ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Rama mandir Inauguration: ರಾಮ ಮಂದಿರ ಉದ್ಘಾಟನೆಗೆ ಪಿಎಂ ಬಿಟ್ರೆ ಇಡೀ ದೇಶದಲ್ಲೇ ಈ ಒಂದು ರಾಜ್ಯದ ಸಿಎಂ ಗೆ ಮಾತ್ರ ಆಹ್ವಾನ !!

11:13 PM Dec 25, 2023 IST | ಹೊಸ ಕನ್ನಡ
UpdateAt: 11:15 PM Dec 25, 2023 IST
Advertisement

Rama mandir Inauguration: ಜನವರಿ 22ರಂದು ಇಡೀ ದೇಶದೆಲ್ಲಡೆ ಸಂಭ್ರಮ ಮನೆಮಾಡಲಿದೆ. ಏಕೆಂದರೆ 500 ವರ್ಷಗಳ, ಕೋಟ್ಯಾಂತರ ಹಿಂದೂ ಭಕ್ತಾದಿಗಳ ಕನಸಾದ ಅಯೋಧ್ಯಾ ರಾಮಮಂದಿರದ ಉದ್ಘಾಟನೆ ಹಾಗೂ ರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆ ದಿನದಂದು ಅಯೋಧ್ಯೆಗೇ ಪ್ರಧಾನಿ ಮೋದಿ(PM Modi) ಸೇರಿದಂತೆ ಗಣ್ಯಾತಿ ಗಣ್ಯರು ಆಗಮಿಸಲಿದ್ದಾರೆ. ಆದರೆ ವಿಶೇಷ ಅಂದ್ರೆ ಪಿಎಂ ಬಿಟ್ಟರೆ ಇಡೀ ದೇಶದಲ್ಲಿ ಈ ಒಂದು ರಾಜ್ಯದ ಸಿಎಂ ಗೆ ಮಾತ್ರ ಆಹ್ವಾನ ನೀಡಲಾಗಿದೆ.

Advertisement

ಇದನ್ನು ಓದಿ: Kota shrinvasa poojary: ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ಮರು ನೇಮಕ!!

ಈಗಾಗಲೇ ಹೇಳಿದಂತೆ ಬರೋಬ್ಬರಿ 500 ವರ್ಷಗಳ ಕಾಯುವಿಕೆಯ ನಂತರ, ರಾಮಲಲ್ಲಾ ತನ್ನ ಭವ್ಯವಾದ ದೇಗುಲಕ್ಕೆ ಮರಳಲಿದ್ದು, ರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ನೂರಾರು ಗಣ್ಯಮಾನರು ಆಗಮಿಸುತ್ತಿದ್ದಾರೆ. ಗಣ್ಯರನ್ನು ಆಹ್ವಾನಿಸುವ ಕಾರ್ಯವು ನಡೆಯುತ್ತಿದೆ. ಗಣ್ಯರು ಅಂದ್ರೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರಿಗೂ ಆಹ್ವಾನ ಹೋಗಿದ್ದು, ಅವರೆಲ್ಲರೂ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ನೀವು ಭಾವಿಸಬಹುದು. ಆದರೆ ವಿಶೇಷ ಅಂದ್ರೆ ಈ ಒಂದು ರಾಜ್ಯದ ಮುಖ್ಯಮಂತ್ರಿಗೆ ಬಿಟ್ಪು ಬೇರೆ ಯಾವ ರಾಜ್ಯದ ಸಿಎಂ ಗೂ ರಾಮಂದಿರ ಉಧ್ಘಾಟನೆಗೆ(Rama mandir Inauguration) ಆಹ್ವಾನ ನೀಡಿಲ್ಲ.

Advertisement

 

ಹೌದು, ಮುಖ್ಯಮಂತ್ರಿಗಳ ಪೈಕಿ ಯೋಗಿ ಆದಿತ್ಯನಾಥ್‌ಗೆ ಮಾತ್ರ ಆಹ್ವಾನ ನೀಡಲಾಗಿದೆ. ಇನ್ಯಾವುದೇ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಆಹ್ವಾನ ನೀಡುತ್ತಿಲ್ಲ. ಈ ಕುರಿತಂತೆ ಜನ್ಮಭೂಮಿ ಟ್ರಸ್ಟ್ ಸ್ಪಷ್ಟನೆ ನೀಡಿದ್ದು, ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರನ್ನು ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಸಿಲ್ಲ ಎಂದು ಹೇಳಿದೆ.

ಯಾಕೆ ಮುಖ್ಯಮಂತ್ರಿಗಳಿಗೆ ಆಹ್ವಾನ ಇಲ್ಲ?

ರಾಮಲಾಲಾ ಪಟ್ಟಾಭಿಷೇಕದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಅಯೋಧ್ಯೆಗೆ ತಲುಪುವ ಸಾಧ್ಯತೆಯಿದೆ, ಅಂತಹ ಪರಿಸ್ಥಿತಿಯಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ಪ್ರೋಟೋಕಾಲ್‌ಗಳನ್ನು ಅನುಸರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಭದ್ರತಾ ಕಾರಣಗಳಿಗಾಗಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶಾದ್ಯಂತ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರನ್ನು ಆಹ್ವಾನಿಸುವುದಿಲ್ಲ ಎಂದು ನಿರ್ಧರಿಸಲಾಗಿದೆ.

Related News

Advertisement
Advertisement