For the best experience, open
https://m.hosakannada.com
on your mobile browser.
Advertisement

IPL-2024: ಪಂಜಾಬ್ ಕಿಂಗ್ಸ್ ವಿರುದ್ಧ RCBಗೆ ಭರ್ಜರಿ ಗೆಲುವು : ಕೊಹ್ಲಿ ಅಬ್ಬರದ ಆಟಕ್ಕೆ ನಲುಗಿದ ಪಂಜಾಬ್ ಕಿಂಗ್ಸ್ : IPL ನಿಂದ ಪಂಜಾಬ್ ಔಟ್

IPL -2024: ಧರ್ಮಶಾಲಾ ಮೈದಾನದಲ್ಲಿ(Dharmashala criket Stediam) ನಡೆದ RCB ವಿರುದ್ಧದ ಪಂದ್ಯದಲ್ಲಿ ಪಂಜಾಬ್ 60 ರನ್ ಗಳಿಂದ ಸೋತು ಸುಣ್ಣವಾಗಿದೆ.
03:00 PM May 10, 2024 IST | ಸುದರ್ಶನ್
UpdateAt: 03:05 PM May 10, 2024 IST
ipl 2024  ಪಂಜಾಬ್ ಕಿಂಗ್ಸ್ ವಿರುದ್ಧ rcbಗೆ ಭರ್ಜರಿ ಗೆಲುವು   ಕೊಹ್ಲಿ ಅಬ್ಬರದ ಆಟಕ್ಕೆ  ನಲುಗಿದ ಪಂಜಾಬ್ ಕಿಂಗ್ಸ್   ipl ನಿಂದ ಪಂಜಾಬ್ ಔಟ್
Advertisement

IPL-2024: ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ಕಥೆ ಕೊನೆಗೊಂಡಿದೆ. ಪಂಜಾಬ್(Punjab kings) ತನ್ನ ಪ್ಲೇಆಫ್(playoff) ಭರವಸೆಯನ್ನು ಜೀವಂತವಾಗಿರಿಸಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಇದೀಗ ಸೋಲನ್ನಪ್ಪಿದೆ. ಧರ್ಮಶಾಲಾ ಮೈದಾನದಲ್ಲಿ(Dharmashala criket Stediam) ನಡೆದ RCB ವಿರುದ್ಧದ ಪಂದ್ಯದಲ್ಲಿ ಪಂಜಾಬ್ 60 ರನ್ ಗಳಿಂದ ಸೋತು ಸುಣ್ಣವಾಗಿದೆ.

Advertisement

ಇದನ್ನೂ ಓದಿ: Janhavi Kapoor: ಜಾನ್ವಿ ಕಪೂರ್ ಮದುವೆ ಬಗ್ಗೆ ಮತ್ತೊಮ್ಮೆ ವದಂತಿ : ಅಸಲಿಗೆ ಏನಾಯ್ತು ಗೊತ್ತಾ? : ಇಲ್ಲಿ ನೋಡಿ

ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ(RCB) 7 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತ್ತು. ‌ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ಪೈಕಿ ವಿರಾಟ್ ಕೊಹ್ಲಿ(Virat Kohli) ಮತ್ತೊಮ್ಮೆ ಅದ್ಭುತ ಇನ್ನಿಂಗ್ಸ್ ಆಡಿದರು. ವಿರಾಟ್ 47 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 92 ರನ್ ಗಳಿಸಿ ಔಟಾದರು.

Advertisement

ಇದನ್ನೂ ಓದಿ: Longest National Highway: ಕರ್ನಾಟಕದ ಅತೀ ಉದ್ದದ ರಾಷ್ಟ್ರೀಯ ಹೆದ್ದಾರಿ ಬಗ್ಗೆ ನಿಮಗೆ ಗೊತ್ತಾ?

ಕೊಹ್ಲಿ(Virat Kohli) ಜೊತೆಗೆ ರಜಿತ್ ಪಾಟಿದಾರ್ (55) ಮತ್ತು ಕ್ಯಾಮರೂನ್ ಗ್ರೀನ್ (46) ಪ್ರಮುಖ ಇನ್ನಿಂಗ್ಸ್ ಆಡಿದರು. ಪಂಜಾಬ್ ಕಿಂಗ್ಸ್(Punjab kings) ಬೌಲರ್‌ಗಳ ಪೈಕಿ ಹರ್ಷಲ್ ಪಟೇಲ್ 3 ವಿಕೆಟ್ ಪಡೆದರು.

RCB ಯ 242 ರನ್ ಗಳ ಬೃಹತ್ ಗುರಿಯೊಂದಿಗೆ ಕಣಕ್ಕೆ ಇಳಿದ ಪಂಜಾಬ್ ಕಿಂಗ್ಸ್(Punjab kings)17 ಓವರ್ ಗಳಲ್ಲಿ 181 ರನ್ ಗಳಿಗೆ ಆಲೌಟಾಯಿತು. ಆರ್‌ಸಿಬಿ ಬೌಲರ್‌ಗಳ ಪೈಕಿ ವೇಗಿ ಮೊಹಮ್ಮದ್ ಸಿರಾಜ್ ಮೂರು ವಿಕೆಟುಗಳನ್ನು ಕಬಳಿಸಿದರು, ಕರಣ್ ಶರ್ಮಾ ಮತ್ತು ಸ್ವಪ್ಟಿಲ್ ತಲಾ ಎರಡು ವಿಕೆಟ್ ಪಡೆದರು.

ಪಂಜಾಬ್ ಬ್ಯಾಟ್ಸ್ ಮನ್ ಗಳಲ್ಲಿ(Punjab kings)ರಿಲೆ ರೂಸೋ (61) ಗರಿಷ್ಠ ಸ್ಕೋರರ್ ಆಗಿದ್ದರೆ, ಶಶಾಂಕ್ ಸಿಂಗ್ (37) ಸ್ವಲ್ಪ ಹೊತ್ತು ಮಿಂಚಿದರು. ಮತ್ತು ಈ ಗೆಲುವಿನೊಂದಿಗೆ RCB ತನ್ನ ಪ್ಲೇ ಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

Advertisement
Advertisement
Advertisement