For the best experience, open
https://m.hosakannada.com
on your mobile browser.
Advertisement

Madhu Bangarappa: ಶಿಕ್ಷಕರ ನೇಮಕಾತಿ ವಿಚಾರ- ಬೆಳ್ಳಂಬೆಳಗ್ಗೆಯೇ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಮಧು ಬಂಗಾರಪ್ಪ

09:27 AM Dec 06, 2023 IST | ಅಶ್ವಿನಿ ಹೆಬ್ಬಾರ್
UpdateAt: 09:27 AM Dec 06, 2023 IST
madhu bangarappa  ಶಿಕ್ಷಕರ ನೇಮಕಾತಿ ವಿಚಾರ  ಬೆಳ್ಳಂಬೆಳಗ್ಗೆಯೇ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಮಧು ಬಂಗಾರಪ್ಪ
Advertisement

Madhu Bangarappa: ಸರ್ಕಾರದ ಅನುದಾನಕ್ಕೆ ಸೇರಿದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ 2023ರವರೆಗೂ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗುವ ಕುರಿತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ(Madhu Bangarappa) ಭರವಸೆ ನೀಡಿದ್ದಾರೆ.

Advertisement

ಬಿಜೆಪಿಯ ಶಶೀಲ್ ನಮೋಶಿ ಅವರ ಸೂಚನೆಗೆ ಮಧು ಬಂಗಾರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, 2015ರ ಮೊದಲು ಖಾಲಿಯಿದ್ದ ಬೋಧಕ (Teaching), ಬೋಧಕೇತರ ಹುದ್ದೆಗಳ(Non Teaching)ಭರ್ತಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. 2016ರಿಂದ 2020ರವರೆಗೆ ಖಾಲಿ ಇದ್ದ ಪ್ರೌಢಶಾಲೆಗಳ 4,521 ಬೋಧಕ, ಪಿಯು ಕಾಲೇಜುಗಳ 267 ಉಪನ್ಯಾಸಕರ ಹುದ್ದೆ ಭರ್ತಿ ಮಾಡಲು ಅನುಮೋದನೆ ಕೋರಿ ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ, ಶೈಕ್ಷಣಿಕ ವರ್ಷವನ್ನು ಪರಿಗಣಿಸಿ, ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದಾರೆ.

ಇದನ್ನೂ ಓದಿ: Mangalore Goa Vande Bharat : ಈ ದಿನದಿಂದ ಮಂಗಳೂರು-ಗೋವಾ ನಡುವೆ ಸಂಚರಿಸಲಿದೆ ವಂದೇ ಭಾರತ್ ರೈಲು

Advertisement

Advertisement
Advertisement
Advertisement