ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

UPI Payment : ಬೇಗ ಇದೊಂದು ಕೆಲಸ ಮಾಡಿ, ಇಲ್ಲಾಂದ್ರೆ ಜನವರಿಯಿಂದ ಫೋನ್ ಪೇ, ಗೂಗಲ್ ಪೇ ಸೇರಿ ವರ್ಕ್ ಆಗಲ್ಲ ಯಾವುದೇ UPI ಪೇಮೆಂಟ್ಸ್!!

11:53 AM Dec 19, 2023 IST | ಹೊಸ ಕನ್ನಡ
UpdateAt: 11:53 AM Dec 19, 2023 IST
Advertisement

UPI Payment: ಭಾರತದ UPI ವಹಿವಾಟು ಇಂದು ಜಗತ್ಪ್ರಸಿದ್ದಿಯಾಗಿದೆ. ಕ್ಷಣಾರ್ಧದಲ್ಲಿ, ನಿಂತಲ್ಲಿಯೇ ಹಣವನ್ನು ವರ್ಗಾವಣೆ ಮಾಡುವ ಈ ವ್ಯವಸ್ಥೆ ಎಲ್ಲರಿಗೂ ಪ್ರಿಯವಾಗಿದೆ. ಹೆಚ್ಚಿನವರು ಬಳಸುತ್ತಿದ್ದಾರೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ ಮೂಲಕ ಇದರ ವಹಿವಾಟು ಸಲೀಸಾಗಿ ನಡೆಯುತ್ತಿದೆ. ಸದ್ಯ ಇದರಲ್ಲಿ 2024ರ ವೇಳೆಗೆ ಕೆಲವು ದೊಡ್ಡ ಮಟ್ಟದ ಬದಲಾವಣೆಗಳು ನಡೆಯಲಿವೆ. ಇದರಿಂದಾಗಿ ಹಲವರ UPI ಐಡಿಗಳು ರದ್ಧಾಗುವ ಸಾಧ್ಯತೆಗಳಿವೆ.

Advertisement

ಹೌದು, ಹೌದು, ನೀವು ಡಿಜಿಟಲ್ ಪಾವತಿಗಳಿಗಾಗಿ UPI ಅನ್ನು ಬಳಸಿದರೆ, 2024 ರಲ್ಲಿ ನೀವು ಅದರಲ್ಲಿ ಬದಲಾವಣೆಯನ್ನು ಕಾಣಲಿದ್ದು, ಜನವರಿ 1 ರಿಂದ, ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಯುಪಿಐ ಪಾವತಿಗೆ ಸಂಬಂಧಿಸಿದಂತೆ ದೊಡ್ಡ ಹೆಜ್ಜೆ ಇಡಲಿದೆ. ಎನ್‌ಪಿಸಿಐ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬಳಸದ ಐಡಿಗಳನ್ನು ನಿರ್ಬಂಧಿಸುತ್ತದೆ. ಇದರ ಮೂಲಕ ಜನವರಿ 1 ರಿಂದ ಅನೇಕ UPI ಐಡಿಗಳು ರದ್ಧಾಗಲಿವೆ.

ವರದಿಯ ಪ್ರಕಾರ, UPI ಖಾತೆಯು ಒಂದು ವರ್ಷಕ್ಕೂ ಹೆಚ್ಚು ಕಾಲ ಆನ್‌ಲೈನ್ ವಹಿವಾಟುಗಳನ್ನು ಮಾಡದ ಗ್ರಾಹಕರನ್ನು ಸಹ ಪರಿಶೀಲಿಸಲಾಗುತ್ತದೆ. ಡಿಸೆಂಬರ್ 31 ರೊಳಗೆ ಪರಿಶೀಲನೆ ಮಾಡದಿದ್ದರೆ ಜನವರಿ 1 ರಿಂದ ನಿಷ್ಕ್ರಿಯ ಖಾತೆಗಳನ್ನು ಮುಚ್ಚಲಾಗುತ್ತದೆ. ಹೀಗಾಗಿ ನೀವು ಶಾಪಿಂಗ್ ಮಾಡುವಾಗ PhonePe, Google Pay, Paytm ಮೂಲಕ UPI ಪಾವತಿಯನ್ನು ಮಾಡಿದರೆ, ಇದು ನಿಮಗೆ ದೊಡ್ಡ ಎಚ್ಚರಿಕೆಯಾಗಿದೆ. ನಿಮ್ಮ ಮೊಬೈಲ್‌ನಲ್ಲಿ ನೀವು ಹಲವಾರು UPI ಐಡಿಗಳನ್ನು ರಚಿಸಿದ್ದು, ಅವುಗಳನ್ನು ಬಳಸದಿದ್ದರೆ ಕೆಲವು ದಿನಗಳ ನಂತರ ನಿಮ್ಮ UPI ಐಡಿ ಕ್ಯಾನ್ಸಲ್ ಆಗುವುದು ಪಕ್ಕಾ !!

Advertisement

ಇದನ್ನು ಓದಿ: Mask Rules: ಕೋವಿಡ್ ಹೆಚ್ಚಳ, ಮಾಸ್ಕ್ ಕಡ್ಡಾಯ- ಇವರಿಗೆ ಮಾತ್ರ !!

Advertisement
Advertisement