For the best experience, open
https://m.hosakannada.com
on your mobile browser.
Advertisement

Interesting Fact: ಶತಮಾನಗಳಿಂದಲೂ ಡೈನೋಜರ್ ಮೊಟ್ಟೆಗಳು ಈ ಊರಲ್ಲಿದೆಯಂತೆ !! ಅದನ್ನು ಇಲ್ಲಿನ ಜನ ಏನ್ಮಾಡ್ತಾರೆ ಎಂದು ತಿಳಿದ್ರೆ ನೀವೆ ಶಾಕ್ !!

03:24 PM Dec 21, 2023 IST | ಕಾವ್ಯ ವಾಣಿ
UpdateAt: 03:43 PM Dec 21, 2023 IST
interesting fact  ಶತಮಾನಗಳಿಂದಲೂ ಡೈನೋಜರ್ ಮೊಟ್ಟೆಗಳು ಈ ಊರಲ್ಲಿದೆಯಂತೆ    ಅದನ್ನು ಇಲ್ಲಿನ ಜನ ಏನ್ಮಾಡ್ತಾರೆ ಎಂದು ತಿಳಿದ್ರೆ ನೀವೆ ಶಾಕ್
Advertisement

Interesting Fact: ಇಲ್ಲೊಂದು ಕುತೂಹಲಕಾರಿ ಘಟನೆ (Interesting Fact) ನೀವು ತಿಳಿಯಲೇ ಬೇಕು. ಮಧ್ಯಪ್ರದೇಶದ (Madhya Pradesh) ಧಾರ್ ಜಿಲ್ಲೆಯ ನರ್ಮದಾ ಕಣಿವೆಯ ಅಂಚಿನಲ್ಲಿರುವ ಕುಕ್ಷಿ ತಹಸಿಲ್‌ನ ಪದಲ್ಯಾ ಎಂಬ ಗ್ರಾಮಸ್ಥರು, ದುಂಡಾಕಾರದ ಕಲ್ಲುಗಳನ್ನು ದೇವರೆಂದು ಶತಶತಮಾನಗಳಿಂದ ಪೂಜಿಸುತ್ತಾ ಬರುತ್ತಿದ್ದು, ಇದೀಗ ಸ್ಥಳಕ್ಕೆ ಭೇಟಿ ನೀಡಿದ ವಿಜ್ಞಾನಿಗಳು ಇವುಗಳು ಕಲ್ಲುಗಳಲ್ಲ, ಪಳೆಯುಳಿಕೆಗಳ ರೂಪದಲ್ಲಿರುವ ಡೈನೋಸಾರ್​ಗಳ​​​ ಮೊಟ್ಟೆಗಳೆಂದು ಖಚಿತಪಡಿಸಿದ್ದಾರೆ. ಬೀರಬಲ್ ಸಾಹ್ನಿ ಸಂಸ್ಥೆಯ ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ಈ ಮಾಹಿತಿ ತಿಳಿದು ಬಂದಿದೆ.

Advertisement

ಮಾಹಿತಿ ಪ್ರಕಾರ, ನರ್ಮದಾ ಕಣಿವೆಯ ಈ ಪ್ರದೇಶವು ಡೈನೋಸಾರ್​ನೊಂದಿಗೆ ಸಂಬಂಧವನ್ನು ಹೊಂದಿದೆ. ಸುಮಾರು 65 ಮಿಲಿಯನ್​ ವರ್ಷಗಳ ಹಿಂದೆ ಇಲ್ಲಿ ಡೈನೋಸಾರ್​ಗಳು ನೆಲೆಸಿದ್ದವು ಎಂಬ ಮಾತು ಇದೆ. ಇದಕ್ಕೆ ಪೂರಕ ಎಂಬುವಂತೆ ಈ ಪ್ರದೇಶಗಳಲ್ಲಿ ಲಕ್ನೋದ ಬೀರಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್ (ಬಿಎಸ್‌ಐಪಿ) ನಿರ್ದೇಶಕರ ನೇತೃತ್ವದ ತಂಡವು ನಡೆಸಿದ ಇತ್ತೀಚಿನ ಸಂಶೋಧನೆಯೊಂದರಲ್ಲಿ ಪಳೆಯುಳಿಕೆಗಳ ರೂಪದಲ್ಲಿ ಮೊಟ್ಟೆಗಳಿರುವುದನ್ನು ಪತ್ತೆ ಹಚ್ಚಿದ್ದಾರೆ. ಮುಖ್ಯವಾಗಿ ಡೈನೋಸಾರ್​ನ ಟೈಟಾನೊ - ಕೊಕ್ಕರೆ ಜಾತಿಯ ಪಳೆಯುಳಿಕೆಗಳ ರೂಪದಲ್ಲಿರುವ ಮೊಟ್ಟೆಗಳಾಗಿವೆ.

