For the best experience, open
https://m.hosakannada.com
on your mobile browser.
Advertisement

Karnataka Anganwadi Recruitment 2024: ಕರ್ನಾಟಕದ 6 ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ಅಂಗನವಾಡಿ ಹುದ್ದೆಗಳ ನೇಮಕ!!!

12:50 PM Jan 21, 2024 IST | ಅಶ್ವಿನಿ ಹೆಬ್ಬಾರ್
UpdateAt: 12:50 PM Jan 21, 2024 IST
karnataka anganwadi recruitment 2024  ಕರ್ನಾಟಕದ 6 ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ಅಂಗನವಾಡಿ ಹುದ್ದೆಗಳ ನೇಮಕ
Advertisement

Anganwadi Recruitment 2024: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯದ 6 ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆಗಳನ್ನು (Karnataka anganwadi recruitment 2024)ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ.ಸರ್ಕಾರಿ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

Advertisement

ಪ್ರಸ್ತುತ ವಿವಿಧ 6 ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಂಗನವಾಡಿ ಹುದ್ದೆಗಳ ನೇಮಕಾತಿ ನಡೆಯಲಿರುವ 6 ಜಿಲ್ಲೆಗಳು ಇಲ್ಲಿವೆ.

Advertisement

* ಬೆಂಗಳೂರು ಗ್ರಾಮೀಣ ಜಿಲ್ಲೆ

* ಬೆಂಗಳೂರು ನಗರ ಜಿಲ್ಲೆ

* ಬೆಳಗಾವಿ

* ಬೀದರ್

* ಹಾವೇರಿ

* ತುಮಕೂರು

ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದ್ದು,ಈ ಮೇಲಿನ ಎಲ್ಲಾ ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಹುದ್ದೆಗಳು ಇದ್ದು, ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 15.02.24 ಕೊನೆಯ ದಿನವಾಗಿದೆ.

ಹುದ್ದೆಯ ವಿವರ:

ಸಂಸ್ಥೆಯ ಹೆಸರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ವೆಬ್‌ಸೈಟ್‌ ವಿಳಾಸ: https://anganwadirecruit.kar.nic.in/

ವೇತನ: INR 6000 to 10000 /Month

ಅರ್ಹತಾ ಮಾನದಂಡಗಳು:

* ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 12ನೇ ತರಗತಿ / ಡಿಪ್ಲೊಮ ಇಸಿಸಿಇ / ತತ್ಸಮಾನ ಶಿಕ್ಷಣ ಯಾವುದಾದರೊಂದು ತೇರ್ಗಡೆ ಹೊಂದಿರಬೇಕು.

* ಅಂಗನವಾಡಿ ಸಹಾಯಕಿ ಹುದ್ದೆಗೆ 10ನೇ ತರಗತಿ ತೇರ್ಗಡೆ ಹೊಂದಿರಬೇಕು.

* ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷ ಆಗಿದ್ದು, ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು.

ಅರ್ಜಿ ಹಾಕಲು ಬೇಕಾದ ಅಗತ್ಯ ದಾಖಲೆಗಳು

* ಜನನ ಪ್ರಮಾಣ ಪತ್ರ ಅಥವಾ ಜನ್ಮ ದಿನಾಂಕ ಇರುವ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ.

* ವಾಸಸ್ಥಳ ದೃಢೀಕರಣ ಪತ್ರ.

* ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ.

* ಅಂಗನವಾಡಿ ಕಾರ್ಯಕರ್ತೆ ನೇಮಕಾತಿಗಳಲ್ಲಿ ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.(ಈ ಅಭ್ಯರ್ಥಿಗಳಾಗಿದ್ದಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ)

* ಮೀಸಲಾತಿ ಮತ್ತು ಜಾತಿ ಪ್ರಮಾಣ ಪತ್ರ.

* ವಿಧವೆಯಾಗಿದ್ದಲ್ಲಿ ಪತಿಯ ಮರಣ ಪ್ರಮಾಣ ಪತ್ರ.

* ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದರೆ ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.

* ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ.

* ವಿಚ್ಛೇದಿತರಾಗಿದ್ದಲ್ಲಿ ಪ್ರಮಾಣ ಪತ್ರ.

ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸುವ ವಿಧಾನ

# ಅಪ್ಲಿಕೇಶನ್‌ ಸಲ್ಲಿಸಲು ವೆಬ್‌ ವಿಳಾಸ https://karnemakaone.kar.nic.in ಕ್ಕೆ ಭೇಟಿ ನೀಡಬೇಕು.

# ಉದ್ಯೋಗ ಬಯಸುವ ಜಿಲ್ಲೆ>> ಶಿಶು ಅಭಿವೃದ್ಧಿ ಯೋಜನೆ >> ನೇಮಕಾತಿ ಬಯಸುವ ಹುದ್ದೆಯನ್ನು ಕ್ರಮವಾಗಿ ಆಯ್ಕೆ ಮಾಡಿಕೊಳ್ಳಿ.

# ಇದಾದ ಬಳಿಕ ನೀವು ಅರ್ಜಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಬೇಕು.

# ಆನ್‌ಲೈನ್‌ ಅರ್ಜಿ ಫಾರ್ಮ್‌ ಓಪನ್‌ ಆಗಲಿದ್ದು, ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

# ಅಗತ್ಯ ದಾಖಲೆಗಳನ್ನು ಆಯಾ ಹೆಸರಿನ ಮುಂದೆ ಇರುವ ಆಯ್ಕೆ ಬಟನ್‌ ಕ್ಲಿಕ್‌ ಮಾಡಿ ಅಪ್‌ಲೋಡ್ ಮಾಡಬೇಕು.

Advertisement
Advertisement
Advertisement