Rohith Sharma: ಕ್ರಿಕೆಟ್ ಲೋಕಕ್ಕೆ ರೋಹಿತ್ ಶರ್ಮ ವಿದಾಯ ?!
Rohith Sharma: ಸದ್ಯ ದೇಶಾದ್ಯಂತ IPL-2024 ಭರ್ಜರಿಯಾಗಿ ತನ್ನ ಇನ್ನಿಂಗ್ಸ್ ಶುರುಮಾಡಿದೆ. ಅಭಿಮಾನಿಗಳೆಲ್ಲರೂ ತಮ್ಮ ನೆಚ್ಚಿನ ತಂಡದ ಗೆಲುವಿಗೆ ಪ್ರಾರ್ಥನೆ ನಡೆಸುತ್ತಿದ್ದಾರೆ. ಈ ನಡುವೆ ಭಾರತೀಯ ಕ್ರಿಕೆಟಿಗರಿಗೆ ಶಾಕಿಂಗ್ ನ್ಯೂಸ್ ಒಂದು ಎದುರಾಗಿದ್ದು, ಟೀಂ ಇಂಡಿಯಾಗೆ ರೋಹಿತ್ ಶರ್ಮ(Rohith Sharma) ವಿದಾಯ ಹೇಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: SSLC Exam Result: ಎಸ್ಸೆಸ್ಸೆಲ್ಸಿ ಫಲಿತಾಂಶ ಎಪ್ರಿಲ್ ಕೊನೆಯ ವಾರದಲ್ಲಿ?
https://x.com/45Fan_Prathmesh/status/1778669288997671211?t=Mh3I3f8XlAohlLpBukhUag&s=08
ಹೌದು, ಜೂನ್ 01ರಿಂದ ಯುಎಸ್‌ಎ(USA) ಹಾಗೂ ವೆಸ್ಟ್ ಇಂಡೀಸ್(West Indies) ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. ಈ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳಿಗೆ ಅಘಾತ ಎದುರಾಗಿದ್ದು, ಮುಂಬರುವ ಟಿ-20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: B.S.Yediyurappa: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಬಿಎಸ್ ಯಡಿಯೂರಪ್ಪ ಧ್ವನಿ ಮಾದರಿ ಸಂಗ್ರಹ
ರೋಹಿತ್ ಶರ್ಮ ಹೇಳಿದ್ದೇನು?
ಕ್ರಿಕೆಟ್ ಗೆ ರೋಹಿತ್ ಶರ್ಮ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂಬುದು ಸಾಕಷ್ಟು ವೈರಲ್ ಆದ ಬಳಿಕ ಕೊನೆಗೂ ಶರ್ಮ ಈ ವಿಚಾರವಾಗಿ ಮೌನ ಮುರಿದಿದ್ದಾರೆ. ಬ್ರೇಕ್‌ಫಾಸ್ಟ್ ವಿಥ್ ಚಾಂಪಿಯನ್ಸ್’ ಎಂಬ ಟಿವಿ ಶೋದಲ್ಲಿ ಮಾತನಾಡಿದ ಅವರು, “ನಾನು ನಿಜವಾಗಿಯೂ ನಿವೃತ್ತಿಯ ಬಗ್ಗೆ ಯೋಚನೆ ಮಾಡಿಲ್ಲ. ಪ್ರಸ್ತುತ ನಾನು ಉತ್ತಮವಾಗಿ ಕ್ರಿಕೆಟ್ ಆಡುತ್ತಿದ್ದೇನೆ. ಹೀಗಾಗಿ ಇನ್ನೂ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡುತ್ತೇನೆ ಎಂದಿದ್ದಾರೆ.
ಅಲ್ಲದೆ ನಾನು ನಿಜವಾಗಿಯೂ ಭಾರತಕ್ಕಾಗಿ ವಿಶ್ವಕಪ್ ಗೆಲ್ಲಲು ಬಯಸುತ್ತಿದ್ದೇನೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ 2025ರಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಖಂಡಿತಾ ಗೆಲುವು ಸಾಧಿಸಲಿದೆ ಎಂದು ಆಶಿಸುತ್ತೇನೆ ಎಂದು ಹೇಳುವ ಮೂಲಕ ರೋಹಿತ್ ಮುಂದಿನ ವರ್ಷ ಟೆಸ್ಟ್ ಚಾಂಪಿಯನ್ ಶಿಪ್ ಬಳಿಕ ನಿವೃತ್ತಿ ನೀಡುವ ಸಾಧ್ಯತೆ ಬಗ್ಗೆ ತಿಳಿಸಿದ್ದಾರೆ.
ಅಂದಹಾಗೆ ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದಿತ್ತು. ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ವಿಶ್ವಕಪ್ ಕನಸು ನಸಾಗದೇ ಉಳಿಯಿತು. ರೋಹಿತ್ ಶರ್ಮಾ ಪ್ರಸ್ತುತ 35 ವರ್ಷ ವಯಸ್ಸಿನವರಾಗಿದ್ದಾರೆ.