ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Kantara Chapter- 1: ಕಾಂತಾರ-1 ಡಿಜಿಟಲ್‌ ಹಕ್ಕನ್ನು ಕೋಟಿಗಟ್ಟಲೆ ದುಡ್ಡು ಕೊಟ್ಟು ಬಾಚಿದ ಅಮೆಜಾನ್‌ ಪ್ರೈಮ್‌

Kantara Chapter- 1: ಕಾಂತಾರ ಚಾಪ್ಟರ್ 1 ಪ್ರೀಕ್ವೆಲ್' ಸಿನಿಮಾದ ಪೋಸ್ಟ್ ಥಿಯೇಟ್ರಿಕಲ್ ಡಿಜಿಟಲ್ ರೈಟ್ಸ್‌ ಬರೋಬ್ಬರಿ 125 ಕೋಟಿ ರೂಪಾಯಿಗೆ ಪ್ರೈಮ್‌ಗೆ ಮಾರಾಟವಾಗಿರುವುದಾಗಿ ಪಿಂಕ್ ವಿಲ್ಲಾ ವರದಿ ಮಾಡಿದೆ. ಕಾಂತರಾ ಸೀಕ್ವೆನ್ಸ್ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿ ಎಲ್ಲಾ ಭಾಷೆಯ ಡಿಜಿಟಲ್ ರೈಟ್ಸ್ ಪ್ರೈಮ್ ಗೆ  ನೀಡಲಾಗಿದೆ.
02:09 PM May 11, 2024 IST | ಸುದರ್ಶನ್
UpdateAt: 02:12 PM May 11, 2024 IST
Advertisement

Kantara Chapter- 1: ಎರಡು ವರ್ಷಗಳ ಹಿಂದೆ ಇಡೀ ಕನ್ನಡ ಚಿತ್ರರಂಗದಲ್ಲಿಯೇ ಹೊಸ ಇತಿಹಾಸ ಸೃಷ್ಟಿಸಿದ್ದ ಕಾಂತರಾ ಚಿತ್ರ(Kantara Movie), ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ(Sandalwood )ತಿರುಗಿ ನೋಡುವಂತೆ ಮಾಡಿತ್ತು. ಸಿನಿಮಾ ತೆರೆಕಂಡು ಎರಡು ವರ್ಷವಾದರೂ ಅದು ಸೃಷ್ಟಿಸಿದ ಹವಾ ಮಾತ್ರ ಈಗಲೂ ಹಾಗೆ ಇದೆ.

Advertisement

ಈ ಚಿತ್ರ ಬರೋಬ್ಬರಿ 20 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗಿತ್ತು. ಬಳಿಕ ಇದು ವಿಶ್ವದಾದ್ಯಂತ ತೆರೆಕಂಡು 400 ಕೋಟಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿತ್ತು. ಇಷ್ಟು ಮಾತ್ರವಲ್ಲದೆ ಇದರ ಇನ್ನೊಂದು ಸೀಕ್ವೆನ್ಸ್ ಹೊರಬರುವುದರ ಕುರಿತು ಮಾಹಿತಿ ಹೊರಬಿದ್ದಾಗ ರಿಷಬ್ ಶೆಟ್ಟಿ ಅಭಿಮಾನಿಗಳಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ: ಗಂಡಸರಿಗಿಂತ ಮಹಿಳೆಯರಿಗೆ ಮೂಡ್ ಬರೋದು ಹೆಚ್ಚು ಅಂತೆ! ಕಾರಣ ಹೀಗಿದೆ ನೋಡಿ

Advertisement

ಈಗಾಗಲೇ ಅಭಿಮಾನಿಗಳು ಕಾಂತಾರ ಚಾಪ್ಟರ್ 1 ಕುರಿತಾಗಿ ಬಹುದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇನ್ನು ಈ ಚಿತ್ರದ ಚಿತ್ರೀಕರಣಕ್ಕಾಗಿ ಕುಂದಾಪುರದ ಹಳ್ಳಿಯೊಂದರಲ್ಲಿ ಬೃಹತ್ ಸೆಟ್ಟನ್ನು ಹಾಕಲಾಗಿದೆ.

ಕಾಂತರಾ ಚಿತ್ರದ ಪ್ರಿಕ್ವೇಲ್ ಸಿನಿಮಾದ ಡಿಜಿಟಲ್ ಸ್ಟ್ರೀಮ್( Digital stream) ಬಗ್ಗೆ ಇದೀಗ ಎಲ್ಲೆಡೆ ಸುದ್ದಿಯಾಗ್ತಿದೆ. ಅಮೆಜಾನ್ ಪ್ರೈಮ್(Amazan prime) ಸಿನಿಮಾದ ಡಿಜಿಟಲ್ ರೈಟ್ಸನ್ನು ಈಗಾಗಲೇ ಖರೀದಿಸಿದೆ. ವರ್ಷದ ಆರಂಭದಲ್ಲಿಯೇ ಅಮೇಜಾನ್ ಪ್ರೈಮ್ ಕಾಂತಾರ ಚಾಪ್ಟರ್ 1(Kantara Chapter 1) ಘೋಷಿಸಿತ್ತು.

ಇದನ್ನೂ ಓದಿ: ಪರ ಪುರುಷರೊಂದಿಗೆ ರೆಡ್ ಹ್ಯಾಂಡ್ ಪತಿ ಕೈಗೆ ಸಿಕ್ಕಿಬಿದ್ದ ವೈದ್ಯೆ ಪತ್ನಿ, ಮುಂದೆ ಆಗಿದ್ದೇನು?

ಕಾಂತಾರ ಚಾಪ್ಟರ್ 1(Kantara Chapter 1)ಪ್ರೀಕ್ವೆಲ್' ಸಿನಿಮಾದ ಪೋಸ್ಟ್ ಥಿಯೇಟ್ರಿಕಲ್ ಡಿಜಿಟಲ್ ರೈಟ್ಸ್(Digital Rights) ಬರೋಬ್ಬರಿ 125 ಕೋಟಿ ರೂಪಾಯಿಗೆ ಪ್ರೈಮ್‌ಗೆ ಮಾರಾಟವಾಗಿರುವುದಾಗಿ ಪಿಂಕ್ ವಿಲ್ಲಾ ವರದಿ ಮಾಡಿದೆ. ಕಾಂತರಾ ಸೀಕ್ವೆನ್ಸ್ 1(Kantara chapter 1)ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿ ಎಲ್ಲಾ ಭಾಷೆಯ ಡಿಜಿಟಲ್ ರೈಟ್ಸ್ ಪ್ರೈಮ್ ಗೆ  ನೀಡಲಾಗಿದೆ.

ಇದನ್ನೂ ಓದಿ: EPFO for Foreign Workers: ಇಂತವರಿಗಿನ್ನು ಪೆನ್ಶನ್ ಮತ್ತು ಪಿಎಫ್ ಇಲ್ಲ !!

Advertisement
Advertisement