For the best experience, open
https://m.hosakannada.com
on your mobile browser.
Advertisement

Kadaba: ಕುಮಾರಧಾರ ನದಿ ಮಧ್ಯೆ ಪೊದೆಯಲ್ಲಿ ಸಿಲುಕಿದ ಯುವಕನ ರಕ್ಷಣೆ

Kadaba: ಅಗ್ನಿಶಾಮಕದಳ ಮತ್ತು ಪೊಲೀಸರು ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿದ್ದು, ಇದೀಗ ಯುವಕನ್ನು ಆಸ್ಪತ್ರೆಗೆ ದಾಖಲು ಮಾಡಿದ ಘಟನೆಯೊಂದು ಕೋಡಿಂಬಾಳ ಗ್ರಾಮದ ಪುಳಿಕ್ಕುಕ್ಕು ಎಂಬಲ್ಲಿ ನಡೆದಿದೆ.
11:20 AM Jul 08, 2024 IST | ಸುದರ್ಶನ್
UpdateAt: 11:39 AM Jul 08, 2024 IST
kadaba  ಕುಮಾರಧಾರ ನದಿ ಮಧ್ಯೆ ಪೊದೆಯಲ್ಲಿ ಸಿಲುಕಿದ ಯುವಕನ ರಕ್ಷಣೆ
Advertisement

Kadaba: ಯುವಕನೋರ್ವ ಕುಮಾರಧಾರ ನದಿಯ ಮಧ್ಯಭಾಗ್ಯದಲ್ಲಿ ಸಿಲುಕಿಕೊಂಡಿರುವ ಘಟನೆಯೊಂದು ಇಂದು ಬೆಳಗ್ಗೆ ನಡೆದಿದ್ದು, ಈ ಘಟನೆ ಸಂಬಂಧ ಅಗ್ನಿಶಾಮಕದಳ ಮತ್ತು ಪೊಲೀಸರು ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿದ್ದು, ಇದೀಗ ಯುವಕನ್ನು ಆಸ್ಪತ್ರೆಗೆ ದಾಖಲು ಮಾಡಿದ ಘಟನೆಯೊಂದು ಕೋಡಿಂಬಾಳ ಗ್ರಾಮದ ಪುಳಿಕ್ಕುಕ್ಕು ಎಂಬಲ್ಲಿ ನಡೆದಿದೆ.

Advertisement

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಹೀಗಾಗಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ಯುವಕ ಪುಳಿಕುಕ್ಕು ಸೇತುವೆ ಮತ್ತು ರೈಲು ಸೇತುವೆ ಮಧ್ಯಭಾಗದಲ್ಲಿರುವ ಪೊದೆಯಲ್ಲಿ ಸಿಲುಕಿಕೊಂಡಿದ್ದು, ನಂತರ ರಕ್ಷಣೆಗೆ ಕೂಗಿದ್ದಾನೆ. ಸ್ಥಳೀಯರು ಇದನ್ನು ಗಮನಿಸಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೂಲಗಳ ಪ್ರಕಾರ ಯುವಕ ರಾತ್ರಿಯಿಂದಲೇ ಕೂಗುವ ಧ್ವನಿ ಕೇಳಿ ಬಂದಿದೆ ಎನ್ನಲಾಗಿದೆ.

Advertisement

ಅಂದ ಹಾಗೆ ಹೊಳೆಗೆ ಹಾರಿದ ಯುವಕ ಬೆಂಗಳೂರು ಮೂಲದ ರವಿಕುಮಾರ್‌ (40) ಎಂದು ಗುರುತಿಸಲಾಗಿದೆ. ಈತನ ಕೈಯಲ್ಲಿ ಹರಿತವಾದ ಆಯುಧದಿಂದ ಕೊಯ್ದುಕೊಂಡ ಹಸಿ ಗಾಯವೂ ಇದ್ದಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೋ ಅಥವಾ ಬೇರೆ ಘಟನೆ ನಡೆದಿದೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈತನ ಬ್ಯಾಗ್‌ ಬಸ್‌ಸ್ಟ್ಯಾಂಡ್‌ನಲ್ಲಿ ಪತ್ತೆಯಾಗಿದೆ. ಯುವಕನ ರಕ್ಷಣೆ ಮಾಡಲಾಗಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

Kadaba: ಯುವಕನಿಂದ ಆತ್ಮಹತ್ಯೆಗೆ ಯತ್ನ; ಕುಮಾರಧಾರ ನದಿಯ ಮಧ್ಯೆ ಸಿಲುಕಿದ ಯುವಕ, ಸಹಾಯಕ್ಕೆ ಮೊರೆ

Advertisement
Advertisement
Advertisement