For the best experience, open
https://m.hosakannada.com
on your mobile browser.
Advertisement

Jio Finance: ಜಿಯೋ ಫೈನಾನ್ಶಿಯಲ್ ಸರ್ವೀಸಸ್ ನಿಂದ ಜಿಯೋಫೈನಾನ್ಸ್ ಡಿಜಿಟಲ್ ಬ್ಯಾಂಕಿಂಗ್ ಆರಂಭ !!

Jio Finance: ತನ್ನದೇ ಅದ “ಜಿಯೋಫೈನಾನ್ಸ್” (JioFinance) ಅಪ್ಲಿಕೇಷನ್ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.
07:04 AM May 31, 2024 IST | ಸುದರ್ಶನ್
UpdateAt: 07:17 AM May 31, 2024 IST
jio finance  ಜಿಯೋ ಫೈನಾನ್ಶಿಯಲ್ ಸರ್ವೀಸಸ್ ನಿಂದ ಜಿಯೋಫೈನಾನ್ಸ್ ಡಿಜಿಟಲ್ ಬ್ಯಾಂಕಿಂಗ್ ಆರಂಭ

Jio Finance: ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಮುಖ್ಯವಾದ ವಿಚಾರವೊಂದನ್ನು ಹಂಚಿಕೊಂಡಿದೆ. ಅದರ ಪ್ರಕಾರ, ತನ್ನದೇ ಅದ “ಜಿಯೋಫೈನಾನ್ಸ್” (JioFinance) ಅಪ್ಲಿಕೇಷನ್ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಇದು ಬೀಟಾ ಮೋಡ್ ನಲ್ಲಿ ಇರಲಿದೆ. ಇದೊಂದು ಅತ್ಯಾಧುನಿಕ ಪ್ಲಾಟ್ ಫಾರ್ಮ್ ಆಗಿದ್ದು, ದೈನಂದಿನ ಆರ್ಥಿಕ ವ್ಯವಹಾರಗಳು ಮತ್ತು ಡಿಜಿಟಲ್ ಬ್ಯಾಂಕಿಂಗ್ ನಲ್ಲಿ ಕ್ರಾಂತಿಯನ್ನು ತರುತ್ತದೆ. ಅಂದಹಾಗೆ ಈ ಅಪ್ಲಿಕೇಷನ್ ಯಾವುದೇ ಅಡೆತಡೆಗಳು ಇಲ್ಲದಂತೆ ಡಿಜಿಟಲ್ ಬ್ಯಾಂಕಿಂಗ್, ಯುಪಿಐ ವಹಿವಾಟುಗಳು, ಬಿಲ್ ತೀರುವಳಿ, ವಿಮಾ ಸಲಹೆಯನ್ನು ಸಂಯೋಜಿಸುತ್ತದೆ ಮತ್ತು ಖಾತೆಗಳು ವೀಕ್ಷಣೆ ಮಾಡುವುನ್ನು ಹಾಗೂ ಉಳಿತಾಯಗಳ ಏಕೀಕೃತ ನೋಟವನ್ನು ನೀಡುತ್ತದೆ. ಇದರ ಜತೆಗೆ ಆ ಎಲ್ಲವೂ ಒಂದೇ ಬಳಕೆದಾರ ಸ್ನೇಹಿ ಇಂಟರ್‌ಫೇಸ್‌ನಲ್ಲಿ ಲಭ್ಯವಿರುತ್ತದೆ.

Advertisement

ಇದನ್ನೂ ಓದಿ: Jio Cinema : ಜಿಯೋ ಸಿನಿಮಾದಲ್ಲಿ 62 ಕೋಟಿಗೂ ಅಧಿಕ ವೀಕ್ಷಣೆ - ದಾಖಲೆ ಬರೆದ ಟಾಟಾ ಐಪಿಎಲ್-2024 !!

ಇದನ್ನು ರೂಪಿಸಿರುವುದೇ ಘರ್ಷಣೆ ಕಡಿಮೆ ಮಾಡಿ ನೇವಿಗೇಟ್ ಮಾಡುವುದಕ್ಕೆ. ಆರ್ಥಿಕ ವಿಚಾರದ ಬಗ್ಗೆ ಎಷ್ಟು ಕನಿಷ್ಠ ಅಥವಾ ಗರಿಷ್ಠ ಜ್ಞಾನ ಮತ್ತು ಯಾವುದೇ ಹಂತದ ಆರ್ಥಿಕ ತಂತ್ರಜ್ಞಾನದ ಜ್ಞಾನ ಇರುವಂಥ ಬಳಕೆದಾರರಿಗೆ “ಜಿಯೋಫೈನಾನ್ಸ್” ಅಪ್ಲಿಕೇಷನ್ ಸೇವೆಯನ್ನು ಒದಗಿಸುತ್ತದೆ. ಅದರ ಜತೆಗೆ ಹಣಕಾಸು ನಿರ್ವಹಣೆಯನ್ನು ಬೆರಳ ತುದಿಯಲ್ಲಿ ಯಾವುದೇ ಶ್ರಮವಿಲ್ಲದೆ ಮಾಡಬಹುದು ಎಂಬುದನ್ನು ಖಚಿತಪಡಿಸುತ್ತದೆ.

Advertisement

ಇದನ್ನೂ ಓದಿ: Delhi: ವಿಶ್ವದ ಪ್ರಭಾವಿ 100 ಕಂಪನಿಗಳ ಪಟ್ಟಿ ಬಿಡುಗಡೆ- ರಿಲಯನ್ಸ್ ಸೇರಿ ಭಾರತದ 3 ಕಂಪನಿಗಳಿಗೆ ಸ್ಥಾನ !!

