Pro Kabaddi PKL-10: ಮನೆಯಂಗಳದಲ್ಲಿ ಗುಜರಾತ್ ಜೈಂಟ್ಸ್ ಶುಭಾರಂಭ, ಫಜಲ್ ಅತ್ರಾಚಲಿಯ ಹೆಬ್ಬಂಡೆ ಕೋಟೆ ಅಭೇದ್ಯ, ಪವನ್ ಶೆರಾವತ್ ವೀರಾವೇಶ !
Pro Kabaddi PKL-10: ಬಂದಿರುವಂತಹಾ ಮನೆಯಂಗಳದ ಅಭಿಮಾನಿಗಳಿಗೆ ರಸದೌತಣ ನೀಡಿದ ಗುಜರಾತ್ ಜೈಂಟ್ಸ್ ತಂಡ ತೆಲುಗು ಟೈಟಾನ್ಸ್ ತಂಡದ ಎದುರು ಗೆದ್ದು ಬೀಗಿದೆ. ಸ್ಟಾರ್ ರೈಡರ್ ಪವನ್ ಕುಮಾರ್ ಶೆರಾವತ್ ಎಷ್ಟೇ ಪ್ರಯತ್ನಿಸಿದರೂ ಸ್ಟಾರ್ ಡಿಫೆಂಡರ್, ಇರಾನಿನ ಫಜಲ್ ಅತ್ರಾಚಲಿಯ ಹೆಬ್ಬಂಡೆಯಂತಹ ಅಭೇದ್ಯ ಕೋಟೆಯ ಎದುರು ಸೋಲನ್ನು ಒಪ್ಪಿಕೊಳ್ಳಬೇಕಾಯಿತು.
ಟಾಸ್ ಗೆದ್ದು ರೈಡ್ ಆಯ್ಕೆ ಮಾಡಿ ಮೊದಲ ಸುತ್ತಿನಲ್ಲಿ 16-13ರ ಮೂರು ಪಾಯಿಂಟ್ ಗಳ ಅಂತರದಲ್ಲಿ ಮುನ್ನಡೆ ಸಾಧಿಸಿತು ಪವನ್ ಶರಾವತ್ ನಾಯಕತ್ವದ ತೆಲುಗು ಟೈಟನ್ಸ್. ಆದರೆ ಎರಡನೇ ಸುತ್ತಿನ ಪಂದ್ಯದಲ್ಲಿ ಸೋನು ಜಗ್ಲನ್ ನ 5 ಪಾಯಿಂಟಿನ ಸೂಪರ್ ರೈಡ್ ಜಾದುವಿನಿಂದ ಪಂದ್ಯದ ದಿಕ್ಕೆ ಬದಲಾಗಿ ಹೋಯಿತು. ತೆಲುಗು ಟೈಟಾನ್ಸ್ ನಾಯಕ ಪವನ್ ಸೆಹ್ರಾವತ್ ಅಬ್ಬರದ ರೈಡಿಂಗ್ ನಲ್ಲೂ 38 -32, ಆರು ಅಂಕಗಳ ಅಂತರದಲ್ಲಿ ತೆಲುಗು ಟೈಟನ್ ಸೋಲಿನ ರುಚಿ ಕಾಣಬೇಕಾಯಿತು. ತವರಿನ ಅಂಗಳದಲ್ಲಿ ಗುಜರಾತ ಜೈಂಟ್ಸ್ ಗೆದ್ದು ತನ್ನ ಅಭಿಮಾನಿಗಳನ್ನು ರಂಜಿಸಿತು.
ಮೊದಲ ಪಂದ್ಯದ(Pro Kabaddi PKL-10) ಹೈ ಲೈಟ್ಸ್:
ಮ್ಯಾನ್ ಆಫ್ ದಿ ಮ್ಯಾಚ್ - ಸೋನು ಜಗ್ಲನ್(11 ರೈಡಿಂಗ್ ಪಾಯಿಂಟ್ಸ್)
ಪವನ್ ಸೆಹ್ರಾವತ್ 11 ರೈಡಿಂಗ್ ಪಾಯಿಂಟ್ಸ್
ಗುಜರಾತ್ ರೈಡ್ ಪಾಯಿಂಟ್ಸ್ -20
ತೆಲುಗು ಟೈಟಾನ್ಸ್ ರೈಡ್ ಪಾಯಿಂಟ್ಸ್-20
ಸೂಪರ್ ರೈಡ್ ಗುಜರಾತ್ ಜೈಂಟ್ಸ್-1
ಸೂಪರ್ ರೈಡ್ ತೆಲುಗು -0
ಟೇಕಲ್ ಪಾಯಿಂಟ್ಸ್ ಗುಜರಾತ್ -10
ಟೇಕಲ್ ಪಾಯಿಂಟ್ಸ್ ತೆಲುಗು -9.
