Karkala: ಕರಾವಳಿ 'ಕಂಬಳ' ಪ್ರಾಣಿ ಹಿಂಸೆ, ಅದಕ್ಕೆ ಯಾರೂ ಬೆಂಬಲ ನೀಡಬೇಡಿ - ಜೈನ ಮುನಿಗಳಿಂದ ಶಾಕಿಂಗ್ ಹೇಳಿಕೆ !!
Karkala: ಕರಾವಳಿಯ ಸಾಂಪ್ರದಾಯಿಕ ಆಟವಾದ 'ಕಂಬಳ'ಕ್ಕೆ ಈಗೀಗ ಭಾರೀ ಜನಪ್ರಾಯತೆ ಬರುತ್ತಿದೆ. ಬೆಂಗಳೂರಿನಲ್ಲೂ ಈ ಆಟ ಎಲ್ಲರ ಮನಗೆದ್ದಿದೆ. ಕೋರ್ಟ್ ನಿಂದ, ಪ್ರಾಣಿ ಪ್ರಿಯರಿಂದ ಕೆಲವು ವರ್ಷಗಳ ಹಿಂದೆ ಕೊಂಚ ಅಡೆತಡೆ ಆದರೂ ನಂತರ ಅದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಆದರೀಗ ಕಂಬಳ ಕುರಿತು ಜೈನ ಮುನಿಯೊಬ್ಬರು ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದು ಪ್ರಾಣಿ ಹಿಂಸೆ ಇರುವ ಕಂಬಳಕ್ಕೆ ಜೈನ ಸಮುದಾಯ ಬೆಂಬಲ ನೀಡಬಾರದು ಎಂದು ಹೇಳಿದ್ದಾರೆ.
ಇದನ್ನು ಓದಿ: Triple Talaq: ಸ್ಕಾರ್ಪಿಯೋ ಕಾರು ಕೊಡದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ! ಮುಂದೇನಾಯ್ತು?
ಹೌದು, 108 ಮುನಿಶ್ರೀ ಅಮೋಘ ಕೀರ್ತಿ ಮಹಾರಾಜ್ ಅವರು, ಕಂಬಳ ಕಂಡರೆ ನಮಗೆ ದುಃಖವಾಗುತ್ತದೆ. ಜೈನರು ಕಂಬಳದಲ್ಲಿ ಭಾಗವಹಿಸಬಾರದು. ಯಾರು ಕಂಬಳವನ್ನು ಬೆಂಬಲಿಸುವರೋ ಅವರು ಪಾರ್ಶ್ವನಾಥ, ಮಹಾವೀರ ಹಾಗೂ ಜೈನ ಧರ್ಮದ ಅನುಯಾಯಿಗಳು ಆಗಲಾರರು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕಾರ್ಕಳ(Karkala) ಕೆರೆ ಬಸದಿಯ ಪಂಚಕಲ್ಯಾಣ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರ ಬದುಕಲು ಬಿಡಿ ಎನ್ನುವುದನ್ನು ಜೈನ ಧರ್ಮ ಸಾರುತ್ತದೆ. ಅಹಿಂಸೆ, ಕರುಣೆ ಬಗ್ಗೆ ಪ್ರತಿಪಾದಿಸುವ ಜೈನ ಸಮುದಾಯ ಪ್ರಾಣಿ, ಪಕ್ಷಿಗಳಿಗೆ ಹಿಂಸೆ ನೀಡುವುದನ್ನು ಬೆಂಬಲಿಸಬಾರದು, ಈ ಹಿನ್ನೆಲೆಯಲ್ಲಿ ಜೈನ ಸಮುದಾಯ ಕಂಬಳಕ್ಕೆ ಬೆಂಬಲ ನೀಡುವುದು ತಪ್ಪು, ಇನ್ಮುಂದೆ ಬೆಂಬಲ ನೀಡಬಾರದು ಎಂದು ಹೇಳಿದ್ದಾರೆ.