ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Rolls Royce car: ಒಂದು ರೋಲ್ಸ್ ರಾಯ್ಸ್ ಕಾರು ತಯಾರಿಸಲು ಬೇಕು 8 ಗೂಳಿಗಳ ಚರ್ಮ - ಸೋ ಒಂದು ಕಾರಿಗೆ ಬೀಳುತ್ತೆ 8 ಗೂಳಿಗಳ ಬಲಿ !!

Rolls Royce car: ಕುತೂಹಲದ ಸಂಗತಿ ಎಂದರೆ ಒಂದು ರೋಲ್ಸ್ ರಾಯ್ಸ್ ಕಾರು ತಯಾರಿಸಲು ಬರೋಬ್ಬರಿ 8 ಗೂಳಿಗಳ ಚರ್ಮ(Bull skin) ಬೇಕಂತೆ !!
10:57 PM Apr 18, 2024 IST | ಸುದರ್ಶನ್
UpdateAt: 10:57 PM Apr 18, 2024 IST
Advertisement

Rolls Royce car: ಆಟೋ ಉದ್ಯಮದಲ್ಲಿ ರೋಲ್ಸ್ ರಾಯ್ಸ್ (Rolls Royce car) ಕಾರುಗಳದ್ದೇ ಬೇರೆ ರೀತಿ ಹವಾ. ಸ್ಟಾಂಡರ್ಡ್ ಯಿಂದ ಹಿಡಿದು ಅದರ ಫ್ಯೂಚರ್ಸ್ ಗಳ ಲೆವೆಲ್ ಬೇರೆ. ವಿಶ್ವದ ದುಬಾರಿ ಕಾರುಗಳಲ್ಲಿ ಒಂದಾಗಿರುವ ಇದು ಭಾರತದಲ್ಲೂ ಅತ್ಯಂತ ಜನಪ್ರಿಯವಾಗಿದೆ. ಕುತೂಹಲದ ಸಂಗತಿ ಎಂದರೆ ಒಂದು ರೋಲ್ಸ್ ರಾಯ್ಸ್ ಕಾರು ತಯಾರಿಸಲು ಬರೋಬ್ಬರಿ 8 ಗೂಳಿಗಳ ಚರ್ಮ(Bull skin) ಬೇಕಂತೆ !!

Advertisement

 

ಹೌದು, ಕೋಟಿ ಕೋಟಿ ಕೊಟ್ಟು ಕೊಂಡುಕೊಳ್ಳುವ ರೋಲ್ಸ್ ರಾಯ್ಸ್ ಕಾರನ್ನು ಅತ್ಯಂತ ನಾಜೂಕಾಗಿ, ಸೂಕ್ಷ್ಮವಾಗಿ ತಯಾರಿಸಲಾಗುತ್ತದೆ. ಪ್ರತಿ ಕಾರನ್ನು ಅಷ್ಟೇ ಕಾಳಜಿ, ಆಸಕ್ತಿ, ಜಾಗರೂಕತೆಯಿಂದ ನಿರ್ಮಾಣ ಮಾಡಲಾಗುತ್ತದೆ. ಇದರ ತಯಾರಿಕೆಗೆ ದುಡ್ಡು ಮಾತ್ರವಲ್ಲ ಗೂಳಿಗಳ ಚರ್ಮ ಕೂಡ ಬೇಕು. ಅದೂ ಕೂಡ ಒಂದಲ್ಲ, ಎರಡಲ್ಲ ಬರೋಬ್ಬರಿ 8 ಗೂಳಿಗಳ ಚರ್ಮ. ಹೀಗಾಗಿ ಒಂದು ರೋಲ್ಸ್ ರಾಯ್ಸ್ ಕಾರಿಗೆ 8 ಗೂಳಿಗಳ ಬಲಿ ಬೀಳುತ್ತೆ.

Advertisement

ಗೂಳಿ ಚರ್ಮದ ಬಳಕೆ ಎಲ್ಲಿ ?

ರೋಲ್ಸ್ ರಾಯ್ಸ್ ಕಾರಿನ ಆಸನಗಳು, ಕುಶನ್, ಸೀಟು ಅತ್ಯಂತ ಅರಾಮದಾಯಕವಾಗಿರುತ್ತವೆ. ಈ ಆರಾಮದಾಯಕ ಅನುಭವ ಬರಲು ಗೂಳಿಗಳ ಚರ್ಮವೇ ಬೇಕು. ಹೀಗಾ ಸಾಫ್ಟ್ ಕುಶನ್ ಸೀಟು ಹಾಗೂ ಕಾರಿನ ಇಂಟಿಯರ್‌ನಲ್ಲಿ ಕಂಪನಿ ಗೂಳಿಗಳ ಚರ್ಮವನ್ನು ಮಾತ್ರ ಬಳಕೆ ಮೃಡುತ್ತೆ. ಅದು ಕೂಡ 8 ಗೂಳಿ ಚರ್ಮ !! ವಿಶೇಷ ಏನೆಂದರೆ ಕೇವಲ ಯೂರೋಪ್ ಗೂಳಿ ತಳಿಗಳ ಚರ್ಮವನ್ನು ಮಾತ್ರ ಬಳಕೆ ಮಾಡಲಾಗುತ್ತದೆ. ಯಾಕೆಂದರೆ ಈ ಗೂಳಿಗಳು ಸೊಳ್ಳೆ ಹಾಗೂ ಇತರ ಕೀಟಗಳ ಕಡಿತದಿಂದ ಮುಕ್ತವಾಗಿರುವುದರಿಂದ ಇವುಗಳ ಬಳಕೆಯೇ ಹೆಚ್ಚು.

ಅಂದಹಾಗೆ ಕಂಪೆನಿಯು ಮೊದಲೆಲ್ಲ ಹಸುಗಳ ಚರ್ಮ ಬಳಕೆ ಮಾಡುತ್ತಿತ್ತು. ಆದರೆ ಹಸುಗಳ ಗರ್ಭಾವಸ್ಥೆಯಲ್ಲಿ ಚರ್ಮಗಳು ಹಿಗ್ಗುವುದರಿಂದ ಸ್ಟ್ರೆಚ್ ಮಾರ್ಕ್ ಇರಲಿದೆ ಅನ್ನೋ ಕಾರಣಕ್ಕೆ ಗೂಳಿಗಳ ಚರ್ಮ ಬಳಕೆ ಮಾಡುತ್ತದೆ.

Advertisement
Advertisement