ಇನ್ನು ಭವಿಷ್ಯದ ಯೋಜನೆಗಳು ಸಹ ಇವೆ. ಅವು ಯಾವುವೆಂದರೆ, ಸಾಲದ ಸಲ್ಯೂಷನ್ ಗಳ ವಿಸ್ತರಣೆ, ಮ್ಯೂಚುವಲ್ ಫಂಡ್ ಗಳ ಮೇಲೆ ಸಾಲದೊಂದಿಗೆ ಆರಂಭ ಮತ್ತು ಗೃಹ ಸಾಲದ ತನಕ ಮುಂದುವರಿಸುವುದು, ಬದಲಾಗುತ್ತಿರುವ ಗ್ರಾಹಕರ ಅಗತ್ಯಗಳ ಜತೆಗೆ ಬದ್ಧತೆ ಪ್ರದರ್ಶಿಸುವುದಾಗಿದೆ.

  • ಇದನ್ನೂ ಓದಿ:

“ಜಿಯೋ”ಫೈನಾನ್ಸ್” ನಂಬಿಕೆ, ಪ್ರಸ್ತುತತೆ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡುತ್ತದೆ, ಡಿಜಿಟಲ್ ಬ್ಯಾಂಕಿಂಗ್ ಅನುಭವವನ್ನು ಮರು ವ್ಯಾಖ್ಯಾನಿಸುವ ನಿಟ್ಟಿನಲ್ಲಿ ನಿರಂತರ ಸುಧಾರಣೆಗಾಗಿ ಬಳಕೆದಾರರ ಪ್ರತಿಕ್ರಿಯೆಯನ್ನು ನಿರೀಕ್ಷೆ ಮಾಡುತ್ತದೆ. "ಜಿಯೋ ಪೇಮೆಂಟ್ ಬ್ಯಾಂಕ್ ಅಕೌಂಟ್” ವೈಶಿಷ್ಟ್ಯದೊಂದಿಗೆ ಶೀಘ್ರವಾಗಿ ಡಿಜಿಟಲ್ ಖಾತೆ ತೆರೆಯುವುದು ಮತ್ತು ಸುವ್ಯವಸ್ಥಿತ ಬ್ಯಾಂಕ್ ನಿರ್ವಹಣೆಯ ಪ್ರಮುಖ ವೈಶಿಷ್ಟ್ಯಗಳು ಒಳಗೊಂಡಿವೆ.

ಗ್ರಾಹಕರಿಗೆ ಸೇವೆಯಿಂದ ತೃಪ್ತಿ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಲು, “ಜಿಯೋಫೈನಾನ್ಸ್" ಬೀಟಾದಲ್ಲಿ ಪ್ರಾರಂಭಿಸುತ್ತದೆ, ಪರಿಷ್ಕರಣೆಗಾಗಿ ಬಳಕೆದಾರರ ಅಭಿಪ್ರಾಯ, ಸಲಹೆ- ಸೂಚನೆಯನ್ನು ಆಹ್ವಾನಿಸುತ್ತದೆ.

*"ನಾವು ಮಾರುಕಟ್ಟೆಗೆ ‘ಜಿಯೋಫೈನಾನ್ಸ್' ಅಪ್ಲಿಕೇಷನ್ ಅನ್ನು ಪರಿಚಯಿಸಲು ಉತ್ಸುಕರಾಗಿದ್ದೇವೆ. ಇಂದು ಯಾವುದೇ ವ್ಯಕ್ತಿಯು ತನ್ನ ಹಣಕಾಸನ್ನು ನಿರ್ವಹಿಸುವ ವಿಧಾನವನ್ನು ಮರುವ್ಯಾಖ್ಯಾನಿಸುವ ಗುರಿ ಹೊಂದಿದ ಪ್ಲಾಟ್ ಫಾರ್ಮ್ ಇದಾಗಿದೆ. ಯಾವುದೇ ಬಳಕೆದಾರರಿಗಾಗಿ ಒಂದೇ ಪ್ಲಾಟ್ ಫಾರ್ಮ್ ನಲ್ಲಿ ಹಣಕಾಸಿಗೆ ಸಂಬಂಧಿಸಿದ ಎಲ್ಲವನ್ನೂ ಸರಳಗೊಳಿಸುವುದು ನಮ್ಮ ಅಂತಿಮ ಗುರಿಯಾಗಿದೆ. ಎಲ್ಲ ಜನರಿಗೆ, ಸಾಲ ನೀಡುವಿಕೆ, ಹೂಡಿಕೆ, ವಿಮೆ, ಪೇಮೆಂಟ್ ಗಳು ಮತ್ತು ವಹಿವಾಟುಗಳಂತಹ ಕೊಡುಗೆಗಳ ಸಮಗ್ರ ಆಯ್ಕೆಯ ಜತೆಗೆ ಮತ್ತು ಹಣಕಾಸು ಸೇವೆಗಳನ್ನು ಹೆಚ್ಚು ಪಾರದರ್ಶಕ, ಕೈಗೆಟುಕುವ ಮತ್ತು ಅರ್ಥಪೂರ್ಣವಾಗಿ ನೀಡಲಾಗುತ್ತದೆ,” ಎಂದು ಕಂಪನಿಯ ವಕ್ತಾರರು ಹೇಳಿದರು.*

Advertisement
Advertisement
Advertisement