For the best experience, open
https://m.hosakannada.com
on your mobile browser.
Advertisement

Ram Setu Secrets: ರಾಮ ಸೇತುವೆ ಬಗ್ಗೆ ಇದುವರೆಗೂ ಯಾರೂ ತಿಳಿಯದ ರೋಚಕ ಸತ್ಯಗಳನ್ನು ಬಿಚ್ಚಿಟ್ಟ ಇಸ್ರೋ !!

Ram Setu Secrets: ರಾಮಸೇತು (Ramasetu)ವಿನ ಕುರಿತು ಇಸ್ರೋ ಹೊಸ ನಕ್ಷೆಯೊಂದನ್ನು ಸಿದ್ಧಪಡಿಸಿದ್ದು, ರಾಮಸೇತುವಿನ ಮೂಲವನ್ನು ದೃಢಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎನ್ನಲಾಗಿದೆ.
11:45 AM Jul 11, 2024 IST | ಕಾವ್ಯ ವಾಣಿ
UpdateAt: 11:45 AM Jul 11, 2024 IST
ram setu secrets  ರಾಮ ಸೇತುವೆ ಬಗ್ಗೆ ಇದುವರೆಗೂ ಯಾರೂ ತಿಳಿಯದ ರೋಚಕ ಸತ್ಯಗಳನ್ನು ಬಿಚ್ಚಿಟ್ಟ ಇಸ್ರೋ
Advertisement

Ram Setu Secrets: ರಾಮಾಯಣದಲ್ಲಿ ರಾಮನ ವಾನರಸೇನೆಯು, ರಾವಣನ ರಾಜ್ಯವಾದ ಶ್ರೀಲಂಕಾವನ್ನು ತಲುಪಲು ಸಂಪರ್ಕವಾಗಿದ್ದ ಆಡಮ್ಸ್ ಬ್ರಿಡ್ಜ್ ಅಥವಾ ರಾಮಸೇತುವಿನ ಬಗ್ಗೆ ಭಾರತದ ಧಾರ್ಮಿಕ ಗ್ರಂಥಗಳಲ್ಲಿ ಹಲವು ವಿಷಯಗಳನ್ನು ಉಲ್ಲೇಖ ಮಾಡಲಾಗಿದೆ. ಆದ್ರೆ ಇದೆಲ್ಲದರ ಹೊರತು ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಪುರಾತನ ‘ರಾಮ ಸೇತು’ವಿನ ಕುರಿತಾದ ಮತ್ತಷ್ಟು ರಹಸ್ಯಗಳನ್ನು (Ram Setu Secrets) ಬೆಳಕಿಗೆ ತಂದಿದೆ. ಹೌದು, ರಾಮಸೇತು (Ramasetu)ವಿನ ಕುರಿತು ಇಸ್ರೋ ಹೊಸ ನಕ್ಷೆಯೊಂದನ್ನು ಸಿದ್ಧಪಡಿಸಿದ್ದು, ರಾಮಸೇತುವಿನ ಮೂಲವನ್ನು ದೃಢಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎನ್ನಲಾಗಿದೆ.

Advertisement

‘ಸೈಂಟಿಫಿಕ್ ರಿಪೋರ್ಟ್ಸ್‌’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಇಸ್ರೋ ವಿಜ್ಞಾನಿಗಳು ಅಮೆರಿಕದ ‘ಐಸಿಇಸ್ಯಾಟ್‌-2’ ಉಪಗ್ರಹದ ಸುಧಾರಿತ ಲೇಸರ್ ತಂತ್ರಜ್ಞಾನವನ್ನು ಬಳಸಿಕೊಂಡು ಮುಳುಗಿದ ಸೇತುವೆಯ ಹೆಚ್ಚಿನ ರೆಸಲ್ಯೂಶನ್ (10 ಮೀ. ರೆಸಲ್ಯೂಶನ್) ನಕ್ಷೆಯನ್ನು ಅಕ್ಟೋಬರ್ 2018ರಿಂದ ಅಕ್ಟೋಬರ್ 2023ರವರೆಗೆ ಅಧ್ಯಯನ ಮಾಡಿ ರಚಿಸಿದ್ದಾರೆ.

ಮುಖ್ಯವಾಗಿ ಗಿರಿಬಾಬು ದಂಡಬಾತುಲ (Dandabathula Giribabu) ನೇತೃತ್ವದ ಸಂಶೋಧನಾ ತಂಡವು ನೀರೊಳಗಿನ ವಿವರವಾದ ನಕ್ಷೆಯು ಧನುಷ್ಕೋಡಿಯಿಂದ ತಲೈಮನ್ನಾರ್‌ವರೆಗಿನ ಸೇತುವೆಯ ಸಂಪರ್ಕವನ್ನು ಸಾಬೀತುಪಡಿಸಿದೆ. ಈ ಪೈಕಿ ಶೇ. 99.98ರಷ್ಟು ಭಾಗ ಆಳವಿಲ್ಲದ ನೀರಿನಲ್ಲಿ ಮುಳುಗಿದೆ. ಜೊತೆಗೆ ಮನ್ನಾರ್ ಕೊಲ್ಲಿ ಮತ್ತು ಪಾಕ್ ಜಲಸಂಧಿ ನಡುವೆ 11 ಕಿರಿದಾದ ಕಾಲುವೆಗಳನ್ನು ಕಂಡುಹಿಡಿದಿದೆ. ಈ ಕಾಲುವೆಗಳು ಸಮುದ್ರದ ಅಲೆಗಳಿಂದ ರಾಮಸೇತುವನ್ನು ಸಂರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

Advertisement

ಇನ್ನು ಈ ಸೇತುವೆ ಬಗ್ಗೆ ರಾಮೇಶ್ವರಂ ದೇವಾಲಯದ ದಾಖಲೆಗಳು, ರಾಮ ಸೇತುವೆಯು ಕ್ರಿ. ಶ. 1480 ರವರೆಗೂ ಸಮುದ್ರ ಮಟ್ಟಕ್ಕಿಂತ ಮೇಲಿತ್ತು. ಆದರೆ ಅದು ಪ್ರಬಲವಾದ ಚಂಡಮಾರುತದಿಂದ ಧ್ವಂಸವಾಗಿತ್ತು ಎಂದು ಸೂಚಿಸುತ್ತವೆ.

Heart Attack: ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ವೈದ್ಯ, ಗಾಯಕ ಹೃದಯಾಘಾತಕ್ಕೆ ಬಲಿ

Advertisement
Advertisement
Advertisement