Adhar card: ಆಧಾರ್ ಕಾರ್ಡ್ ವಿಚಾರದಲ್ಲಿ ಮಹತ್ವದ ಬದಲಾವಣೆ ತಂದ ಸರ್ಕಾರ- ಇನ್ಮುಂದೆ ಈ ಕೆಲಸಕ್ಕೆ ಆಧಾರ್ ದಾಖಲೆಯಲ್ಲ !!
10:51 AM Jan 18, 2024 IST | ಹೊಸ ಕನ್ನಡ
UpdateAt: 10:56 AM Jan 18, 2024 IST
Advertisement
Adhar card: ಆಧಾರ್ ಕಾರ್ಡ್ ಎಂಬುದು ಪ್ರತಿಯೊಬ್ಬ ಭಾರತೀಯನ ಗುರುತಿನ ಚೀಟಿ ಇದ್ದಂತೆ. ಸರ್ಕಾರದ ಯಾವುದೇ ಪ್ರಯೋಜನವನ್ನು ಪಡೆಯಲು ಈ ಆಧಾರ್ ಕಾರ್ಡ್(Adhar card) ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆದರೆ ಇನ್ಮುಂದೆ ಜನ್ಮ ದಿನಾಂಕಕ್ಕೆ ಆಧಾರ್ ಕಾರ್ಡ್ ಮಾನ್ಯವಲ್ಲ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ.
Advertisement
ಹೌದು, ಇಪಿಎಫ್‌ಒ(EPFO) ನಲ್ಲಿ ಜನ್ಮ ದಿನಾಂಕ ಅಪ್ ಡೇಟ್, ತಿದ್ದುಪಡಿಗೆ, ಆಧಾರ್ ಅರ್ಹ ದಾಖಲೆ ಎಲ್ಲ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದ್ದು, ಇನ್ನು ಮುಂದೆ ಜನ್ಮ ಪ್ರಮಾಣ ಪತ್ರ, ಅಂಕಪಟ್ಟಿ, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಪಾನ್ ಕಾರ್ಡ್, ಪಾಸ್ಪೋರ್ಟ್ ಮೊದಲಾದವುಗಳನ್ನು ಜನ್ಮ ದಿನಾಂಕದ ದಾಖಲೆಯಾಗಿ ಬಳಸಬಹುದು ಎಂದು ಹೇಳಲಾಗಿದೆ.
Advertisement
ಆಧಾರ್ ಒಂದು ವಿಶಿಷ್ಟ ಗುರುತಾಗಿದ್ದರೂ, ಆಧಾರ್ ಕಾಯಿದೆ 2016 ರ ಪ್ರಕಾರ ಜನ್ಮ ದಿನಾಂಕದ ಪುರಾವೆಯಾಗಿ ಗುರುತಿಸಲಾಗಿಲ್ಲ. ಇದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ನಿರ್ದೇಶನವನ್ನು ಅನುಸರಿಸಿದೆ ಎಂದು ಹೇಳಲಾಗಿದೆ.
Advertisement