For the best experience, open
https://m.hosakannada.com
on your mobile browser.
Advertisement

Gram Panchayat Recruitment: ಗ್ರಾಮ ಪಂಚಾಯ್ತಿ ನೇಮಕಾತಿ- ಮಹತ್ವದ ಬದಲಾವಣೆ ತಂದ ಸರ್ಕಾರ!!

11:53 AM Dec 20, 2023 IST | ಕಾವ್ಯ ವಾಣಿ
UpdateAt: 12:07 PM Dec 20, 2023 IST
gram panchayat recruitment  ಗ್ರಾಮ ಪಂಚಾಯ್ತಿ ನೇಮಕಾತಿ  ಮಹತ್ವದ ಬದಲಾವಣೆ ತಂದ ಸರ್ಕಾರ
Advertisement

Gram Panchayat Recruitment: ಗ್ರಾಮ ಪಂಚಾಯಿತಿ ಮಟ್ಟದ ನೇಮಕಾತಿಯಲ್ಲಿ (Gram panchayat recruitment) ಮಹತ್ವದ ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಗ್ರಾಮ ಆಡಳಿತಾಧಿಕಾರಿ ನೇಮಕಾತಿಯಲ್ಲಿ ಹೊಸ ನಿಯಮ ಜಾರಿಗೆ ಬರಲಿದೆ. ಹೌದು, ಗ್ರಾಮ ಆಡಳಿತಾಧಿಕಾರಿ (Village Administration Officer) ನೇಮಕಾತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಕುರಿತು ವಿಶೇಷ ರಾಜ್ಯಪತ್ರದಲ್ಲಿ ಆದೇಶವನ್ನು ಸಹ ಹೊರಡಿಸಲಾಗಿದೆ. ನೇಮಕಾತಿ ನಿಯಮ ಬದಲಾವಣೆ ಮಾಡುವುದಾಗಿ ಈ ಹಿಂದೆಯೇ ಸರ್ಕಾರ ತಿಳಿಸಿತ್ತು.

Advertisement

ಇದುವರೆಗೂ ಗ್ರಾಮ ಆಡಳಿತಾಧಿಕಾರಿಯನ್ನು ದ್ವಿತೀಯ ಪಿಯುಸಿಯಲ್ಲಿ ಅಭ್ಯರ್ಥಿಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. ಈ ನಿಯಮಕ್ಕೆ ಬದಲಾವಣೆ ತರಲು ವರದಿ ನೀಡುವಂತೆ ಸಮಿತಿಯನ್ನು ಸಹ ರಚನೆ ಮಾಡಲಾಗಿತ್ತು. ಸಮಿತಿ ಶಿಫಾರಸು ಒಪ್ಪಿದ್ದು, ಹೊಸ ಆದೇಶ ಪ್ರಕಟವಾಗಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ 1978ರ (1990ರ ಕರ್ನಾಟಕ ಅಧಿನಿಯಮ14) ಸೇರಿದಂತೆ ವಿವಿಧ ನಿಯಮಗಳಲ್ಲಿ ತಿದ್ದುಪಡಿ ತರಲಾಗಿದೆ.

ಯಾವುದೇ ವ್ಯಕ್ತಿ ಅಥವ ಸಂಸ್ಥೆ ಈ ನಿಯಮಗಳ ಬಗ್ಗೆ ಆಕ್ಷೇಪಣೆಗಳು ಇದ್ದರೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು 560001 ಈ ವಿಳಾಸಕ್ಕೆ ಕಳಿಸಬಹುದು. ಹೊಸ ನಿಯಮವನ್ನು ಕರ್ನಾಟಕ ಸಾಮಾನ್ಯ ಸೇವೆಗಳು (ಕಂದಾಯ ಅಧೀನ ಶಾಖೆ) (ವೃಂದ ಮತ್ತು ನೇಮಕಾತಿ) (ತಿದ್ದುಪಡಿ) ನಿಯಮಗಳು 2023 ಎಂದು ಕರೆಯಲಾಗುತ್ತದೆ.

Advertisement

ಇದನ್ನು ಓದಿ: BMTC Bus: ಹೊಸ ವರ್ಷಕ್ಕೆ ಬಿಎಂಟಿಸಿ ಕಡೆಯಿಂದ ಬಿಗ್ ಗಿಫ್ಟ್! ಇಲ್ಲಿದೆ ನೋಡಿ ನ್ಯೂ ಅಪ್ಡೇಟ್

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 'ಗ್ರಾಮ ಲೆಕ್ಕಿಗ' ಎಂಬ ಪದನಾಮವನ್ನು 'ಗ್ರಾಮ ಆಡಳಿತಾಧಿಕಾರಿ' ಎಂದು ಬದಲಾವಣೆ ಮಾಡಲಾಗಿತ್ತು. ಆಗಲೇ ಈ ಹುದ್ದೆಯ ನೇಮಕಾತಿ ನಿಯಮಗಳ ಬದಲಾವಣೆಗೆ ತೀರ್ಮಾನಿಸಲಾಗಿತ್ತು. ಈಗ ಅದು ಘೋಷಣೆಯಾಗಿದೆ.

ಗ್ರಾಮ ಆಡಳಿತಾಧಿಕಾರಿ ನೇಮಕ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಕರ್ನಾಟಕ ಲೋಕಸೇವಾ ಆಯೋಗ ಅಥವ ಕೇಂದ್ರ ಅಥವ ರಾಜ್ಯದ ಒಡೆತನದ ಯಾವುದೇ ರಾಷ್ಟ್ರೀಯ ಅಥವ ರಾಜ್ಯ ಮಟ್ಟದ ಸಂಸ್ಥೆಗಳು ಸ್ಮರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತವೆ. ಸ್ಮರ್ಧಾತ್ಮಕ ಪರೀಕ್ಷೆಯ ಅಂಕಗಳು, ಮೆರಿಟ್ ಆಧಾರದ ಮೇಲೆ ನೇರ ನೇಮಕಾತಿ ನಡೆಯಲಿದೆ.

ಮುಖ್ಯವಾಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವವರು ಪದವಿ ಪೂರ್ವ ಪರೀಕ್ಷೆ ಅಥವ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ್ರತಿ ಗ್ರಾಮ ಆಡಳಿತಾಧಿಕಾರಿ ನೇಮಕದ ನಂತರ ಪ್ರೊಬೆಷನರಿ ತರಬೇತಿ ಪಡೆಯಬೇಕು. ಆರು ತಿಂಗಳು ಕಡಿಮೆ ಇಲ್ಲದ ಅವಧಿಗೆ ತರಬೇತಿ ಕೋರ್ಸ್‌ ಮತ್ತು ಒಂದು ವರ್ಷದೊಳಗೆ ರಾಜ್ಯ ಸರ್ಕಾರ ನಿಗದಿಪಡಿಸಿದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಎಂದು ತಿಳಿಸಲಾಗಿದೆ .

Advertisement
Advertisement
Advertisement