For the best experience, open
https://m.hosakannada.com
on your mobile browser.
Advertisement

Ambarish: ಅಂಬರೀಷ್​ಗೆ ‘ಮಂಡ್ಯದ ಗಂಡು’ ಎಂದು ಬಿರುದು ಕೊಟ್ಟಿದ್ದು ಇವರೆ

Ambarish: ಅಂಬರೀಶ್‌ ಹೆಸರು ಹೇಳುವಾಗ 'ಮಂಡ್ಯದ ಗಂಡು' ಎಂದು ತಾನೇ ತಾನಾಗಿ ಬಂದು ಬಿಡುತ್ತದೆ. ಆದರೆ ಈ ಬಿರುದು ಕೊಟ್ಟವರು ಯಾರು ಗೊತ್ತೇ? 
01:26 PM May 30, 2024 IST | ಸುದರ್ಶನ್
UpdateAt: 01:39 PM May 30, 2024 IST
ambarish  ಅಂಬರೀಷ್​ಗೆ ‘ಮಂಡ್ಯದ ಗಂಡು’ ಎಂದು ಬಿರುದು ಕೊಟ್ಟಿದ್ದು ಇವರೆ

Ambarish: ಕನ್ನಡದ ಸರ್ವಶ್ರೇಷ್ಟ ಕಲಾವಿದರಲ್ಲಿ ಒಬ್ಬರಾದ ಅಂಬರೀಶ್‌(Ambarish) ಅವರು 'ಮಂಡ್ಯದ ಗಂಡು' ಎಂದೇ ನಾಡಿಗೆ ಚಿರಪರಿತ. ಅಂಬರೀಶ್‌ ಹೆಸರು ಹೇಳುವಾಗ 'ಮಂಡ್ಯದ ಗಂಡು' ಎಂದು ತಾನೇ ತಾನಾಗಿ ಬಂದು ಬಿಡುತ್ತದೆ. ಆದರೆ ಈ ಬಿರುದು ಕೊಟ್ಟವರು ಯಾರು ಗೊತ್ತೇ?

Advertisement

ಇದನ್ನೂ ಓದಿ: What's App Group: ಅಪರಿಚಿತ ವಾಟ್ಸಾಪ್ ಗ್ರೂಪ್‌ಗಳಿಂದ ನಿಮಗೆ ಮೆಸೇಜ್ ಬರ್ತಾ ಇದ್ಯ? ಡೇಂಜರ್, ಮೊದಲು ಅಲರ್ಟ್ ಆಗಿ

ಅವರಿಗೆ ಮಂಡ್ಯದ ಗಂಡು(Mandyada Gandu) ಎಂದು ಟೈಟಲ್ ನೀಡಿದ್ದು ರೈತ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡ ಅವರು. ಹೌದು, ರೆಬೆಲ್ ಸ್ಟಾರ್ ಅಂಬರೀಷ್ ಗೆ ಮಂಡ್ಯದ ಗಂಡು ಬಿರುದು ಕೊಟ್ಟಿದ್ದು ನಾನೆ ಎಂದು ಅಂಬರೀಷ್ ತೀರಿಕೊಂಡಾಗ ಮಾಜಿ ಸಂಸದ, ಕಾವೇರಿ ನೀರಾವರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ(G Madegouda) ಅಂಬಿ ಸಾವಿಗೆ ಸಂತಾಪ ಸೂಚಿಸಿದ್ದರು. ಇದೀಗ ನಿನ್ನೆ (ಮೇ 29) ಅಂಬರೀಷ್ ಅವರ ಜನ್ಮದಿನದ ಆದ ಕಾರಣ, ಈ ಪ್ರಯುಕ್ತ ಈ ವಿಚಾರವನ್ನು ಮತ್ತೆ ನೆನಪಿಸಿದ್ದೇವೆ.

Advertisement

ಇದನ್ನೂ ಓದಿ: Mangalore: ಕುಳಾಯಿ ಬಾರ್‌ ಬಳಿ ಕೋಡಿಕೆರೆ ಗ್ಯಾಂಗ್‌ನಿಂದ ರೌಡಿಶೀಟರ್‌ ಮೇಲೆ ತಲವಾರು ದಾಳಿ, ಕೇಸು ದಾಖಲು

ಸಿನಿಮಾದಿಂದಲೂ ಬಂದಿತ್ತು ಹೆಸರು:

1994ರಲ್ಲಿ ಅಂಬರೀಷ್ ಅವರು ‘ಮಂಡ್ಯದ ಗಂಡು’ ಸಿನಿಮಾ ಮಾಡಿದರು. ಅಂಬಿ ಜೊತೆ ಬಿರುದು ಸೇರಿಕೊಳ್ಳಲು ಈ ಸಿನಿಮಾ ಕೂಡ ಕಾರಣ ಆಯಿತು.

ಅಂಬರೀಷ್ ಅವರ ಸಿನಿ ಜರ್ನಿ:

ಅಂಬರೀಷ್ ಅವರು 20ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದರು. ವಿಷ್ಣುವರ್ಧನ್ ನಟನೆಯ ‘ನಾಗರಹಾವು’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿ ಗಮನ ಸೆಳೆದರು. ಆ ಬಳಿಕ ಅವರಿಗೆ ಹಲವು ಆಫರ್ಗಳು ಬರುತ್ತಾ ಹೋದವು. ವಿಲನ್ ಆಗಿ, ಹೀರೋ ಆಗಿ, ಪೊಲೀಸ್ ಅಧಿಕಾರಿಯಾಗಿ ಅವರು ಮಿಂಚಿದರು. ಅವರು ಮಾಡಿದ ಪಾತ್ರಗಳು ಗಮನ ಸೆಳೆದಿವೆ. 2019ರಲ್ಲಿ ರಿಲೀಸ್ ಆದ ‘ಕುರುಕ್ಷೇತ್ರ’ ಅವರ ನಟನೆಯ ಕೊನೆಯ ಸಿನಿಮಾ.

Advertisement
Advertisement
Advertisement