Kannuru: ಭರ್ಜರಿ 1ಕೆಜಿ ಚಿನ್ನ ಗುದನಾಳದಲ್ಲಿ ಅಡಗಿಸಿಟ್ಟುಕೊಂಡು ಬಂದ ಗಗನಸಖಿ; ಇದು ದೇಶದಲ್ಲೇ ಮೊದಲ ಪ್ರಕರಣ
Kannuru: ಮಸ್ಕತ್‌ನಿಂದ ಕಣ್ಣೂರಿಗೆ ಸುಮಾರು ಒಂದು ಕೆಜಿ ಚಿನ್ನವನ್ನು ತನ್ನ ಗುದನಾಳದಲ್ಲಿ ಬಚ್ಚಿಟ್ಟುಕೊಂಡು ಅಕ್ರಮ ಸಾಗಾಟಕ್ಕೆ ಯತ್ನಿಸಿದ ಆರೋಪದಲ್ಲಿ ಇದೀಗ ಗಗನಸಖಿಯೊಬ್ಬರನ್ನು ಬಂಧನ ಮಾಡಲಾಗಿರುವ ಕುರಿತು ಡಿಆರ್‌ಐ ಮೂಲಗಳು ತಿಳಿಸಿದೆ.
ಇದನ್ನೂ ಓದಿ: Rent Girl: ಬಾಡಿಗೆಗೆ ಸಿಗ್ತೇನೆ, ಡೇಟ್ ಗೂ ಸೈ, ವೀಕೆಂಡ್ ಗೂ ಜೈ' ಎಂದು ಎಲ್ಲದಕ್ಕೂ ರೇಟ್ ಫಿಕ್ಸ್ ಮಾಡಿದ ಭಾರತದ ಯುವತಿ !!
ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ ಕಣ್ಣೂರು) ಅಧಿಕಾರಿಗಳು ಮೇ.28 ರಂದು ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಸ್ಕತ್‌ನಿಂದ ಬಂದ ಕೋಲ್ಕತ್ತಾ ಮೂಲದ ಸುರಭಿ ಖಾತುನ್ ಎಂಬ ಕ್ಯಾಬಿನ್ ಸಿಬ್ಬಂದಿಯನ್ನು ತಡೆದಿದ್ದು, ಆಕೆಯನ್ನು ತಪಾಸಣೆ ಮಾಡಿದಾಗ ಆಕೆಯ ಗುದನಾಳದಲ್ಲಿ ಬಚ್ಚಿಟ್ಟಿದ್ದ ಸಂಯುಕ್ತ ರೂಪದಲ್ಲಿದ್ದ 960ಗ್ರಾಂ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Marriage: ಹಿಂದೂ-ಮುಸ್ಲಿಂ ಮದುವೆ ಮಾನ್ಯವಲ್ಲ- ಹೈಕೋರ್ಟ್ ಮಹತ್ವದ ತೀರ್ಪು
ನಂತರ ಗಗನಸಖಿಯನ್ನು ವಿಚಾರಣೆಗೊಳಪಡಿಸಿದಾಗ, ಆಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ನಂತರ ಕಣ್ಣೂರಿನ ಕಾರಾಗೃಹಕ್ಕೆ 14 ದಿನಗಳವರೆಗೆ ರಿಮಾಂಡ್ ಮಾಡಲಾಗಿದೆ. ಭಾರತದಲ್ಲಿ ವಿಮಾನಯಾನ ಸಿಬ್ಬಂದಿ ಕಳ್ಳಸಾಗಾಣೆ ಮಾಡಿದ ಮೊದಲ ಪ್ರಕರಣ ಇದು ಎಂದು ಹೇಳಲಾಗಿದೆ.
ಮೂಲಗಳ ಪ್ರಕರಣ, ವಿಚಾರಣೆಯಲ್ಲಿ ಈಕೆ ಈ ಹಿಂದೆ ಕೂಡಾ ಹಲವು ಬಾರಿ ಚಿನ್ನ ಕಳ್ಳಸಾಗಾಣೆ ಮಾಡಿದ್ದಾಗಿ ತಿಳಿದು ಬಂದಿದೆ. ಈ ಸ್ಮಗ್ಲಿಂಗ್ ಕೇರಳ ಮೂಲದ ವ್ಯಕ್ತಿಗಳು ಭಾಗಿಯಾಗಿರುವ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ವಿಮಾನಯಾನ ಸಂಸ್ಥೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲವೆಂದು ವರದಿಯಾಗಿದೆ.