ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Room no-13: ಯಾವುದೇ ಹೋಟೆಲ್, ಲಾಡ್ಜ್ ಗಳಲ್ಲಿ Room No- 13 ಇರೋದಿಲ್ಲ ಯಾಕೆ ?! ಇಲ್ಲಿದೆ ನೋಡಿ ಅಚ್ಚರಿ ರಹಸ್ಯ

12:52 PM Jan 10, 2024 IST | ಹೊಸ ಕನ್ನಡ
UpdateAt: 01:44 PM Jan 10, 2024 IST
Advertisement

Room no-13: ಮನೆಮಂದಿ ಅಥವಾ ಫ್ರೆಂಡ್ಸ್ ಎಲ್ಲರೂ ಹೊರಗಡೆ ಟ್ರಿಪ್ ಹೋದಾಗ ಹೋಟೆಲ್ ಅಥವಾ ಲಾಡ್ಜ್ ಗಳಲ್ಲಿ ಉಳಿಯೋದು ಸಾಮಾನ್ಯ. ಹೀಗೆ ಉಳಿಯುವಾಗ ನೀವು ಅಲ್ಲಿ ಈ ವಿಶೇಷವನ್ನೇನಾದರೂ ಗಮನಿಸಿದ್ದೀರಾ? ಏನಪ್ಪಾ ಅಂತಾದ್ದು ಎಂದು ಯೋಚಿಸ್ತಿದ್ದೀರಾ? ಏನಂದ್ರೆ ಯಾವುದೇ ಹೋಟೆಲ್ ನಲ್ಲಿ ಕೊಠಡಿ ಸಂಖ್ಯೆ 13(Room no-13) ಇರೋದಿಲ್ಲ. 12 ರೂಮ್ ನಂಬರ್ ಬಳಿಕ 14 ನಂಬರ್ ಕಂಟಿನ್ಯೂ ಆಗುತ್ತದೆ. ಅರೇ, ಹೌದಾ ಎಂದು ಈಗ ಆಲೋಚಿಸಬೇಡಿ. ಇದು ಸತ್ಯ.

Advertisement

ಹೌದು, ನೀವು ಮೇಲಿದನ್ನು ಸರಿಯಾಗಿ ಓದಿದ್ದೀರಿ. ಬರೀ ರೂಮ್ ಮಾತ್ರವಲ್ಲ ಯಾವುದಾದರೂ ಒಂದು ಬಿಲ್ಡಿಂಗ್ ಕೂಡ 12 ಮಹಡಿಗಳಿಗಿಂತ ಹೆಚ್ಚು ಎತ್ತರವಾಗಿದ್ದರೆ ಅಂದರೆ 15, 20 ಅಂತಸ್ತುಗಳಷ್ಟು ಎತ್ತರ ಇದ್ದರೆ ಅದರಲ್ಲಿ 13ನೇ ಮಹಡಿ ಇರೋದೆ ಇಲ್ಲ. ನೇರವಾಗಿ 14ನೇ ಮಹಡಿ ಇರುತ್ತೆ ಇದು ನಿಮಗೆ ವಿಚಿತ್ರವಾಗಿ ತೋರಬಹುದು, ಆದರೆ ಅದು ನಿಜ. ಇದು ವಿಚಿತ್ರ ಎನಿಸಿದರೂ ಸಹ ಅದರ ಹಿಂದಿನ ಕಾರಣ ತಿಳಿದರೆ ನಿಜಕ್ಕೂ ನಮ್ಮನ್ನು ಅಚ್ಚರಿಗೆ ದೂಡುತ್ತದೆ. ಹಾಗಿದ್ರೆ ಏನದು ಕಾರಣ ನೋಡೋಣ ಬನ್ನಿ.

ಇದನ್ನೂ ಓದಿ: Lecturer Recruitment: ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ; ಈ ಕೂಡಲೇ ಅರ್ಜಿ ಸಲ್ಲಿಸಿ!!!

