J P Nadda: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಜೆ ಪಿ ನಡ್ಡಾ ರಾಜೀನಾಮೆ!!
J P Nadda: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ(BJP National President) ಜೆ ಪಿ ನಡ್ಡಾ(J P Nadda) ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೋದಿ ಪ್ರಧಾನಿಯಾಖಿ ಪ್ರಮಾಣವಚನ ಸ್ವೀಕಾರ ಮಾಡುವ ದಿನವೇ ಅವರು ರಾಜಿನಾಮೆ ನೀಡಿರುವುದು ಕುತೂಹಲವಾಗಿದೆ.
Rain: ಧಾರವಾಡದಲ್ಲಿ ಮಳೆ ಆರ್ಭಟ, ನಡುರಸ್ತೆಯಲ್ಲೇ ವೃದ್ಧನ ಭಯಂಕರ ತಪಸ್ಸು…!
ದೊರೆತ ಮಾಹಿತಿ ಪ್ರಕಾರ ಜೆ ಪಿ ನಡ್ಡಾ ಅವರು ಮೋದಿ ಸಚಿವ(Modi Cabinet) ಸಂಪುಟದಲ್ಲಿಮಂತ್ರಿ ಆಗೋದು ಪಕ್ಕಾ ಆಗಿದೆ. ಹೀಗಾಗಿ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ. ಮೋದಿ ಕ್ಯಾಬಿನೆಟ್ ನಲ್ಲಿ ನಡ್ಡಾಗೆ ಪ್ರಮುಖ ಖಾತೆಯೇ ದೊರೆಯಲಿದೆ ಎನ್ನಲಾಗಿದೆ.
ಅಂದಹಾಗೆ ಜೆಪಿ ನಡ್ಡಾ ಅವರು ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದರು. ಅಲ್ಲದೆ ಪ್ರಧಾನಿ ಮೋದಿಯವರ ಮೊದಲ ಅವಧಿಯಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಆರೋಗ್ಯ ಸಚಿವರಾಗಿ ಉತ್ತಮ ಕೆಲಸಾಡಿದ್ದರು. ಅಮಿತ್ ಶಾ(Amith Shah) ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ನಡ್ಡಾ ಅಧ್ಯಕ್ಷರಾಗಿದ್ದರು.
ಬಿಜೆಪಿ ಇದೀಗ ಹೊಸ ಅಧ್ಯಕ್ಷರ ಆಯ್ಕೆಗೆ ಗಮನ ಹರಿಸಬೇಕಿದೆ. ಆದರೆ ಅದೂ ಕೂಡ ಕುತೂಹಲಕರವಾಗಿದೆ. ಚುನಾವಣೆಯಲ್ಲಿ ಗರ್ವಭಂಗವಾದ ಕಾರಣ ಅಳೆದು ತೂಗಿ ಹೊಸ ಅಧ್ಯಕ್ಷರನ್ನು ಆರಿಸಬೇಕಿದೆ.