/ ಸ್ಥಿರ ಆಸ್ತಿ ಖರೀದಿ ಮಾಡುವ ಪೂರ್ವದಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮವಿದೆ. ಈ ನಿಯಮವನ್ನು ಸಡಿಲಿಕೆ ಮಾಡಲು ತೀರ್ಮಾನಿಸಲಾಗಿದೆ. ಇದರ ಅನುಸಾರ ಕಾಲಮಿತಿಯಲ್ಲಿ ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ಮಾಡುವಂತೆ ಸರಳೀಕೃತ ನಿಯಮದಲ್ಲಿ ಬದಲಾವಣೆ ತರಲಾಗುತ್ತಿದೆ. ಈ ರೀತಿಯಾದರೆ ಸರ್ಕಾರಿ ನೌಕರರು ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ನೀಡಬೇಕಾಗುತ್ತದೆ.

ಇದನ್ನೂ ಓದಿ: Bengaluru Kambala: 'ಬೆಂಗಳೂರು ಕಂಬಳ' ಆಯೋಜಕರ ವಿರುದ್ಧು ದೂರು ದಾಖಲು ಪ್ರಕರಣ - ಸಂಘಟಕರು ಪಾವತಿಸಿದ ದಂಡವೆಷ್ಟು ?!

Advertisement
Advertisement