For the best experience, open
https://m.hosakannada.com
on your mobile browser.
Advertisement

Jayaprakash Hegde: ಕೋಟಾಗೆ ಹಿಂದಿ ಬರಲ್ಲ ಹೇಳಿಕೆ: ಜಯಪ್ರಕಾಶ್ ಹೆಗ್ಡೆ ಕನ್ನಡ ವಿರೋಧಿ ಎಂದು ಬಿಜೆಪಿ ಕಿಡಿ !

08:19 AM Mar 24, 2024 IST | ಸುದರ್ಶನ್
UpdateAt: 08:19 AM Mar 24, 2024 IST
jayaprakash hegde  ಕೋಟಾಗೆ ಹಿಂದಿ ಬರಲ್ಲ ಹೇಳಿಕೆ  ಜಯಪ್ರಕಾಶ್ ಹೆಗ್ಡೆ ಕನ್ನಡ ವಿರೋಧಿ ಎಂದು ಬಿಜೆಪಿ ಕಿಡಿ
ಜಯಪ್ರಕಾಶ್‌ ಹೆಗ್ಡೆ(ಸಂಗ್ರಹ ಚಿತ್ರ)

Jayaprakash Hegde: ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ(Jayaprakash Hegde)  ತಮ್ಮ ಇತ್ತೀಚಿನ ಮಾತಿನ ಸಂದರ್ಭ ತಮ್ಮ ಎದುರಾಳಿ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಅವರನ್ನು ಗುರಿಯಾಗಿರಿಸಿಕೊಂಡು ನೀಡಿದ್ದ ಹೇಳಿಕೆ ಇದೀಗ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದೆ. ಜಯಪ್ರಕಾಶ್ ಹೆಗಡೆ ಅವರ ಮಾತಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಂದು ಬ್ರಹ್ಮಾವರದಲ್ಲಿ ಮಾತನಾಡಿದ್ದ ಜಯಪ್ರಕಾಶ್ ಹೆಗ್ಡೆ, ಓರ್ವ ಸಂಸದೀಯ ಪಟುವಿಗೆ ಹಿಂದಿ ಹಾಗೂ ಇಂಗ್ಲೀಷ್ ಭಾಷಾ ಜ್ಞಾನ ಅತ್ಯಗತ್ಯವಾದದ್ದು ಎಂದು ಹೇಳಿದ್ದರು. ಕೋಟ ಶ್ರೀನಿವಾಸ ಪೂಜಾರಿಗೆ ಹಿಂದಿ ಇಂಗ್ಲಿಷ್ ಬರಲ್ಲ, ಅವರು ಸಂಸದರಾಗಲು ಲಾಯಕ್ಕಿಲ್ಲ ಎನ್ನುವ ಅರ್ಥದಲ್ಲಿ ಮಾತಾಡಿದ್ದರು. ಇದು ತಮ್ಮ ರಾಜಕೀಯ ವಿರೋಧಿ, ಸಿಂಪಲ್ ಮನುಷ್ಯ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಟಾರ್ಗೆಟ್ ಮಾಡಿ ಹೇಳಿದ್ದರು.

Advertisement

ಇದನ್ನೂ ಓದಿ: ದ.ಕ ಮಾಜಿ ಡಿಸಿ ಸಶಿಕಾಂತ್ ಸೆಂಥಿಲ್ ಗೆ ಕಾಂಗ್ರೆಸ್ ಟಿಕೆಟ್ !

ಜಯಪ್ರಕಾಶ್ ಹೆಗ್ಡೆ ಅವರ ಹೇಳಿಕೆಯನ್ನು ಬಿಜೆಪಿ ತೀಕ್ಷ್ಣವಾಗಿ ತೆಗೆದುಕೊಂಡಿದೆ. ಹೆಗ್ಡೆ ಮಾತನ್ನು ಉಲ್ಲೇಖಿಸಿರುವ ಬಿಜೆಪಿ, ಕಾಂಗ್ರೆಸ್ ಕನ್ನಡ ವಿರೋಧಿ ನಿಲುವನ್ನು ಹೊಂದಿದೆ ಎಂದು ಹೇಳಿದೆ. ಇದು ಸುದ್ದಿಯಾಗುತ್ತಿದ್ದಂತೆಯೇ ಜಯಪ್ರಕಾಶ್ ಹೆಗ್ಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೋಟಾ ಶ್ರೀನಿವಾಸ ಪೂಜಾರಿ, 6 ತಿಂಗಳಲ್ಲಿ ಹಿಂದಿ ಕಲಿತು ಸಂಸತ್ ನಲ್ಲಿ ನಿರರ್ಗಳವಾಗಿ ಮಾತನಾಡುವುದಾಗಿ ಹೇಳಿದ್ದಾರೆ.

