ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Kannada Compulsory: ಶಾಲೆಗಳಲ್ಲಿ ಕನ್ನಡ ಕಡ್ಡಾಯ: ಹೊಸ ನಿಯಮ ಮುಂದಿನ ವರ್ಷವೇ ಜಾರಿ

Kannada Compulsory: ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಮಹತ್ವ ಸುತ್ತೋಲೆ ಹೊರಡಿಸಲಾಗಿದೆ.
05:05 PM Jul 11, 2024 IST | ಕಾವ್ಯ ವಾಣಿ
UpdateAt: 05:05 PM Jul 11, 2024 IST
Advertisement

Kannada Compulsory: ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಮಹತ್ವ ಸುತ್ತೋಲೆ ಹೊರಡಿಸಲಾಗಿದೆ. ಹೌದು, ಮುಂದಿನ ವರ್ಷದಿಂದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (Central Board of Secondary Education) ಅಥವಾ ಐಸಿಎಸ್ಇ (ICSE) ಅಡಿಯಲ್ಲಿ ಪ್ರಾರಂಭವಾಗುವ ಎಲ್ಲಾ ಶಾಲೆಗಳಿಗೆ ಕನ್ನಡ ಕಲಿಕೆಯ ಕಡ್ಡಾಯ (Kannada Compulsory) ಹೊಸ ನಿಯಮ (New rule) ಅನ್ವಯವಾಗಲಿದೆ.

Advertisement

ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಹೊಸ ಶಾಲೆಗಳ (new school) ಸ್ಥಾಪನೆಗೆ ಅನುಮೋದನೆ ಕೋರಿರುವ ಎಲ್ಲಾ ಅರ್ಜಿಗಳಿಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅನುಮೋದನೆ ನೀಡಿದ್ದು, ಈ ಶಾಲೆಗಳಲ್ಲಿಯೂ ಸಹ ಹೊಸ ನಿಯಮ ಜಾರಿಯಾಗಲಿದೆ.

ಇನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿರುವ ಐಸಿಎಸ್ಇ ಮಂಡಳಿ, ಇದರ ಜತೆಯಲ್ಲಿ ಪ್ರತಿಯೊಂದು ಶಾಲೆಯು ಮುಂಬರುವ ವರ್ಷದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್ಒಸಿ) ಪಡೆಯಬೇಕು ಎಂಬ ನಿಯಮವನ್ನು ಜಾರಿಗೊಳಿಸಿದೆ.

Advertisement

ಹೊಸ ನಿಯಮದ ಪ್ರಕಾರ ಶಾಲಾ ಆಡಳಿತ ಮಂಡಳಿಯು ಹೊಸ ಶಾಲೆಯನ್ನು ಸ್ಥಾಪಿಸುವಾಗ ಎನ್ಒಸಿ ಕಡ್ಡಾಯವಾಗಿ ಪಡೆಯಲೇ ಬೇಕು ಎಂದು ನಿಯಮಗಳನ್ನು ಮಾರ್ಪಾಡು ಮಾಡಲಾಗಿತ್ತು. ಮುಂದಿನ ವರ್ಷದಿಂದ ಶಾಲೆಗಳ ಆಡಳಿತ ಮಂಡಳಿಯು ಎನ್ಒಸಿ ಅರ್ಜಿ ನಮೂನೆಯಲ್ಲಿ ಕನ್ನಡ ಶಿಕ್ಷಣಕ್ಕೆ ಆದ್ಯತೆ ನೀಡುತ್ತೇವೆ ಎನ್ನುವುದನ್ನು ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಬೇಕು, ಇಲ್ಲದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ತಿಳಿಸಿತ್ತು. ಒಂದು ವೇಳೆ ಅರ್ಜಿಯಲ್ಲಿ ಶಾಲೆಯು ಕನ್ನಡವನ್ನು ಕಲಿಸುವ ಉದ್ದೇಶದ ಬಗ್ಗೆ ಸುಳ್ಳು ಹೇಳಿಕೆಗಳನ್ನು ನಮೂದಿಸಿದರೆ ಅವರ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ತಿಳಿಸಿತ್ತು.

ಇನ್ನು ಶಿಕ್ಷಣ ಇಲಾಖೆಯಲ್ಲಿ 2024-25ರ ಶೈಕ್ಷಣಿಕ ವರ್ಷದಲ್ಲಿ 164 ಹೊಸ ಶಾಲೆಗಳನ್ನು ಸ್ಥಾಪಿಸಲು ಅನುಮೋದನೆ ದೊರೆತಿದೆ. ಅದರಲ್ಲಿ ಸುಮಾರು 50 ಶಾಲೆಗಳು ಬೇರೆ ಮಂಡಳಿಗಳಿಗೆ ಸೇರಿದ್ದಾಗಿವೆ. ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿಯಲ್ಲಿ ನೋಂದಣಿಯಾಗಿರುವ ಶಾಲೆಗಳಿಗೆ ಹೊಸ ನಿಯಮದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರಾಥಮಿಕ ಮತ್ತು ಫ್ರೌಢ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಹೇಳಿಕೆ ನೀಡಿದೆ. ಆದರೆ ಇತರ ಮಂಡಳಿಗಳೊಂದಿಗೆ ನೋಂದಣಿಯಾಗಿರುವ ಶಾಲೆಗಳಿಗೆ ಇದು ಒಂದು ಸವಾಲಾಗಿದೆ. ಈ ಮಂಡಳಿಯ ಅಧಿಕಾರಿಗಳು ಸಮಸ್ಯೆಯನ್ನು ಅರಿತು ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿ ಮಂದಿನ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

Advertisement
Advertisement