For the best experience, open
https://m.hosakannada.com
on your mobile browser.
Advertisement

Intresting Fact: TV ಮತ್ತು AC ಬಣ್ಣ ಯಾಕೆ ಕಪ್ಪು, ಬಿಳಿ ಇರುತ್ತೆ ?! ಈ ಇಂಟ್ರೆಸ್ಟಿಂಗ್ ವಿಷಯ ನಿಮಗೆ ಗೊತ್ತಾ?!

05:27 PM Dec 25, 2023 IST | ಅಶ್ವಿನಿ ಹೆಬ್ಬಾರ್
UpdateAt: 05:27 PM Dec 25, 2023 IST
intresting fact  tv ಮತ್ತು ac ಬಣ್ಣ ಯಾಕೆ ಕಪ್ಪು  ಬಿಳಿ ಇರುತ್ತೆ    ಈ ಇಂಟ್ರೆಸ್ಟಿಂಗ್ ವಿಷಯ ನಿಮಗೆ ಗೊತ್ತಾ
Advertisement

Interesting fact: ಹೇಳಿ ಕೇಳಿ ಇದು ಡಿಜಿಟಲ್ ಯುಗ. ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರ ನಡೆದು ಹೊಸ ಹೊಸ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ಸಂಚಲನ ಸೃಷ್ಟಿ ಮೂಡಿಸುತ್ತಿರುವುದು ಸುಳ್ಳಲ್ಲ. ಇಂದಿನ ಕಾಲದಲ್ಲಿ ಟಿವಿ(TV)ಮತ್ತು AC ಇಲ್ಲದೇ ಬದುಕುವವರು ವಿರಳ. ಟಿವಿ ಕಪ್ಪು ಮತ್ತು ಎಸಿ ಬಿಳಿ (TV And AC)ಬಣ್ಣದಲ್ಲಿರಲು ಕಾರಣವೇನು ಗೊತ್ತಾ?? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಫ್ಯಾಕ್ಟ್ (Intresting Fact)!!

Advertisement

ನಾವು ಇಲ್ಲಿಯವರೆಗೆ ಜಗತ್ತಿನಲ್ಲಿ ತಯಾರಿಸಿದ ಇಲ್ಲವೇ ಮಾರಾಟವಾದ ಎಲ್ಲಾ ಟಿವಿ ಸೆಟ್‌ಗಳು ಕಪ್ಪು ಬಣ್ಣವನ್ನು ಒಳಗೊಂಡಿರುತ್ತದೆ. ಆದರೆ, ನೀವು ಎಂದಾದರೂ ಹಸಿರು, ಹಳದಿ, ಕೆಂಪು ಅಥವಾ ನೀಲಿ ಬಣ್ಣದ ಟಿವಿ ಸೆಟ್ ಅನ್ನು ಗಮನಿಸಿದ್ದೀರಾ?? ಅದೇ ರೀತಿ, ಎಸಿ ಕೇವಲ ಬಿಳಿ ಬಣ್ಣಗಳಲ್ಲಿ ಮಾತ್ರ ಇರುತ್ತದೆ. ಆದರೆ, ಇದರ ಹಿಂದಿನ ಅಸಲಿ ಕಾರಣವೇನು ಗೊತ್ತಾ..?

Advertisement

ಟಿವಿ ಎಂದ ಮೇಲೆ ಅದು ಬಲವಾದ ಬಾಡಿಯನ್ನು ಹೊಂದಿರಬೇಕಾಗುತ್ತದೆ. ಟಿವಿ ಪ್ಲೇ ಆಗುವಾಗ ಅದು ದೊಡ್ಡ ಶಬ್ಧವನ್ನು ಹೊರಹಾಕುವ ಸಂದರ್ಭ ಟಿವಿ ಬಾಡಿ ದುರ್ಬಲವಾಗಿದ್ದರೆ ಅದು ಮುರಿಯುವ ಸಾಧ್ಯತೆ ಹೆಚ್ಚಿದೆ.ಅದೇ ರೀತಿ ನೀವು ಕಾರಿನ ಟೈರ್‌ಗಳ ಕಪ್ಪು ಬಣ್ಣದಲ್ಲಿರುವುದನ್ನು ನೋಡಿರಬಹುದು. ಮೊದಲಿಗೆ ಟೈರ್‌ಗಳನ್ನು ತಯಾರಿಸಿದಾಗ ಅವು ಬಿಳಿಯಾಗಿದ್ದವಂತೆ. ಆಗ ವಾಹನದ ತೂಕವನ್ನು ಬೆಂಬಲಿಸಲು ಸಾಧ್ಯವಾಗಲಿಲ್ಲ. ಅವುಗಳನ್ನು ಬಲಪಡಿಸಲು ಕಪ್ಪು ಇಂಗಾಲವನ್ನು ಬಳಕೆ ಮಾಡಲಾಯಿತು. ಟಿವಿಯ ತಯಾರಿಕೆಯ ಸಮಯದಲ್ಲಿ ಟಿವಿ ಬಾಡಿಗೆ ಕಪ್ಪು ಇಂಗಾಲವನ್ನು ಬೆರೆಸಿ ಅದನ್ನು ಬಲಪಡಿಸಲಾಗುತ್ತದೆ.

ಇನ್ನು ಎಸಿ ಬಣ್ಣ ಬಿಳಿ ಇರಲು ಕಾರಣವೇನು ಗೊತ್ತಾ?? ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಎಸಿಗಳು ದೊರೆಯುತ್ತವೆ. ಸ್ಪ್ಲಿಟ್ ಎಸಿ, ವಿಂಡೋ ಎಸಿ, ಪೋರ್ಟಬಲ್ ಎಸಿ ಈ ಎಲ್ಲಾ ರೀತಿಯ ಎಸಿಗಳು ಹೆಚ್ಚಾಗಿ ಬಿಳಿ ಬಣ್ಣವನ್ನು ಒಳಗೊಂಡಿರುತ್ತವೆ. ಬಿಳಿ ಬಣ್ಣವು ಕಡಿಮೆ ಸೂರ್ಯನ ಬೆಳಕನ್ನು ಹೀರಿಕೊಳ್ಳುತ್ತದೆ. ಬಿಳಿ ಬಣ್ಣವು ಸೂರ್ಯನ ಬೆಳಕನ್ನು ಹೆಚ್ಚು ಆಕರ್ಷಿಸುವುದಿಲ್ಲ. ಹೀಗಾಗಿ, ಎಸಿ ಬಿಳಿ ಬಣ್ಣದಲ್ಲಿರುತ್ತದೆ.

Advertisement
Advertisement
Advertisement