Advertisement

ಜಯಪ್ರಕಾಶ್ ಹೆಗ್ಡೆ ಹೇಳಿಕೆಯಿoದ ಪಕ್ಷಕ್ಕೆ ಹಾನಿ:
ತಮ್ಮ ಹೇಳಿಕೆಯಿಂದ ಪಕ್ಷಕ್ಕೆ ಮತ್ತು ವ್ಯಯಕ್ತಿಕವಾಗಿ ತನಗೆ ನಷ್ಟ ಉಂಟುಮಾಡಬಹುದೆಂದು ಅರಿತ ಜಯಪ್ರಕಾಶ್ ಹೆಗ್ಡೆ ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಿರುಚಿವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿಯವರ ಭಾಷಾ ಕೌಶಲ್ಯದ ಬಗ್ಗೆ ನಾನು ಯಾವತ್ತೂ ಮಾತನಾಡಿಲ್ಲ ಎಂದು ಹೆಗ್ಡೆ ತಮ್ಮ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ. ''ನನ್ನ ಇಡೀ ರಾಜಕೀಯ ಜೀವನದಲ್ಲಿ ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಬಿಜೆಪಿ ಇದೀಗ ಇದನ್ನೇ ಚುನಾವಣಾ ತಂತ್ರವಾಗಿ ಬಳಸಿಕೊಳ್ಳುತ್ತಿದೆ.

'ನಾನು ಸಂಸತ್ತಿನಲ್ಲಿ ಭಾಷಾಂತರಕಾರರ ಸೇವೆ ಇರುವುದರಿಂದ ಸದನದ ಸದಸ್ಯರು ಕನ್ನಡದಲ್ಲೂ ಮಾತನಾಡಬಹುದು' ಎಂದು ಹೇಳಿದ್ದೆ. ಆದರೆ ಅಧಿಕಾರಿಗಳೊಂದಿಗೆ ಕೆಲಸ ಮಾಡಲು, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತನಾಡುವ ಅವಶ್ಯಕತೆ ಉಂಟಾಗುತ್ತದೆ. ಈ ಹಿಂದೆ ನಾನು ಸಂಸದನಾಗಿ ಕೆಲಸ ಮಾಡಿದ ಅನುಭವದ ಆಧಾರದ ಮೇಲೆ ಹೇಳಿದ್ದೇನೆ ಹೊರತು ಬೇರೇನೂ ಅಲ್ಲ. ನನ್ನ ಹೇಳಿಕೆಗೆ ಬೇರೆ ಯಾವುದೇ ಉದ್ದೇಶವಿಲ್ಲ. ಈಗ ನನ್ನ ಹೇಳಿಕೆಯನ್ನು ತಿರುಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. 'ನಾನು ಗೌರವಯುತವಾಗಿ ಚುನಾವಣೆಯಲ್ಲಿ ಹೋರಾಡುತ್ತೇನೆ ಮತ್ತು ಕಣದಲ್ಲಿರುವ ನನ್ನ ಎದುರಾಳಿಗೂ ಗೌರವ ನೀಡುತ್ತೇನೆ' ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಇದನ್ನೂ ಓದಿ: 40 ಶಾಸಕರ ಜೊತೆಗೆ ಡಿ ಕೆ ಶಿವಕುಮಾರ್ ಬಿಜೆಪಿ ಸೇರ್ಪಡೆಗೆ ರೆಡಿ !!

ಆದರೆ ಕರ್ನಾಟಕ ರಾಜ್ಯ ಬಿಜೆಪಿಯ ಟ್ವಿಟ್ಟರ್ ನಲ್ಲಿ ಸ್ಥಳೀಯ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿ ವರದಿಯನ್ನು ಲಗತ್ತಿಸಿ ಕನ್ನಡ ಭಾಷೆಯನ್ನು ಅವಮಾನಿಸುತ್ತಿರುವ ಕಾಂಗ್ರೆಸ್‌ನ ನಿಜವಾದ ಮುಖವೀಗ ಹೊರಬಿದ್ದಿದೆ. ಇದು ಕೋಟಿಗಟ್ಟಲೆ ಕನ್ನಡಿಗರನ್ನು ಅವಮಾನಜ್ ಮಾಡಿದ್ದು ಹೊರತು ಬೇರೇನೂ ಅಲ್ಲ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ ಕನ್ನಡ ವಿರೋಧಿ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿ ಮುಂದುವರಿಯಲು ಸಿಎಂ ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡುತ್ತೀರಾ ಎಂದು ಪೋಸ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಕನ್ನಡ ಮಾತೃಭಾಷೆಯಾಗಿದ್ದರೆ, ಅಭ್ಯರ್ಥಿ ಸಂಸದರಾಗಲು ಅರ್ಹರಲ್ಲ ಎಂಬ ಅಭಿಪ್ರಾಯವನ್ನು ಹೊಂದಿರುವುದು ಕಾಂಗ್ರೆಸ್ ವ್ಯವಸ್ಥೆಯ ಮನಸ್ಥಿತಿ ಎಂದು ಬಿಜೆಪಿ ಹೇಳಿದೆ.

Advertisement
Advertisement