For the best experience, open
https://m.hosakannada.com
on your mobile browser.
Advertisement

Chandan - Niveditha: ನಿವೇದಿತಾ-ಚಂದನ್‌ ಶೆಟ್ಟಿ ಮಾಜಿ ದಂಪತಿಗಳಿಂದ ಜಂಟಿ ಪತ್ರಿಕಾಗೋಷ್ಠಿ

Chandan - Niveditha: ಚಂದನ್‌ ಶೆಟ್ಟಿ ನಿವೇದಿತಾ ಗೌಡ ಇದೀಗ ಮಾಜಿ ದಂಪತಿಗಳು. ಇವರಿಬ್ಬರು ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
02:11 PM Jun 10, 2024 IST | ಸುದರ್ಶನ್
UpdateAt: 02:14 PM Jun 10, 2024 IST
chandan   niveditha  ನಿವೇದಿತಾ ಚಂದನ್‌ ಶೆಟ್ಟಿ ಮಾಜಿ ದಂಪತಿಗಳಿಂದ ಜಂಟಿ ಪತ್ರಿಕಾಗೋಷ್ಠಿ
Advertisement

Chandan - Niveditha: ಇತ್ತೀಚೆಗೆ ಕೈ ಕೈ ಹಿಡಿದು ಕೋರ್ಟ್‌ ಮೆಟ್ಟಿಲೇರಿ ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಿ, ಕನ್ನಡ ಚಲನಚಿತ್ರರಂಗಕ್ಕೆ ಶಾಕಿಂಗ್‌ ನ್ಯೂಸ್‌, ಜೊತೆಗೆ ತಮ್ಮ ತಮ್ಮ ಅಭಿಮಾನಿಗಳಿಗೆ ಕೂಡಾ ಶಾಕ್‌ ನೀಡಿದ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಭಾರೀ ಸುದ್ದಿ ಮಾಡಿದ್ದು, ಇದೀಗ ಮಾಜಿ ದಂಪತಿಗಳು ಇಂದು ಒಟ್ಟಾಗಿ ಸುದ್ದಿಗೋಷ್ಠಿ ನಡೆಸಲು ನಿರ್ಧಾರ ಮಾಡಿದ್ದಾರೆ.

Advertisement

ನಕಲಿ ಸಿಬಿಐ ಗ್ಯಾಂಗ್ ನಿಂದ ಹಿರಿಯ ಅಧಿಕಾರಿಗೆ ಮಹಾ ವಂಚನೆ; 15 ನಿಮಿಷದಲ್ಲಿ ಹಿಂದಿರುಗಿಸುವುದಾಗಿ 85 ಲಕ್ಷ ರೂ. ಪಂಗನಾಮ !!

ಇಂದು ಇವರಿಬ್ಬರೂ ಜೊತೆಯಾಗಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ವಿಚ್ಛೇದನ ಪಡೆದ ಮಾಜಿ ದಂಪತಿಗಳು ಈ ರೀತಿ ಪತ್ರಿಕಾಗೋಷ್ಠಿ ಮಾಡಿ ತಮ್ಮ ಮದುವೆ ಮುರಿದು ಬೀಳಲು ಕಾರಣವೇನು? ಎನ್ನುವುದನ್ನು ಹೇಳಲಿದ್ದಾರೆಯೇ?  ಕಾದು ನೋಡಬೇಕು.

Advertisement

ಇಬ್ಬರೂ ಸೋಷಿಯಲ್‌ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದು, ಇದೀಗ ಜಂಟಿ ಸುದ್ದಿಗೋಷ್ಠಿಗೆ ರೆಡಿಯಾಗಿದ್ದಾರೆ.

ಇವರಿಬ್ಬರ ವಿಚ್ಛೇದನಕ್ಕೆ ಕಾರಣ ಏನು ಎಂದು ತಿಳಿಯದೆ ನಾನಾ ವದಂತಿಗಳು ಹರಿದಾಡುತ್ತಿರುವ ಕಾರಣ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಈ ಸುದ್ದಿಗೋಷ್ಠಿಯಿಂದ ರೂಮರ್ಸ್‌ಗಳಿಗೆ ತೆರೆ ಬೀಳುವ ಸಂಭವವಿದೆ.

ಯಾವುದೇ ದೊಡ್ಡ ವಿಷಯಕ್ಕೆ ಇಬ್ಬರೂ ಮನಸ್ತಾಪ ಮಾಡಿಕೊಂಡಿಲ್ಲ. ಸಣ್ಣ ಪುಟ್ಟ ವಿಷಯಕ್ಕೆ ಭಿನ್ನಾಭಿಪ್ರಾಯ ಉಂಟಾಗುತ್ತದೆ ಎಂದು ವಕೀಲೆ ಅನಿತಾ ಅವರು ಹೇಳಿದ್ದಾರೆ. ಇವರ ಮಾತು ಕೇಳಿದರೆ ಇವರಿಬ್ಬರು ಕೆರಿಯರ್‌ ವಿಚಾರಕ್ಕೆ ಡಿವೋರ್ಸ್‌ ನೀಡಿದ್ದಾರೆಯೇ ಎಂಬ ಮಾತು ಕೇಳಿ ಬಂದಿದೆ.

ಇಬ್ಬರೂ ಈಗಷ್ಟೇ ತಮ್ಮ ಕೆರಿಯರ್‌ ಪ್ರಾರಂಭ ಮಾಡಿದ್ದು, ಇವರ ಅಭಿಮಾನಿಗಳಿಗೆ ಯಾವುದೇ ತೊಂದರೆ ಇಲ್ಲದಿದ್ದರೂ, ಕೆರಿಯರ್‌ಗೋಸ್ಕರ ಈ ನಿರ್ಧಾರ ತಗೊಂಡಿರಬಹುದು ಎಂದಾದರೆ , ಇವರ ಡಿವೋರ್ಸ್‌ ವಿಷಯ ತಿಳಿದು, ಇವರ ಮುಂದಿನ ಸಿನಿಮಾಗಳನ್ನು ಅಭಿಮಾನಿಗಳು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎನ್ನುವುದೇ ಕುತೂಹಲಕರವಾಗಿದೆ.

Yuvaraj Kumar And Shridevi; ಯುವ ರಾಜ್‌ ಕುಮಾರ್‌-ಶ್ರೀದೇವಿ ದಾಂಪತ್ಯ ಅಂತ್ಯ; ವಿಚ್ಛೇದನಕ್ಕೆ ಅರ್ಜಿ

Advertisement
Advertisement
Advertisement