ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Jaipur: ಮದುವೆಯ ಹಣ ಉಳಿಸಲು ತನ್ನ 17 ಮೊಮಕ್ಕಳಿಗೂ ಒಂದೇ ಬಾರಿ ಮದುವೆ ಮಾಡಿದ ಅಜ್ಜ

Jaipur: ವಯೋವೃದ್ಧ ಮದುವೆಯ ಹಣವನ್ನು ಉಳಿಸಲು ತನ್ನ 17 ಜನ ಮೊಮ್ಮಕ್ಕಳು ಮರಿ ಮೊಮ್ಮಕ್ಕಳನ್ನು ಎರಡೇ ದಿನದಲ್ಲಿ ಮದುವೆ ಮಾಡಿಸಿರುವ ಘಟನೆ ನಡೆದಿದೆ.
10:15 AM Apr 11, 2024 IST | ಸುದರ್ಶನ್
UpdateAt: 10:15 AM Apr 11, 2024 IST

Jaipur: ಇಡೀ ವಿಶ್ವದಲ್ಲಿಯೇ ಅತ್ಯಂತ ದುಬಾರಿ ಮದುವೆಗಳು ನಡೆಯುವ ಏಕೈಕ ದೇಶವೆಂದರೆ ಅದು ನಮ್ಮ ಭಾರತ. ಭಾರತದಲ್ಲಿ ಪೋಷಕರು ತಮ್ಮ ಜೀವಮಾನವಿಡಿ ಕೂಡಿಡುವವ ಹಣವನ್ನು ತಮ್ಮ ಮಕ್ಕಳ ಮದುವೆಗೆ ಖರ್ಚು ಮಾಡುವವರಿದ್ದಾರೆ‌. ಅಷ್ಟರ ಮಟ್ಟಿಗೆ ಭಾರತದಲ್ಲಿ ಮದುವೆಗೆ ಹಣ ವಿನಿಯೋಗಿಸುತ್ತಾರೆ.

Advertisement

ಆದರೆ ಇಲ್ಲೊಬ್ಬ ವಯೋವೃದ್ಧ ಮದುವೆಯ ಹಣವನ್ನು ಉಳಿಸಲು ತನ್ನ 17 ಜನ ಮೊಮ್ಮಕ್ಕಳು ಮರಿ ಮೊಮ್ಮಕ್ಕಳನ್ನು ಎರಡೇ ದಿನದಲ್ಲಿ ಮದುವೆ ಮಾಡಿಸಿರುವ ಘಟನೆ ನಡೆದಿದೆ.

 

Advertisement

ವಿಚಿತ್ರ ಎನಿಸಿದರೂ ಈ ಘಟನೆ ನಡೆದದ್ದು ಮಾತ್ರ ಸತ್ಯ. ಅಸಲಿಗೆ ಈ ಮದುವೆಗಳು ನಡೆದಿರುವುದು ರಾಜಸ್ಥಾನದ ಬಿಕಾನೇ‌ರ್ ಜಿಲ್ಲೆಯಲ್ಲಿ. ಮದುವೆ ಮಾಡಿಸಿದ ವಯೋವೃದ್ದನನ್ನು ರಾಜಸ್ಥಾನದ ನೋಖಾ ಮಂಡಲದ ಲಾಲ್ಮದೇಸರ್ ಗ್ರಾಮದ ಸುರ್ಜರಾಮ್ ಗೋಡಾರಾ ಎಂದು ಗುರುತಿಸಲಾಗಿದೆ. ಈತ ಗ್ರಾಮದ ಮುಖ್ಯಸ್ಥನಾಗಿದ್ದು, ಗ್ರಾಮದಲ್ಲಿ ಸುರ್ಜಾರಾಮ್ ಅವರ ವಂಶಸ್ಥರು ಅವಿಭಕ್ತ ಕುಟುಂಬವಾಗಿ ವಾಸಿಸುತ್ತಿದ್ದಾರೆ.

 

ಸುರ್ಜಾರಾಮ್ ಕುಟುಂಬದಲ್ಲಿ 17 ಮೊಮ್ಮಕ್ಕಳಿದ್ದು, ಎಲ್ಲರೂ ಸಹ ಮದುವೆ ವಯಸ್ಸಿಗೆ ಬಂದಿದ್ದರು‌. ಅದರಿಂದ ವೃದ್ಧ ಪ್ರತಿಯೊಬ್ಬರ ಮದುವೆಯನ್ನು ಮಾಡಲು ಹಣ ಹೆಚ್ಚು ಖರ್ಚಾಗುತ್ತದೆ ಎಂದು ತಿಳಿದು ಒಟ್ಟಿಗೆ ಅಷ್ಟು ಜನಕ್ಕೂ ಮದುವೆ ಮಾಡಿಸಿದ್ದಾನೆ. ಮದುವೆಯನ್ನು ಎರಡು ದಿನಗಳಲ್ಲಿ ಮಾಡಲು ನಿರ್ಧರಿಸಿ, ಮದುವೆಗೆ ಒಂದೇ ಆಮಂತ್ರಣ ಪತ್ರವನ್ನು ಸಿದ್ಧಪಡಿಸಿದ್ದ.

 

ನಂತರ, ಸಂಬಂಧಿಕರನ್ನು ಕರೆಸಿ ಏಪ್ರಿಲ್ ಒಂದರಂದು ಐದು ಮೊಮ್ಮಕ್ಕಳು ವಿವಾಹಮಾಡಿದ್ದು. ಮರುದಿನ, 12 ಮೊಮ್ಮಕ್ಕಳು ಮದುವೆ ಮಾಡಿಸಿದ್ದಾರೆ. ಈ ಮದುವೆ ಸ್ಥಳೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಒಂದೇ ಕುಟುಂಬದಲ್ಲಿ ಸಾಮೂಹಿಕ ವಿವಾಹ ನಡೆದಿರುವುದು ಇದೇ ಮೊದಲು ಎಂದು ಸ್ಥಳೀಯರು ಹೇಳುತ್ತಾರೆ.

Advertisement
Advertisement
Next Article