Advertisement

13 ನಂಬರ್ ಬಳಸಿದೆ ಏನಾಗುತ್ತದೆ?

13ನೇ ನಂಬರ್ ಬಳಸದೇ ಇರುವುದಕ್ಕೆ ಟ್ರೈಸ್ಕೈಡೆಕಾಫೋಬಿಯಾ ಎಂದು ಕರೆಯುತ್ತಾರೆ. ಇದರರ್ಥ 13ನೇ ನಂಬರ್ ಮೇಲಿನ ಭಯ ಎಂಬುದಾಗಿದೆ. ಅಂದರೆ, 13ನೇ ನಂಬರ್ ದುರಾದೃಷ್ಟ ಅಥವಾ ಸಾವಿನ ಸಂಖ್ಯೆ ಎಂಬ ನಂಬಿಕೆ ಜನರಲ್ಲಿದೆ.

ಕಾರಣವೇನು?

ಯಾವುದೇ ಹೋಟೆಲ್ ಅಥವಾ ವಸತಿ ಕಟ್ಟಡದಲ್ಲಿ 13 ಸಂಖ್ಯೆಗಳು ತುಂಬಾ ಕಡಿಮೆ ಇರುವುದು ಏಕೆ ಅನ್ನೋದರ ಹಿಂದೆ ಯಾವುದೇ ಧಾರ್ಮಿಕ ನಂಬಿಕೆಯಿಲ್ಲ, ಅಥವಾ ಯಾವುದೇ ಸಾಂಪ್ರದಾಯಿಕತೆ ಇಲ್ಲ, ಆದರೆ numerology ಪ್ರಕಾರ ಸಂಖ್ಯೆ 13 ಶುಭವೆಂದು ಪರಿಗಣಿಸಲಾಗುವುದಿಲ್ಲ. ಕಾರಣ ಏನೆಂದರೆ, 13ನೇ ನಂಬರ್ ಸಾವಿನ ನಂಬರ್ ಅಂತೆ. ಕಿಶ್ಚಿಯನ್ನರ ದೇವರು ಜೀಸಸ್ ಶುಕ್ರವಾರ 13ನೇ ತಾರೀಖಿನಂದು ಮೃತಪಟ್ಟರು. ಹೀಗಾಗಿ ಈ ಸಂಖ್ಯೆಯನ್ನು ದುರಾದೃಷ್ಟ ಮತ್ತು ಅಪಶಕುನ ಎಂದು ಕರೆಯಲಾಗುತ್ತದೆ. ಹೀಗಾಗಿ ಕಟ್ಟಡದ 13ನೇ ಮಹಡಿಯನ್ನು ಅನೇಕ ಹೋಟೆಲ್ಗಳಲ್ಲಿ ಸ್ಕಿಪ್ ಮಾಡುವ ಮೂಲಕ ಭಯವನ್ನು ಹೋಗಲಾಡಿಸುವ ಪ್ರಯತ್ನ ಮಾಡಲಾಗುತ್ತದೆ.

ಇಷ್ಟೇ ಅಲ್ಲದೆ Numerology ಪ್ರಕಾರ, ಸಂಖ್ಯೆ 12 ಅನ್ನು ಪರಿಪೂರ್ಣತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ಮತ್ತೊಂದು ಸಂಖ್ಯೆಯನ್ನು ಸೇರಿಸುವುದನ್ನು ದುರಾದೃಷ್ಟದ (Bad Luck) ಸಂಕೇತವೆಂದು ಪರಿಗಣಿಸಬಹುದು. ಹಾಗಾಗಿ ಸಂಖ್ಯೆ 13 ಅನ್ನು numerologyಯಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ, ಅನೇಕ ಜನರು ಈ ಸಂಖ್ಯೆಯನ್ನು ಕೆಟ್ಟ ಶಕುನದ (bad luck) ಸಂಕೇತವೆಂದು ಪರಿಗಣಿಸುತ್ತಾರೆ. ಹಾಗಾಗಿಯೇ ಹೆಚ್ಚಿನವರು ಈ ಸಂಖ್ಯೆಯ ಬಗ್ಗೆ ಭಯ ಪಡುತ್ತಾರೆ.

