ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Jail: ಜೈಲಿನ 40 ಕೈದಿಗಳು ಡ್ರಗ್ಸ್ ಸೇವಿಸಿರುವುದು ಪಕ್ಕಾ..! ಹಾಗಾದರೆ ಯಾವ ಜೈಲಿನಲ್ಲಿ ನಡೆಯಿತು ಈ ಘಟನೆ. ?

Jail: ಕೆಲ ದಿನಗಳ ಹಿಂದೆ ಮಂಗಳೂರಿನ ನಗರದ ಜೈಲಿನ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲಿ ಅವರಿಗೆ ಸಿಕ್ಕ ವಸ್ತುಗಳ ಬಗ್ಗೆ ಕೇಳಿದರೆ ನೀವೇ ಅಚ್ಚರಿ ಪಡುತ್ತೀರಿ.
06:42 PM Aug 01, 2024 IST | ಸುದರ್ಶನ್
UpdateAt: 06:42 PM Aug 01, 2024 IST
Advertisement

Jail: ಸಮಾಜದಲ್ಲಿ ಬೇಡದ ಕೆಲಸ ಮಾಡಿ ಅನೇಕರು ಜೈಲು ಪಾಲಾಗುತ್ತಾರೆ. ಶಿಕ್ಷೆಯಾದರೆ ಮುಂದಿನ ಜೀವನವನ್ನಾದರು ಸಾಬೀತಿನಿಂದ ಕಳೆದಾರು ಎನ್ನುವ ನಂಬಿಕೆ. ಶಿಕ್ಷೆ ಅಂತ ಜೈಲಿಗೆ ಹೋದವರು ಅಲ್ಲಿಯಾದರು ನಿಯತ್ತಿನಿಂದ ಇರುತ್ತಾರಾ ? ಅದು ಇಲ್ಲ. ಕಳೆದ ಕೆಲ ದಿನಗಳ ಹಿಂದೆ ಮಂಗಳೂರಿನ ನಗರದ ಜೈಲಿನ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲಿ ಅವರಿಗೆ ಸಿಕ್ಕ ವಸ್ತುಗಳ ಬಗ್ಗೆ ಕೇಳಿದರೆ ನೀವೇ ಅಚ್ಚರಿ ಪಡುತ್ತೀರಿ.

Advertisement

ಪೊಲೀಸರು ನಡೆಸಿದ ರೈಡ್ ಸಮಯದಲ್ಲಿ ಕೈದಿಗಳಿಂದ ಅಪಾರ ಪ್ರಮಾಣದ ಗಾಂಜಾ ವಶಕ್ಕೆ ತೆಗೆದುಕೊಳ್ಳಲಾಗಿದೆ. ಹಾಗೆ ಅನುಮಾನದ ಮೇಲೆ ಕೆಲ ಕೈದಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಕೈದಿಗಳು ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ. ಈ ಕುರಿತು ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, 'ಜೈಲಿನಲ್ಲಿ 300ಕ್ಕೂ ಅಧಿಕ ಕೈದಿಗಳಿದ್ದಾರೆ. ಅವರಲ್ಲಿ ಅನೇಕರ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ 110 ಮಂದಿ ಕೈದಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಇದೀಗ ವರದಿ ಬಂದಿದ್ದು ಅವರಲ್ಲಿ 40 ಮಂದಿ ಡ್ರಗ್ಸ್ ತೆಗೆದುಕೊಂಡಿರುವುದು ವೈದ್ಯಕೀಯ ವರದಿಯಲ್ಲಿ ಸಾಬೀತಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಜೈಲಿನಲ್ಲಿ ಒಂದಷ್ಟು ಕಾನೂನು ಕ್ರಮಗಳಿರುತ್ತವೆ. ಅದರಂತೆ ಕೈದಿಗಳು ನಡೆದುಕೊಳ್ಳಬೆಕಾಗುತ್ತದೆ. ಜೈಲಿನಲ್ಲಿ ಮೊಬೈಲ್ ಬಳಕೆ ನಿಷೇಧ. ಆದ್ರೂ ಜೈಲಧಿಕಾರಿಗಳ ಕಣ್ಣು ತಪ್ಪಿಸಿ ಮೊಬೈಲ್ ಬಳಸಲಾಗುತ್ತಿದೆ. ದಾಳಿ ವೇಳೆ ಸುಮಾರು ಇಪ್ಪತೈದು ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ. ಇಷ್ಟೆಲ್ಲಾ ಕಟ್ಟೆಚ್ಚರ ನಡುವೆಯೂ ಮಾದಕ ಪದಾರ್ಥ ಮತ್ತು ಮೊಬೈಲ್ ಹೇಗೆ ಒಳಗೆ ಕೈದಿಗಳ ಕೈ ಸೇರುತ್ತಿದೆ ಎನ್ನುವ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತರು ವಿವರಣೆ ನೀಡಿದರು.

Advertisement

Advertisement
Advertisement