ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Government Employee: ನಿವೃತ್ತ ಸರ್ಕಾರಿ ನೌಕರರೇ ಇತ್ತ ಗಮನಿಸಿ - ನಿಮಗಾಗಿ ಬಂದಿದೆ ಸರ್ಕಾರದ ಹೊಸ ಸುತ್ತೋಲೆ!!

02:04 PM Dec 30, 2023 IST | ಅಶ್ವಿನಿ ಹೆಬ್ಬಾರ್
UpdateAt: 02:04 PM Dec 30, 2023 IST
Advertisement

Government Employee: ಕರ್ನಾಟಕ ಸರ್ಕಾರ ನಿವೃತ್ತ ಸರ್ಕಾರಿ ನೌಕರರ (Government Employee)ವಿರುದ್ಧ ನ್ಯಾಯಾಂಗ ವ್ಯವಹರಣೆಯನ್ನು ಹೂಡುವಲ್ಲಿ ಕಾಲಮಿತಿ ಅನ್ವಯವಾಗುವ ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಿದೆ.

Advertisement

ಈ ಸುತ್ತೋಲೆ ನಿವೃತ್ತ ಸರ್ಕಾರಿ ನೌಕರರ ವಿರುದ್ಧ ನ್ಯಾಯಾಂಗ ವ್ಯವಹರಣೆಯನ್ನು ಹೂಡುವಲ್ಲಿ ಕಾಲಮಿತಿ ಅನ್ವಯವಾಗುವ ಕುರಿತು ವಿಷಯಗಳನ್ನೊಳಗೊಂಡಿದೆ. ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ಇಲ್ಲವೇ ಮರುನೇಮಕಾತಿಯ ಅವಧಿಯಲ್ಲಿ ಘೋರ ದುರ್ನಡತೆ ಅಥವಾ ಕರ್ತವ್ಯ ನಿರ್ಲಕ್ಷತೆ ಎಸಗಿರುವುದು. ಇದರ ಜೊತೆಗೆ ಸರ್ಕಾರಕ್ಕೆ ಅರ್ಥಿಕ ನಷ್ಟವನ್ನುಂಟು ಮಾಡಿದ ಆರೋಪವು ಇಲಾಖಾ ನ್ಯಾಯಾಂಗ ವ್ಯವಹರಣೆಯಲ್ಲಿ ಸಾಬೀತು ಆದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 214ರಲ್ಲಿ ಅವರ ಪಿಂಚಣಿಯನ್ನು ತಡೆಹಿಡಿಯುವ ಇಲ್ಲವೇ ಹಿಂಪಡೆಯುವ ಅಧಿಕಾರ ಸರ್ಕಾರಕ್ಕಿದೆ ಎಂದು ಹೇಳಿದೆ.

ಉದ್ದೇಶಿತ ಇಲಾಖಾ ಅಥವಾ ನ್ಯಾಯಾಂಗ ವ್ಯವಹರಣೆಯನ್ನು ಸರ್ಕಾರಿ ನೌಕರನು ನಿವೃತ್ತನಾಗುವುದಕ್ಕೂ ಮುಂಚೆ ಹೂಡಿರದೆ ಇದ್ದರೆ ಯಾವ ಘಟನೆ ಅಂತಹ ವ್ಯವಹರಣೆ ಹೂಡುವುದಕ್ಕೆ ಮುಂಚಿನ ನಾಲ್ಕು ವರ್ಷಗಳಿಗಿಂತ ಹೆಚ್ಚಿನ ಅವಧಿಯಲ್ಲಿ ನಡೆದಿದೆಯೋ ಇಂತಹ ಘಟನೆಯ ಸಂಬಂಧದಲ್ಲಿ ಹೂಡತಕ್ಕದ್ದಲ್ಲ ಎಂದು ತಿಳಿಸಿದೆ. ನಿಯಮ 214ರ ಉಪನಿಯಮ (3) ರಲ್ಲಿ ವಿಧಿಸಲಾದ ನಾಲ್ಕು ವರ್ಷಗಳ ಕಾಲಮಿತಿ ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಹೂಡಿದ ಇಲಾಖಾ ವಿಚಾರಣೆ ಅಥವಾ ನ್ಯಾಯಾಂಗ ವ್ಯವಹರಣೆಗಳು ಮತ್ತು ಸೇವೆಯಿಂದ ನಿವೃತ್ತಿ ಹೊಂದಿದ ಬಳಿಕ ನಿಯಮದಡಿಯಲ್ಲಿ ಮುಂದುವರೆದಿದೆ. ವ್ಯವಹರಣೆಯಲ್ಲಿ ಆತನು ದೋಷಿಯೆಂದು ಸಾಬೀತಾದಲ್ಲಿ ಅತನ ಪಿಂಚಣಿಯನ್ನು ಹಿಂಪಡೆಯುವ ಅಥವಾ ತಡೆಹಿಡಿಯುವ ಕ್ರಮದ ಮೇಲೆ ಪರಿಣಾಮ ಬೀರುತ್ತದೆ.

Advertisement

ಇದನ್ನು ಓದಿ: Business Idea: ಒಂದೇ ಒಂದು ಎಮ್ಮೆಯಿಂದ ತಿಂಗಳಿಗೆ 8 ಲಕ್ಷ ಅದಾಯನ!

ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗ ಇಲ್ಲವೇ ಮರುನೇಮಕಾತಿ ಅವಧಿಯಲ್ಲಿ ಎಸಗಿದ ದುರ್ನಡತೆ ಅಥವಾ ಕರ್ತವ್ಯ ನಿರ್ಲಕ್ಷತೆಯ ಅಪರಾಧಕ್ಕಾಗಿ ಅವರ ಮೇಲೆ ಕ್ರಿಮಿನಲ್‌ ಮೊಕದ್ದಮೆಯನ್ನು ನಡೆಸುವಲ್ಲಿ ಇಲ್ಲವೇ ಅವರು ಸರ್ಕಾರಕ್ಕೆ ಉಂಟುಮಾಡಿದ ಆರ್ಥಿಕ ನಷ್ಟವನ್ನು ಅವರ ಪಿಂಚಣಿಯೇತರ ಆಸ್ತಿಯಿಂದ ವಸೂಲು ಮಾಡಲು ಅಂತಹ ನೌಕರರ ಮೇಲೆ ಸಿವಿಲ್ ವ್ಯವಹರಣೆಯನ್ನು ಹೂಡುವಲ್ಲಿ ನಿಯಮ 214(3) ರಲ್ಲಿ ತಿಳಿಸಿದ ಕಾಲಮಿತಿಯ ನಿರ್ಬಂಧ ಅನ್ವಯವಾಗುವುದಿಲ್ಲ. ಎಲ್ಲಾ ಆಡಳಿತ ಇಲಾಖೆಗಳು ಸೇವೆಯಿಂದ ನಿವೃತ್ತಿ ಹೊಂದಿರುವ ಸರ್ಕಾರಿ ನೌಕರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಯನ್ನು ಹೂಡುವ ಪ್ರಸ್ತಾವನೆಗಳನ್ನು ಅಥವಾ ಅವರು ಸರ್ಕಾರಕ್ಕೆ ಉಂಟುಮಾಡಿದ ಆರ್ಥಿಕ ನಷ್ಟವನ್ನು ಅವರ ಪಿಂಚಣಿಯೇತರ ಆಸ್ತಿಯಿಂದ ವಸೂಲು ಮಾಡಲು ಅವರ ವಿರುದ್ಧ ಸಿವಿಲ್ ಮೊಕದ್ದಮೆಯನ್ನು ಹೂಡುವ ಪ್ರಸ್ತಾವನೆಗಳನ್ನು ಇತ್ಯರ್ಥ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Advertisement
Advertisement