For the best experience, open
https://m.hosakannada.com
on your mobile browser.
Advertisement

Zameer Ahmed: ಮುಸ್ಲಿಮರ ಕೆಲಸವನ್ನು ಈಶ್ವರ ಖಂಡ್ರೆ ತಲೆಬಾಗಿ ಮಾಡಬೇಕು-ಜಮೀರ್‌ ಅಹ್ಮದ್‌ ಹೇಳಿಕೆ

Zameer Ahmed: ಲೋಕಸಭಾ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಅವರ ಪುತ್ರ ಸಾಗರ್‌ ಖಂಡ್ರೆ ಮುಸ್ಲಿಂ ಮತಗಳಿಂದ ಗೆದ್ದಿದ್ದು, ಮುಸ್ಲಿಮರ ಕೆಲಸವನ್ನು ಸಚಿವ ಈಶ್ವರ ಖಂಡ್ರೆ ಅವರು ತಲೆಬಾಗಿ ಮಾಡಬೇಕಾಗುತ್ತದೆ.
12:56 PM Jun 25, 2024 IST | ಸುದರ್ಶನ್
UpdateAt: 12:56 PM Jun 25, 2024 IST
zameer ahmed  ಮುಸ್ಲಿಮರ ಕೆಲಸವನ್ನು ಈಶ್ವರ ಖಂಡ್ರೆ ತಲೆಬಾಗಿ ಮಾಡಬೇಕು ಜಮೀರ್‌ ಅಹ್ಮದ್‌ ಹೇಳಿಕೆ

Zameer Ahmed: ಮುಸ್ಲಿಮರ ಕೆಲಸವನ್ನು ಸಚಿವ ಈಶ್ವರ ಖಂಡ್ರೆ ಅವರು ತಲೆಬಾಗಿ ಮಾಡಬೇಕಾಗುತ್ತದೆ. ಏಕೆಂದರೆ ಲೋಕಸಭಾ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಅವರ ಪುತ್ರ ಸಾಗರ್‌ ಖಂಡ್ರೆ ಮುಸ್ಲಿಂ ಮತಗಳಿಂದ ಗೆದ್ದಿದ್ದು ಎಂದು ತಮ್ಮದೇ ಪಕ್ಷದ ಸಚಿವರ ವಿರುದ್ಧ ಬೀದರ್‌ನಲ್ಲಿ ನಡೆದ ವಕ್ಫ್‌ ಅದಾಲತ್‌ನಲ್ಲಿ ಸಚಿವ ಜಮೀರ್‌ ಅಹ್ಮದ್‌ ಅವರು ಹೇಳಿಕೆ ನೀಡಿದ್ದು, ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

Advertisement

Udupi: ಗರುಡ ಗ್ಯಾಂಗ್‌ ವಾರ್‌ ಆರೋಪಿಗಳಿಂದ ಜೈಲಿನಲ್ಲೇ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ; ದೂರು ದಾಖಲು

ಖಬರಸ್ತಾನ (ಸ್ಮಶಾನ) ಗೆ ಅರಣ್ಯ ಪ್ರದೇಶದ ಜಾಗವೆಂದು ವ್ಯಕ್ತಿಯೊಬ್ಬ ಅಳಲು ತೋಡಿಕೊಂಡ ಸಂದರ್ಭದಲ್ಲಿ ಈ ಕುರಿತು ಈಶ್ವರ್‌ ಖಂಡ್ರೆ ಅವರ ಜೊತೆ ಮಾತನಾಡುತ್ತೀನಿ ಎಂದು ಹೇಳಿ, ನಾನು ಮಾಡಿಸ್ತೀನಿ ಬಿಡು ಸರ್ವೆ ನಂಬರ್‌ 93 ಖಬರಸ್ತಾನ ಜಾಗದ ವಿಚಾರ ಮಾತನಾಡಿ ಅಕ್ಕಪಕ್ಕದಲ್ಲಿ ಎಲ್ಲೂ ಜಾಗ ಇಲ್ವ ಎಂದು ಆ ವ್ಯಕ್ತಿ ಬಳಿ ಜಮೀರ್‌ ಅಹ್ಮದ್‌ ಕೇಳಿದ್ದಾರೆ.

Advertisement

ಅದಕ್ಕೆ ಆ ವ್ಯಕ್ತಿ ಅಕ್ಕಪಕ್ಕ ಎಲ್ಲೂ ಖಾಲಿ ಜಾಗವಿಲ್ಲ ಎಂದು ಹೇಳಿದದ್ದು, ಈ ವ್ಯಕ್ತಿ ಮಾತಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಜಮೀರ್‌ ಅಹ್ಮದ್‌ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು, ಜನಾಕ್ರೋಶವುಂಟಾಗಿದೆ.

Rama Mandir: ಸೋರುತಿಹುದು ಅಯೋಧ್ಯೆಯ ರಾಮ ಮಂದಿರ, ಮೊದಲ ಮಳೆಗೆ ಗರ್ಭಗುಡಿಯಲ್ಲಿ ತುಂಬಿ ತುಳುಕುತಿಹುದು ಮಾಳಿಗೆಯ ನೀರು !!

Advertisement
Advertisement
Advertisement