ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

IPL 2024: ಪ್ಲೇ ಆಫ್ ತಲುಪಿದ ರಾಯಲ್ ಚಾಲೆಂಜರ್ಸ್, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಬೀಗಿದ ಬೆಂಗಳೂರು !

IPL 2024 : ಐಪಿಎಲ್ 2024 ರ 68 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಮಣಿಸಿದೆ.
08:06 AM May 19, 2024 IST | Praveen Chennavara
UpdateAt: 10:12 AM May 19, 2024 IST
Advertisement

IPL 2024 : ಐಪಿಎಲ್ 2024 ರ 68 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಮಣಿಸಿದೆ.

Advertisement

ಇದನ್ನೂ ಓದಿ: 1 ಕೆ.ಜಿ. ಭಾರತೀಯ ಕೇಸರಿ ಬೆಲೆ 5 ಲಕ್ಷ ರೂಪಾಯಿ ಸನಿಹಕ್ಕೆ ; ಬೆಲೆಗಾರ ,ಮಾರಾಟಗಾರ ಫುಲ್ ಖುಷ್ !

ಈ ಜಯದೊಂದಿಗೆ ಫಾಫ್ ಡುಪ್ಲೆಸಿಸ್ ತಂಡವು ಈ ಸೀಸನ್​ನಲ್ಲಿ ನಾಲ್ಕನೇ ತಂಡವಾಗಿ ಪ್ಲೇ ಆಫ್ ತಲುಪಿದೆ. ಇದಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಅರ್ಹತೆ ಪಡೆದಿದ್ದವು. ಅದೇ ಹೊತ್ತಿಗೆ ಈ ಸೋಲಿನೊಂದಿಗೆ ಸಿಎಸ್​ಕೆ ಪಯಣ ಅಂತ್ಯಗೊಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಯಿತು.

Advertisement

ಸಂಕ್ಷಿಪ್ತ ಸ್ಕೋ‌ರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 218/5 (ಎಫ್ ಡು ಪ್ಲೆಸಿಸ್ 54, ವಿರಾಟ್ ಕೊಹ್ಲಿ 47, ರಜತ್ ಪಾಟಿದಾರ್ 41, ಕ್ಯಾಮರೂನ್ ಗ್ರೀನ್ ಔಟಾಗದೆ 38, ಶಾರ್ದೂಲ್ ಠಾಕೂರ್ 2-61)

ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 191/7

(ರಚಿನ್ ರವೀಂದ್ರ 62, ಅಜಿಂಕ್ಯ ರಹಾನೆ 33, ರವೀಂದ್ರ ಜಡೇಜ ಔಟಾಗದೆ 42, ಎಂ.ಎಸ್. ಧೋನಿ 25, ಗ್ರೀನ್ 1- 18, ಮ್ಯಾಕ್ಸ್ ವೆಲ್ 1-25, ಸಿರಾಜ್ 2
1-35, ದಯಾಳ್ 2-42)

ಇದನ್ನೂ ಓದಿ: High Court: ಪೊಲೀಸ್ ಠಾಣೆಗಳು ವ್ಯಾಪಾರಿ ಕೇಂದ್ರವಲ್ಲ ಎಂದ ಹೈಕೋರ್ಟ್ ; ಹಣಕಾಸಿನ ವ್ಯಾಪಾರಕ್ಕೆ ನಿಂತರೆ ಪೊಲೀಸರಿಗೆ ಕಠಿಣವಾದ ಪಾಠ ಕಲಿಸಬೇಕಾದೀತು ಎಚ್ಚರಿಸಿದ ನ್ಯಾಯಪೀಠ

Advertisement
Advertisement