PKL 10 ರ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಗೀತೆಯನ್ನಾಡಿ ಚಾಲನೆ ಕೊಟ್ಟವರು ಬಾಬಾ ರಾಮ್ ದೇವ್ ರವರು. ಪ್ರೊ ಕಬಡ್ಡಿ ಲೀಗ್‌ನ ಸೀಸನ್ 10 ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ + ಹಾಟ್ ಸ್ಟಾರ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ.
PKL 10: ಯುಪಿ ಯೋಧಾಸ್ ನು ಮಣಿಸಿದ ಯು ಮುಂಬಾ
ಇಂದು ಪ್ರಾರಂಭಗೊಂಡ ಸೀಸನ್ ಹತ್ತರ ಎರಡನೇ ಪಂದ್ಯವು ಯುಪಿ ಯೋಧಾಸ್ ಮತ್ತು ಯು ಮುಂಬಾ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಟಾಸ್ ಗೆದ್ದು ಕೋರ್ಟ್ ಆಯ್ಕೆ ಮಾಡಿಕೊಂಡ ಯುಪಿ ಯೋಧಾಸ್ ಮೊದಲ ಹಂತದಲ್ಲಿ 19-14 ರ 6 ಅಂಕಗಳ ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿತ್ತು. ಆದರೆ ಎರಡನೇ ಹಂತದಲ್ಲಿ ಮುನ್ನಡೆಯನ್ನು ಸಾಧಿಸಿಕೊಂಡ ಯು ಮುಂಬಾ 32-34 ರ ಮೂಲಕ 2 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.
ಹೈಲೈಟ್ಸ್:
ಮೊದಲ ಹಂತದಲ್ಲಿ ಮೊದಲ ಸಲ ತನ್ನ ಖಾತೆ ಓಪನ್ ಮಾಡದ, ಯುಪಿ ಯೋಧಾ ನಾಯಕ, ರೆಕಾರ್ಡ್ ಬ್ರೇಕರ್ ಪರ್ದೀಪ್ ನರ್ವಾಲ್ !
ಚೊಚ್ಚಲ ಪಂದ್ಯದಲ್ಲೆ ಸೂಪರ್ 10 ಮಾಡಿದ ಇರಾನಿನ ಮೊಹಮ್ಮದ್ ಜಾಫರ್ ದನೇಶ್ ಎಂಬ ಇನ್ನೂ ಮೀಸೆ ಮೂಡದ ಹುಡುಗ.ಈ ಸೀಸನ್ ನ ಮೊದಲ ಹೈ ಫೈ ಸಾಧಿಸಿದ ಯು ಮುಂಬಾ ತಂಡದ ಯುವ ಪ್ರತಿಭೆ ರಿಂಕು.
ಯು ಮುಂಬಾ ರೈಡ್ ಪಾಯಿಂಟ್ಸ್ -19
ಯುಪಿ ಯೋಧಾಸ್ ರೈಡ್ ಪಾಯಿಂಟ್ಸ್-19
ಟೇಕಲ್ ಪಾಯಿಂಟ್ಸ್ ಯು ಮುಂಬಾ-13
ಟೇಕಲ್ ಪಾಯಿಂಟ್ಸ್ ಯುಪಿ ಯೋಧಾಸ್ -08
ಆಲ್ ಔಟ್ ಪಾಯಿಂಟ್ಸ್ ಯು ಮುಂಬಾ-2
ಆಲ್ ಔಟ್ ಪಾಯಿಂಟ್ಸ್ ಯುಪಿ ಯೋಧಾಸ್-2.
ನಾಳೆಯ ಪ್ರಥಮ ಪಂದ್ಯ ತಮಿಳ್ ತಲೈವಾಸ್ ಮತ್ತು ದಬಾಂಗ್ ಡೆಲ್ಲಿ. ದ್ವಿತೀಯ ಪಂದ್ಯ ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಜೈಂಟ್ಸ್. ನೇರ ಪ್ರಸಾರ ರಾತ್ರಿ 8 ರಿಂದ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.
ಇದನ್ನೂ ಓದಿ :ಗ್ರಾಮ ಪಂಚಾಯಿತಿ ಸಿಬ್ಬಂದಿಗಳೇ ಇಲ್ಲಿದೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ !!