For the best experience, open
https://m.hosakannada.com
on your mobile browser.
Advertisement

Vechicle Tax: ವಾಹನ ತೆರಿಗೆ ವಿನಾಯಿತಿ - ಸರ್ಕಾರದಿಂದ ಸದ್ಯದಲ್ಲೇ ಗುಡ್ ನ್ಯೂಸ್

11:03 AM Dec 26, 2023 IST | ಅಶ್ವಿನಿ ಹೆಬ್ಬಾರ್
UpdateAt: 11:08 AM Dec 26, 2023 IST
vechicle tax  ವಾಹನ ತೆರಿಗೆ ವಿನಾಯಿತಿ   ಸರ್ಕಾರದಿಂದ ಸದ್ಯದಲ್ಲೇ ಗುಡ್ ನ್ಯೂಸ್

Vechicle Tax: ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಮುಂದಾಗಿರುವ ರಾಜ್ಯ ಸರ್ಕಾರ (State Government)ನಾಲ್ಕೂ ನಿಗಮಗಳಿಗೆ ಪ್ರಸಕ್ತ ಸಾಲಿನ ಮೋಟಾರು ವಾಹನ ತೆರಿಗೆ ವಿನಾಯಿತಿ (Tax Exemption)ನೀಡುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗಿದೆ.

Advertisement

ಶಕ್ತಿ ಯೋಜನೆಯ ಸಲುವಾಗಿ ನಿಗಮಗಳಿಂದ ವ್ಯಯಿಸಲಾದ ಮೊತ್ತದ ಮರುಪಾವತಿ ತಡವಾಗುತ್ತಿರುವ ಹಿನ್ನೆಲೆ ನಿಗಮಗಳು ಕೊಂಚಮಟ್ಟಿಗೆ ಆರ್ಥಿಕ ಸಮಸ್ಯೆ ಎದುರಿಸುತ್ತಿವೆ. ಹೀಗಾಗಿ, ನಿಗಮಗಳಿಗೆ ಆರ್ಥಿಕವಾಗಿ ಬೆಂಬಲ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವ ಬಗ್ಗೆ ಚರ್ಚೆ ನಡೆಸುತ್ತಿದೆ.

ಸಾರಿಗೆ ಇಲಾಖೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddarmayya)ಅವರಿಗೆ ಮೋಟಾರು ವಾಹನ ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಲ್ಲದೇ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy)ಕೂಡ ಈ ಕುರಿತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಕೆಎಸ್ಸಾರ್ಟಿಸಿ 243.52 ಕೋಟಿ ರು., ಬಿಎಂಟಿಸಿ 119.88 ಕೋಟಿ ರು., ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ 103.91 ಕೋಟಿ ರು ಹಾಗೂ ಕೆಕೆಆರ್‌ಟಿಸಿ 114.16 ಕೋಟಿ ರು. ಸೇರಿ ಒಟ್ಟು 541.87 ಕೋಟಿ ರು. ತೆರಿಗೆ ಪಾವತಿ ಮಾಡಬೇಕಾಗುತ್ತದೆ.

Advertisement

ಇದನ್ನು ಓದಿ: Mangaluru Vande Bharat Rail: ವಂದೇ ಭಾರತ್‌ ರೈಲು ಮಂಗಳೂರು-ಮಡಗಾಂವ್‌ ಗೆ ಇಂದಿನಿಂದ ಪ್ರಾಯೋಗಿಕ ಸಂಚಾರ!

Advertisement
Advertisement