For the best experience, open
https://m.hosakannada.com
on your mobile browser.
Advertisement

IPL-2024 Virat Kohli: ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಅಪರೂಪದ ದಾಖಲೆ : IPL ನಲ್ಲಿ ಈ ಮೈಲಿಗಲ್ಲು ತಲುಪಿದ ಮೊದಲ ಆಟಗಾರ

IPL-2024 Virat Kohli: IPL-2024 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಓಪನರ್ ವಿರಾಟ್ ಕೊಹ್ಲಿ(Virat Kohli) ಮತ್ತೊಮ್ಮೆ ಅಧ್ಬುತ ಇನ್ನಿಂಗ್ಸ್ ಆಡಿದ್ದಾರೆ
03:27 PM May 10, 2024 IST | ಸುದರ್ಶನ್
UpdateAt: 03:34 PM May 10, 2024 IST
ipl 2024 virat kohli  ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಅಪರೂಪದ ದಾಖಲೆ   ipl ನಲ್ಲಿ ಈ ಮೈಲಿಗಲ್ಲು ತಲುಪಿದ ಮೊದಲ ಆಟಗಾರ
Advertisement

IPL-2024 Virat Kohli: IPL-2024 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಓಪನರ್ ವಿರಾಟ್ ಕೊಹ್ಲಿ(Virat Kohli) ಮತ್ತೊಮ್ಮೆ ಅಧ್ಬುತ ಇನ್ನಿಂಗ್ಸ್ ಆಡಿದ್ದಾರೆ. ಈ ಮೆಗಾ ಈವೆಂಟ್‌ನ ಭಾಗವಾಗಿ, ಧರ್ಮಶಾಲಾ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್(Virat Kohli) ಪಂಜಾಬ್ ಬೌಲರ್ ಗಳನ್ನು ಹಿಂಡಿ ಹಿಪ್ಪೆ ಮಾಡಿದ್ದಾರೆ.

Advertisement

ಇದನ್ನೂ ಓದಿ: IPL-2024: ಪಂಜಾಬ್ ಕಿಂಗ್ಸ್ ವಿರುದ್ಧ RCBಗೆ ಭರ್ಜರಿ ಗೆಲುವು : ಕೊಹ್ಲಿ ಅಬ್ಬರದ ಆಟಕ್ಕೆ ನಲುಗಿದ ಪಂಜಾಬ್ ಕಿಂಗ್ಸ್ : IPL ನಿಂದ ಪಂಜಾಬ್ ಔಟ್

ಆದರೆ ಕೂಹ್ಲಿ(Virat kohli) ಶತಕ ಗಳಿಸುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡರು. 47 ಎಸೆತಗಳನ್ನು ಎದುರಿಸಿದ ಕಿಂಗ್ ಕೊಹ್ಲಿ(Virat Kohli) 7 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 92 ರನ್ ಗಳಿಸಿ ಔಟಾದರು. ಇವರೊಂದಿಗೆ ರಜಿತ್ ಪಾಟಿದಾರ್ (55) ಮತ್ತು ಕ್ಯಾಮರೂನ್ ಗ್ರೀನ್ (46) ಮಿಂಚಿದ್ದರಿಂದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತು.

Advertisement

ಇದನ್ನೂ ಓದಿ: Kitchen Tips: ಪಾತ್ರೆಯಿಂದ ಹಾಲು ಉಕ್ಕಿ ಚೆಲ್ಲುತ್ತೆ ಅನ್ನೋ ಟೆನ್ಷನ್ ಬಿಡಿ! ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!

ಹಾಗೂ ಈ ಪಂದ್ಯದಲ್ಲಿ ವಿರಾಟ್(Virat Kohli) ಅರ್ಧಶತಕ ಸಿಡಿಸಿದ್ದು ಹಲವು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಲ್ಲಿ ಬರೆದಿದ್ದಾರೆ. ಅವರು ಪಂಜಾಬ್ ಕಿಂಗ್ಸ್(Punjab kings)ವಿರುದ್ಧ ಐಪಿಎಲ್‌ ನಲ್ಲಿ 1000 ರನ್‌ ಗಳ ಮೈಲಿಗಲ್ಲನ್ನು ತಲುಪಿದರು.

ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೂರು ತಂಡಗಳ ವಿರುದ್ಧ 1000 ರನ್ ಪೂರೈಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಕೊಹ್ಲಿ(Virat Kohli) ಪಾತ್ರರಾಗಿದ್ದಾರೆ. ಐಪಿಎಲ್‌ನಲ್ಲಿ(IPL) ಕೊಹ್ಲಿ(Virat Kohli) ಪಂಜಾಬ್‌ಗಿಂತ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1000 ರನ್‌ಗಳ ಮೈಲುಗಲ್ಲನ್ನು ತಲುಪಿದ್ದರು.

ಅದೇ ರೀತಿ ಈ ವರ್ಷದ ಐಪಿಎಲ್(IPL) ಸೀಸನ್ ನಲ್ಲೂ ಕೊಹ್ಲಿ 600 ರನ್ ಗಳ ಗಡಿ ದಾಟಿದ್ದರು. ಈ ವರ್ಷದ ಋತುವಿನಲ್ಲಿ 12 ಪಂದ್ಯಗಳನ್ನು ಆಡಿರುವ ಕೊಹ್ಲಿ(Virat Kohli) 634 ರನ್ ಗಳಿಸಿದ್ದರು.

ಹಾಗಾಗಿ ಐಪಿಎಲ್ (IPL) ನಲ್ಲಿ 600 ರನ್ ಗಳಿಸಿದ ಕೆಎಲ್ ರಾಹುಲ್ ದಾಖಲೆಯನ್ನು ಕೊಹ್ಲಿ(Virat Kohli) ಸರಿಗಟ್ಟಿದ್ದಾರೆ. ಕೊಹ್ಲಿ 4 ಸೀಸನ್‌ ಗಳಲ್ಲಿ 600 ಪ್ಲಸ್ ರನ್ ಗಳಿಸಿದ್ದಾರೆ. ರಾಹುಲ್ ಕೂಡ 4 ಸೀಸನ್‌ ಗಳಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

Advertisement
Advertisement
Advertisement