For the best experience, open
https://m.hosakannada.com
on your mobile browser.
Advertisement

H D kumarswamy: ಬಿಜೆಪಿ ಜೊತೆ ಜೆಡಿಎಸ್ ವಿಲೀನ ?! ಎಚ್ ಡಿ ಕುಮಾರಸ್ವಾಮಿ ಸ್ಪಷ್ಟೀಕರಣ !!

H D kumarswamy: ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ ಆಗಲಿದೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಈಗ ಈ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಅವರು ಸ್ಪಷ್ಟೀಕರಣ ನೀಡಿದ್ದಾರೆ.
09:46 AM Apr 22, 2024 IST | ಸುದರ್ಶನ್
UpdateAt: 09:55 AM Apr 22, 2024 IST
h d kumarswamy  ಬಿಜೆಪಿ ಜೊತೆ ಜೆಡಿಎಸ್ ವಿಲೀನ    ಎಚ್ ಡಿ ಕುಮಾರಸ್ವಾಮಿ ಸ್ಪಷ್ಟೀಕರಣ
Advertisement

H D Kumarswamy: 2024ರ ಲೋಕಸಭಾ ಚುನಾವಣೆ ನಿಮಿತ್ತ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸಮರದಲ್ಲಿ ಸೆಣೆಸಲು ರೆಡಿಯಾಗಿವೆ. ಆದರೆ ಈ ಬೆನ್ನಲ್ಲೇ ಮುಂದೆ ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ ಆಗಲಿದೆ ಎಂಬ ಸುದ್ದಿ ಕೂಡ ಬಾರಿ ಚರ್ಚೆಯಾಗುತ್ತಿದೆ. ಈಗ ಈ ಬಗ್ಗೆ ಎಚ್ ಡಿ ಕುಮಾರಸ್ವಾಮಿ(H D kumarswamy)ಅವರು ಸ್ಪಷ್ಟೀಕರಣ ನೀಡಿದ್ದಾರೆ.

Advertisement

ಇದನ್ನೂ ಓದಿ: Black Ants: ಕಪ್ಪು ಇರುವೆಗಳು ನಿಮ್ಮ ಮನೆಯಲ್ಲಿ ಹರಿದಾಡುತ್ತಿವೆಯೇ? ಈ ರೀತಿ ಆದ್ರೆ ಏನು ಅರ್ಥ ಗೊತ್ತಾ? : ಗೊತ್ತಾದ್ರೆ ಅಚ್ಚರಿ ಪಡ್ತೀರಾ

ನಮ್ಮ ಪಕ್ಷವನ್ನು ಬೇರೆ ಯಾವುದೇ ಪಕ್ಷದೊಂದಿಗೆ ವಿಲೀನಗೊಳಿಸುವ ಪ್ರಶ್ನೆಯೇ ಇಲ್ಲ, ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಬಿಜೆಪಿ(BJP) ನಮ್ಮನ್ನು ಚೆನ್ನಾಗಿ ನಡೆಸಿಕೊಂಡರೆ ಮತ್ತು ಎಲ್ಲವೂ ಸುಗಮವಾಗಿ ನಡೆದರೆ ಅಂತಹ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ. ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್-ಬಿಜೆಪಿ(BJP-JDS) ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಶನಿವಾರ ಹೇಳಿದ್ದಾರೆ.

Advertisement

ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಾಗಿಂದಲೂ ಜೆಡಿಎಸ್ ಕುರಿತು ಕಾಂಗ್ರೆಸ್(Congress) ಕೆಂಡಕಾರುತ್ತಿದೆ. ಜಾತ್ಯಾತೀತ ಪಕ್ಷ ಕೋಮುವಾದಿ ಪಕ್ಷದೊಂದಿಗೆ ಸೇರಿದೆ, ಅದು ಬಿಜೆಪಿ ಬಿ ಟೀಮ್ ಎಂದು ಬಣ್ಣಿಸಿ ಸದ್ಯದಲ್ಲೇ ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗಲಿದೆ ಎಂದೂ ಹೇಳಿತ್ತು. ಇದೀಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸುದ್ದಿಸಂಸ್ಥೆ ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಎಲ್ಲದಕ್ಕೂ ತಕ್ಕ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಸಂಸದನಾದ ತಕ್ಷಣ 700 ಮದರಸಾಗಳನ್ನು ತೆರೆಯುವೆ- ಬದ್ರುದ್ದೀನ್‌ ಅಜ್ಮಲ್‌

Advertisement
Advertisement
Advertisement