Intresting Fact: ಗೃಹಪ್ರವೇಶದಲ್ಲಿ ಮನೆಯೊಳಗೆ ಹಾಲನ್ನು ಉಕ್ಕಿಸುವುದು ಯಾಕೆ..?
Intresting Fact: ನಮ್ಮ ಹಿಂದೂ ಸಂಪ್ರದಾಯದಲ್ಲಿ ಗೃಹ ಪ್ರವೇಶ(House Warming)ಮಾಡುವಾಗ, ಅಥವಾ ಬಾಡಿಗೆ ಮನೆಗಳಿಗೆ ಹೋದ ಸಂದರ್ಭದಲ್ಲಿ ಒಳ ಪ್ರವೇಶಿಸುವಾಗ ಒಲೆ ಮೇಲೆ ಹಾಲನ್ನು ಉಕ್ಕಿಸಲಾಗುತ್ತದೆ. ಇದು ಯಾಕೆ ಹೀಗೆ ಎಂಬುದು ಇಂದಿನ ಹಲವು ಯುವ ಜನರ ಪ್ರಶ್ನೆ. ಹಾಗಿದ್ದರೆ ಏಕೆ ಈ ಸಂಪ್ರದಾಯ? ತಿಳಿಯೋಣ ಬನ್ನಿ.
ಇದನ್ನೂ ಓದಿ: Bengaluru: ಬನಶಂಕರಿ ದೇವಿ ಹುಂಡಿಯಲ್ಲಿ ಹುಡುಗಿಯರ ವಿಚಿತ್ರ ಬೇಡಿಕೆಯ ಪತ್ರಗಳು ಪತ್ತೆ - ಕೇಳಿದ್ರೆ ನೀವೂ ಶಾಕ್ ಆಗ್ತೀರಾ !!
ಶಾಸ್ತ್ರದಲ್ಲಿ ಹೇಳಿರುವಂತೆ ಹೊಸದಾಗಿ ನಿರ್ಮಿಸಿದ ಮನೆಯ ಒಳಗೆ ನೀವು ಪ್ರವೇಶಿಸುವ ಸಮಯದಲ್ಲಿ ಒಲೆ ಮೇಲೆ ಹಾಲು ಉಕ್ಕಿಸುತ್ತಾರೆ. ಅದಕ್ಕೆ ಕಾರಣವೇನೆಂದರೆ, ಸಕಲ ಸಂಪತ್ತಿಗೂ ಅಧಿದೇವತೆ ಲಕ್ಷ್ಮಿದೇವಿ. ಆಕೆ ಸಮುದ್ರ ಗರ್ಭದಿಂದ ಜನಿಸಿದಳು. ಆಕೆಯ ಪತಿ ಶ್ರೀಹರಿಯ ವಾಸಸ್ಥಳ ಕ್ಷೀರ ಸಾಗರ(ಹಾಲಿನ ಸಮುದ್ರ). ಹಾಗಾಗಿಯೇ ಹೊಸ ಮನೆಯಲ್ಲಿ ವಾಸಿಸೋ ಮೊದಲು ಹಾಲು ಉಕ್ಕಿದರೆ ಅಷ್ಟೆಶ್ವರ್ಯಗಳು, ಭೋಗಭಾಗ್ಯಗಳು, ಪ್ರಶಾಂತತೆ, ಧನ, ಸಂತಾನ, ಅಭಿವೃದ್ಧಿ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: Amith Shah: ಏಕರೂಪ ನಾಗರಿಕ ಸಂಹಿತೆ, ಒಂದು ದೇಶ ಒಂದು ಚುನಾವಣೆ ಜಾರಿ ಕುರಿತು ಬಿಗ್ ಅಪ್ಡೇಟ್ ಕೊಟ್ಟ ಅಮಿತ್ ಶಾ !!