ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Karnataka Assembly: ನಯನಾ ಮೋಟಮ್ಮಗೆ ಟಾಂಗ್- 'ಏನಿಲ್ಲಾ ಏನಿಲ್ಲಾ ಮೂಡಿಗೆರೆಗೇ ಏನಿಲ್ಲಾ... ಏನೇನಿಲ್ಲಾ' ಎಂದು ಸದನಲ್ಲಿ ಹಾಡು ಹೇಳಿದ ಬಿಜೆಪಿ ಶಾಸಕರು !!

Karnataka Assembly: ರಾಜ್ಯದಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿನ ಚರ್ಚೆಗಳು ತಾರಕಕ್ಕೇರಿದೆ. ನಾಡಿನ ಜ್ವಲಂತ ಸಮಸ್ಯೆಗಳನ್ನು ಬಿಟ್ಟು ಬರೀ ಹಗರಣಗಳ ವಿಚಾರವನ್ನೇ ಕೆದಕಿ ಗಬ್ಬೆಬ್ಬಿಸುತ್ತಿದ್ದಾರೆ
11:58 AM Jul 20, 2024 IST | ಸುದರ್ಶನ್
UpdateAt: 12:51 PM Jul 20, 2024 IST
Advertisement

Karnataka Assembly: ರಾಜ್ಯದಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿನ ಚರ್ಚೆಗಳು ತಾರಕಕ್ಕೇರಿದೆ. ನಾಡಿನ ಜ್ವಲಂತ ಸಮಸ್ಯೆಗಳನ್ನು ಬಿಟ್ಟು ಬರೀ ಹಗರಣಗಳ ವಿಚಾರವನ್ನೇ ಕೆದಕಿ ಗಬ್ಬೆಬ್ಬಿಸುತ್ತಿದ್ದಾರೆ ಈ ಬಿಜೆಪಿ ನಾಯಕರು. ಹೀಗೆ ಸರ್ಕಾರದ ವಿರುದ್ಧ ಬಾವಿಗಿಳಿದು ಪ್ರತಿಭಟಿಸಿದ ನಾಯಕರು ಹಾಡಿನ ಮೂಲಕ ಮೂಡಿಗೆರೆ(Mudigere) ಶಾಸಕಿ ನಯನ ಮೋಟಮ್ಮನ(MLA Nayana Motamma) ಕಾಲೆಳೆದಿದ್ದಾರೆ.

Advertisement

ಮುಂಗಾರು ಅಧಿವೇಶನ ಅರ್ಥವಿಲ್ಲದ ಅಧಿವೇಶನವಾಗಿದೆ. ವಿಪಕ್ಷಗಳಂತೂ ರಾಜ್ಯದಲ್ಲಿ ಬೇರಾವ ವಿಚಾರಗಳೇ ಇಲ್ಲವೆಂಬಂತೆ ಮುಡಾ ಹಗರಣ(Muda Scam) ಹಾಗೂ ವಾಲ್ಮೀಕಿ ಹಗರಣಗಳ(Valmiki Scam) ವಿಚಾರವೊಂದನ್ನೇ ಎತ್ತಿ ಎತ್ತಿ ಕೋಲಾಹಲ ಎಬ್ಬಿಸುತ್ತಿವೆ. ಇದರಿಂದ ಆಡಳಿತ ಪಕ್ಷ, ವಿರೋಧ ಪಕ್ಷಗಳು ಬದ್ಧ ವೈರಿಗಳಂತೆ ಕಿತ್ತಾಡುತ್ತಿವೆಯೇ ವಿನಃ ಯಾವ ಆರೋಗ್ಯಕರ ಚರ್ಚೆಗಳು ನಡೆಯುತ್ತಿಲ್ಲ. ಒಟ್ಟಿನಲ್ಲಿ ಸದನದೊಳಗಿರುವವರು ನಮ್ಮನ್ನು ಇಲ್ಲಿಗೆ ಆರಿಸಿ ಕಳುಹಿಸಿದ ನಾಡಿನ ಜನ ನೋಡುತ್ತಿರುತ್ತಾರೆ ಎಂಬ ಪರಿಜ್ಞಾನವೂ ಇಲ್ಲದೆ ಬಾವಿಗಿಳಿದು ಹಾಡು ಹೇಳುತ್ತಾ, ಚಪ್ಪಾಳೆ ಹಾಕುತ್ತಾ, ಕೇಕೆ ಹೊಡೆಯುತ್ತ ಮನ ಬಂದಂತೆ ವರ್ತಿಸುತ್ತಿದ್ದಾರೆ. ಈ ವೇಳೆ ಬಿಜೆಪಿ ನಾಯಕರನ್ನು ತರಾಟೆ ತೆಗೆದುಕೊಳ್ಳಲು ಮುಂದಾದ ನಯನ ಮೋಟಮ್ಮನಿಗೆ ಅವರೆಲ್ಲರಲ್ಲೂ ಹಾಡಿನ ಮೂಲಕ ಕಾಲೆಳೆದಿದ್ದಾರೆ.

