ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

High court: ಗಂಡ, ಹೆಂಡತಿಯರ ಲೈಂಗಿಕ ವಿಚಾರ - ಹೈಕೋರ್ಟ್ ನಿಂದ ಬಂತು ಮಹತ್ವದ ತೀರ್ಪು!!

03:09 PM Jan 12, 2024 IST | ಹೊಸ ಕನ್ನಡ
UpdateAt: 03:14 PM Jan 12, 2024 IST
Advertisement

High court: ವಿವಾಹದ ನಂತರ ಲೈಂಗಿಕ ಜೀವನ ನಡೆಸಲು ಸಂಗಾತಿ ನಿರಾಕರಿಸಿದರೆ ಅದು ಕ್ರೌರ್ಯವಾಗುತ್ತದೆ. ವಿಚ್ಛೇದನಕ್ಕೂ ಅದು ಕಾರಣವಾಗುತ್ತದೆ ಎಂದು ಮಧ್ಯಪ್ರದೇಶದ ಹೈಕೋರ್ಟ್(Madhyapradesh High court)ಮಹತ್ವದ ತೀರ್ಪು ನೀಡಿದೆ.

Advertisement

ಹೌದು, ಒಂದು ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ಅಲ್ಲಿ ಹೊಂದಾಣಿಕೆ, ಪ್ರೀತಿ, ಪ್ರೇಮಗಳು ಮಾತ್ರ ಸಾಲದು. ಲೈಂಗಿಕ ವಿಚಾರ ಕೂಡ ಬಹಳ ಮುಖ್ಯವಾಗುತ್ತದೆ. ಆದರೃ ಹಲವರ ದಾಂಪತ್ಯದಲ್ಲಿ ಇದುವೇ ದೊಡ್ಡ ಸಮಸ್ಯೆಯಾಗಿದೆ. ಸದ್ಯ ಈ ಕುರಿತಂತೆ ಇದೀಗ ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪತ್ನಿ ತನ್ನ ಪತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ನಿರಾಕರಿಸುವುದು. ಅಥವಾ ವಿವಾಹವನ್ನು ಪೂರ್ಣಗೊಳಿಸಲು ಒಪ್ಪದಿರುವುದು ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಹೇಳಿದೆ.

Advertisement

ಇದನ್ನೂ ಓದಿ: Parliment election : ಲೋಕಸಭಾ ಚುನಾವಣೆ- ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ !!

ಅಂದಹಾಗೆ ಲೈಂಗಿಕತೆಯನ್ನು ನಿರಾಕರಿಸುವ ಮೂಲಕ ತನ್ನ ಹೆಂಡತಿ ಮಾನಸಿಕ ಕ್ರೌರ್ಯಕ್ಕೆ ಒಳಗಾಗುವಂತೆ ಮಾಡುತ್ತಿದ್ದಾಳೆ ಎಂದು ವ್ಯಕ್ತಿಯೊಬ್ಬ ದೂರು ಸಲ್ಲಿಸಿದ್ದು, ಇದನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಯಾವುದೇ ಮಾನ್ಯ ಕಾರಣವಿಲ್ಲದೆ ದೀರ್ಘಕಾಲದವರೆಗೆ ಸಂಭೋಗ ಮಾಡದಿರುವುದು ಕ್ರೌರ್ಯಕ್ಕೆ ಸಮಾನ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ಕಾರಣವಿಲ್ಲದೆ ಗಣನೀಯ ಅವಧಿಯವರೆಗೆ ಲೈಂಗಿಕ ಸಂಭೋಗವನ್ನು ಹೊಂದಲು ಆಸಕ್ತಿ ತೋರದೇ ಇರುವುದು ಮಾನಸಿಕ ಕ್ರೌರ್ಯಕ್ಕೆ ಕಾರಣವಾಗಬಹುದು' ಎಂದು ನ್ಯಾಯಾಲಯ ಹೇಳಿದೆ.

Advertisement
Advertisement