ಜೊತೆಗೆ ಇನ್ನೂ 1800ರ ದಶಕದ ಉತ್ತರಾರ್ಧದಲ್ಲಿ, ಓಜಾ ಬೋರ್ಡ್‌ಗಳು ಹುಟ್ಟಿಕೊಂಡವು. ಸತ್ತವರೊಂದಿಗೆ ಸಂಪರ್ಕ ಸಾಧಿಸಲು ಮಾರ್ಗವನ್ನು ಹುಡುಕುತ್ತಿರುವವರಿಗೆ 13ನೇ ಸಂಖ್ಯೆಯು ಒಂದು ಪೋರ್ಟಲ್ ಆಗಿತ್ತು ಎಂದು ನಂಬಲಾಗಿದೆ. ವಾಸ್ತವವಾಗಿ, ಇದು ಒಬ್ಬರ ಆರೋಗ್ಯದ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿವೆ. 13ನೇ ಸಂಖ್ಯೆಯಿಂದ ಭಯಭೀತರಾಗಿರುವ ಜನರು ಹೆಚ್ಚಿನ ಮಟ್ಟದ ಉದ್ವೇಗ ಮತ್ತು ಆತಂಕವನ್ನು ಹೊಂದಿರುತ್ತಾರೆ ಎಂದು ಸಾಬೀತಾಗಿದೆ.

ಇನ್ನು 13 ಸಂಖ್ಯೆಯನ್ನು ಮೊದಲು ಚೀನಾದಲ್ಲಿ ಅಶುಭ ಎಂದು ಪರಿಗಣಿಸಲಾಯಿತು ಮತ್ತು ನಂತರ ಕ್ರಮೇಣ 13 ಸಂಖ್ಯೆಯನ್ನು ವಿಶ್ವದಾದ್ಯಂತ ಕೆಟ್ಟ ಶಕುನವೆಂದು ಪರಿಗಣಿಸಲಾಯಿತು ಎಂದು ಹೇಳಲಾಗುತ್ತದೆ. ಆದರೆ ಅದರ ಹಿಂದಿನ ಕಥೆಯ ಬಗ್ಗೆ ಹೆಚ್ಚಿನವರಿಗೆ ಇನ್ನೂ ತಿಳಿದಿಲ್ಲ. ವಿಶ್ವದ ಅನೇಕ ದೇಶಗಳಲ್ಲಿ, 13 ಸಂಖ್ಯೆಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅನೇಕ ದೇಶಗಳಲ್ಲಿ ಅನೇಕ ಜನರು ಸಂಖ್ಯೆ 13 ಅನ್ನು ದೆವ್ವಗಳು ಮತ್ತು ಫ್ಯಾಂಟಮ್‌ಗಳಿಗೆ ಸಂಬಂಧ ಹೊಂದಿದೆ ಎನ್ನುತ್ತಾರೆ. ಅನೇಕ ಜನರು ಸಂಖ್ಯೆ 13 ರ ಫೋಬಿಯಾದಿಂದ ಬಳಲುತ್ತಿದ್ದಾರೆ, ಅವರು ಸಂಖ್ಯೆ 13 ಅನ್ನು ನೋಡಲು ಹೆದರುತ್ತಾರೆ. ಫ್ರಾನ್ಸ್ ನಲ್ಲಿ, ಮೇಜಿನ ಜೊತೆ 13 ಕುರ್ಚಿಗಳನ್ನು ಹೊಂದಿರುವುದು ಸಹ ದುರದೃಷ್ಟಕರವೆಂದು ಪರಿಗಣಿಸಲಾಗುತ್ತದೆ.

Advertisement
Advertisement