Advertisement

ಹೌದು, ಬಿಜೆಪಿಗರೇ ನಿಮಗೆ ಆತ್ಮಸಾಕ್ಷಿ ಅನ್ನೋದು ಇದ್ದರೆ ನಿಮ್ಮ ನಿಮ್ಮ ಸೀಟುಗಳಿಗೆ ಬಂದು ಕೂತುಕೊಳ್ಳಿ ಎಂದು ನಯನಾ ಅವರು ಅಬ್ಬರಿಸಿದಾಗ ಸದನದ ಬಾವಿಯೊಳಗಿದ್ದ ಬಿಜೆಪಿ ನಾಯಕರೆಲ್ಲರೂ 'ಏನಿಲ್ಲಾ, ಏನಿಲ್ಲಾ.. ಮೂಡಿಗೆರೆಗೇ ಏನಿಲ್ಲಾ.. ಏನೇನಿಲ್ಲಾ... ಮೂಡಿಗೆರೆಗೆ ಏನೇನಿಲ್ಲಾ..' ಎಂದು ಹಾಡು ಹೇಳಿದ್ದಾರೆ. ಈ ವೇಳೆ ಸಭಾಧ್ಯಕ್ಷರು ಇದೇನು ನಾಟಕ ಕಂಪೆನಿಯಾ? ಇಲ್ಲಾ ನಿಮ್ಹಾನ್ಸ್ ಆಸ್ಪತ್ರೆಯಾ ? ಎಂದು ಪ್ರಶ್ನಿಸಿದ್ದಾರೆ. ಆದರೂ ಕೂಡ ಯಾವ ನಾಯಕರು ಇದಕ್ಕೆ ಸೊಪ್ಪು ಹಾಕದೆ ತಮ್ಮ ವರಸೆ ಮುಂದುವರೆಸಿದ್ದಾರೆ.

ನಾಡಿನಲ್ಲಿ ಮಳೆ ಅಬ್ಬರ ಹೆಚ್ಚಾಗಿ ಜನರ ಜೀವನ ಅವ್ಯವಸ್ಥೆಯಿಂದ ಕೂಡಿದೆ. ಗುಡ್ಡ ಕುಸಿದು ಜನರ ಪ್ರಾಣ ಹೋಗುತ್ತಿದೆ. ಡೆಂಗ್ಯೂ ಜ್ವರಕ್ಕೆ ಜನ ಸಾಯುತ್ತಿದ್ದಾರೆ. ಹೀಗೆ ಆದರೆ ಈ ನಾಯಕರಿಗೆ ಅದಾವ ಪರಿಜ್ಞಾನ ಇಲ್ಲವೇ? ಅಜ್ಞಾನಿಗಳ ಹಾಗೆ ವರ್ತಿಸುತ್ತಿದ್ದಾರಲ್ಲಾ? ಜನರು ಕೂಡ ಇಂತವರೇ ಬಿಡಿ, ಪ್ರತಿ ಸಲವೂ ಇಂತವರನ್ನೇ ಆರಿಸಿ ಕಳಹಿಸುತ್ತಾರಲ್ಲಾ? ಭವಿಷ್ಯದ ಬಗ್ಗೆ ಒಬ್ಬರೂ ಯೋಚಿಸಲ್ಲ. ಅಧಿಕಾರ, ಅಧಿಕಾರ ಎಂದು ಸಾಯುವವರೆ. ನಿಜಕ್ಕೂ ಸದನೊಳಗೆ ಹೀಗಾಗುವುದು ವಿಷಾದವೇ ಸರಿ.

Varamahalakshmi Festival 2024: ಮಹಿಳೆಯರ ವರಮಹಾಲಕ್ಷ್ಮಿ ಹಬ್ಬದ ತಯಾರಿ ಹೀಗಿರಲಿ! ಲಕ್ಶ್ಮೀ ಆಶೀರ್ವಾದ ಪಡೆಯಿರಿ!

Related News

Advertisement
Advertisement