For the best experience, open
https://m.hosakannada.com
on your mobile browser.
Advertisement

Jio: 'ಜಿಯೋ' ಬಳಕೆದಾರರಿಗೆ ಬಿಗ್ ಶಾಕ್- ರಿಚಾರ್ಜ್ ದರದಲ್ಲಿ 25% ಹೆಚ್ಚಳ !!

Jio: ಜಿಯೋ ಸಿಮ್ ಬಳಕೆದಾರರಿಗೆ ಕಂಪೆನಿಯು ದೊಡ್ಡ ಆಘಾತ ನೀಡಿದ್ದು, ತನ್ನ ಪ್ರಿಪೇಯ್ಡ್ ಯೋಜನೆಗಳ ರಿಚಾರ್ಜ್ ದರವನ್ನು 25% ಹೆಚ್ಚಳ ಮಾಡುವುದಾಗಿ ಘೋಷಿಸಿದೆ.
08:46 AM Jun 28, 2024 IST | ಸುದರ್ಶನ್
UpdateAt: 08:46 AM Jun 28, 2024 IST
jio   ಜಿಯೋ  ಬಳಕೆದಾರರಿಗೆ ಬಿಗ್ ಶಾಕ್  ರಿಚಾರ್ಜ್ ದರದಲ್ಲಿ 25  ಹೆಚ್ಚಳ

Jio: ಜಿಯೋ ಸಿಮ್ ಬಳಕೆದಾರರಿಗೆ ಕಂಪೆನಿಯು ದೊಡ್ಡ ಆಘಾತ ನೀಡಿದ್ದು, ತನ್ನ ಪ್ರಿಪೇಯ್ಡ್ ಯೋಜನೆಗಳ ರಿಚಾರ್ಜ್ ದರವನ್ನು 25% ಹೆಚ್ಚಳ ಮಾಡುವುದಾಗಿ ಘೋಷಿಸಿದೆ.

Advertisement

ಹೌದು, ದೇಶದ ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್‌(Reliance) ಜಿಯೋ ತನ್ನ ಎಲ್ಲಾ ರಿಚಾರ್ಜ್‌ ಪ್ಲ್ಯಾನ್‌ಗಳ ಹೆಚ್ಚಳವನ್ನು ಘೋಷಣೆ ಮಾಡಿದೆ. ಈಗಾಗಲೇ ಅಸ್ವಿತ್ವದಲ್ಲಿರುವ ಜನಪ್ರಿಯ ರಿಚಾರ್ಜ್‌ ಪ್ಲ್ಯಾನ್‌(Recharg Paln) ಗಳನ್ನು ಶೇ. 25ರಷ್ಟು ಹೆಚ್ಚಳ ಮಾಡಿದೆ. ಇತ್ತೀಚೆಗೆ ಮುಕ್ತಾಯಗೊಂಡ ಹರಾಜಿನಲ್ಲಿ ಜಿಯೋ 1800 ಮೆಗಾಹರ್ಟ್ಸ್ ಬ್ಯಾಂಡ್ನಲ್ಲಿ 14.4 ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ಅನ್ನು 973 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿತ್ತು. ಇದಾದ ಒಂದು ದಿನದ ನಂತರ ಈ ಪ್ರಕಟಣೆ ಹೊರಡಿಸಲಾಗಿದೆ.

Haveri: ಭೀಕರ ರಸ್ತೆ ಅಪಘಾತ; 13 ಜನ ಸ್ಥಳದಲ್ಲೇ ಸಾವು

Advertisement

ಯಾವ ಪ್ಲಾನ್ ಹೆಚ್ಚಳ ?
ಜಿಯೋ ತಮ್ಮ 19 ಪ್ಲ್ಯಾನ್‌ಗಳಿಗೆ ಬೆಲೆ ಏರಿಕೆ ಮಾಡಿದೆ. ಇದರಲ್ಲಿ 17 ಪ್ರೀಪೇಡ್‌ ಪ್ಲ್ಯಾನ್‌ಗಳಾಗಿದ್ದು, ಎರಡು ಪೋಸ್ಟ್‌ಪೇಡ್‌ ಪ್ಲ್ಯಾನ್‌ಗಳಾಗಿವೆ. ಅದರಲ್ಲಿ 155 ರೂಪಾಯಿಯ ರಿಚಾರ್ಜ್‌ ಪ್ಲ್ಯಾನ್‌ 189 ರೂಪಾಯಿಗೆ ಬದಲಾಗಿದ್ದರೂ ವ್ಯಾಲಿಡಿಟಿ ಮಾತ್ರ 28 ದಿನಗಳಿಗೆ ಇರಲಿದೆ. ಇನ್ನು 209 ರೂಪಾಯಿಯ ರಿಚಾರ್ಜ್‌ ಪ್ಲ್ಯಾನ್‌ 249 ರೂಪಾಯಿ ಆಗಲಿದೆ. ಇದರಲ್ಲಿ 40 ರೂಪಾಯಿ ಏರಿಕೆಯಾಗಿದೆ. ಇದರ ವ್ಯಾಲಿಡಿಟಿ ಕೂಡ 28 ದಿನ ಇರಲಿದೆ. ಇನ್ನು ಡೇಟಾ ಬೆನಿಫಿಟ್‌ಗಳಲ್ಲಿ ಈ ಪ್ಲ್ಯಾನ್‌ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಯಾವಾಗಿಂದ ಜಾರಿ?
ಜುಲೈ 3ನೇ ತಾರೀಕಿನಿಂದ ಈ ಪ್ಲಾನ್ ಜಾರಿಯಾಗಲಿದೆ. ಈ ಮೂಲಕ ಜಿಯೋ ಗ್ರಾಹಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಎನ್ನುವಂತೆ ಆಗಿದೆ. ಅಂದಹಾಗೆ ಎರಡೂವರೆ ವರ್ಷಗಳಲ್ಲಿ ಮೊದಲ ಬಾರಿಗೆ ಬೆಲೆ ಹೆಚ್ಚಳವಾಗಿದೆ.

Lucknow: ಸಾರ್ವಜನಿಕರ ಮಧ್ಯೆ ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿದ ಮಹಿಳೆ; ವೀಡಿಯೋ ವೈರಲ್‌

Advertisement
Advertisement
Advertisement