ಕಣಿವೆ ಪ್ರದೇಶದ ಗ್ರಾಮಸ್ಥರು ಕೃಷಿಕರಾಗಿದ್ದರಿಂದ ಕೃಷಿ ಚಟುವಟಿಕೆ ನಡೆಸುವಾಗ ಸಾಮಾನ್ಯವಾಗಿ ದುಂಡಗಿನ ಕಲ್ಲುಗಳು ಲಭ್ಯವಾಗುತ್ತದೆ. ಈ ಕಲ್ಲುಗಳನ್ನೇ ದೇವೆರೆಂದು ಇಲ್ಲಿನ ಗ್ರಾಮಸ್ಥರು ಶತಶತಮಾನಗಳಿಂದ ಪೂಜಿಸುತ್ತಾ ಬರುತ್ತಿದ್ದಾರೆ. ಡೈನೋಸಾರ್ ಮೊಟ್ಟೆಗಳನ್ನು ಪೂಜಿಸುತ್ತಿರುವ ಬಗ್ಗೆ ವಿಜ್ಞಾನಿಗಳು ಮಾಹಿತಿ ಕೂಡ ಪಡೆದಿದ್ದಾರೆ.

Advertisement

ಇದನ್ನು ಓದಿ: Condom rules: ಹೋಟೇಲ್ ಗಳಲ್ಲಿ ಫ್ರೀ ಕಾಂಡೋಮ್ ಕಡ್ಡಾಯ- ಸರ್ಕಾರದ ಹೊಸ ಆದೇಶ !!

ಹೀಗೆ ಮೊಟ್ಟೆಯ ಬಗ್ಗೆ ಸಂಶೋಧನೆ ನಡೆಸಿದಾಗ, ಇಲ್ಲಿಯ ಜನರು ಈ ಡೈನೋಸಾರ್‌ನ ಪಳೆಯುಳಿಕೆ ಮೊಟ್ಟೆಯನ್ನು "ಕಾಕಡ್ ಭೈರವ್" ಎಂಬ ಹೆಸರಿನಿಂದ ಶತಮಾನಗಳಿಂದ ಪೂಜಿಸಿಕೊಂಡು ಬರುತ್ತಿರುವುದನ್ನು ಅವರು ಕಂಡುಕೊಂಡಿದ್ದಾರೆ. ಪಡಲ್ಯ ಗ್ರಾಮ ಮತ್ತು ಅದರ ಸುತ್ತಲಿನ ನಾಲ್ಕೈದು ಗ್ರಾಮಗಳಲ್ಲಿ ಕುಲದೇವತೆಯಾಗಿ ಪೂಜಿಸಲಾಗುತ್ತದೆ.

ಸಿಪಿಜಿಜಿ-ಬಿಎಸ್‌ಐಪಿ ಹಿರಿಯ ವಿಜ್ಞಾನಿ ಮತ್ತು ಇತಿಹಾಸಪೂರ್ವ ಕೇಂದ್ರದ ಹೆರಿಟೇಜ್ ಮತ್ತು ಜಿಯೋಟೂರಿಸಂ ಸಂಚಾಲಕಿ ಡಾ.ಶಿಲ್ಪಾ ಪಾಂಡೆ ಮಾತನಾಡಿ, ''ಬಿಸಿಪಿ ನಿರ್ದೇಶಕ ಪ್ರೊ.ಎಂ.ಜಿ.ಠಕ್ಕರ್ ನೇತೃತ್ವದ ತಂಡ ಧಾರ್ ಜಿಲ್ಲೆಗೆ ತೆರಳಿತ್ತು. ಇಲ್ಲಿ ತಾವು ಡೈನೋಸಾರ್​ಗಳ ಪಳೆಯುಳಿಕೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ವಸ್ತುಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಠಕ್ಕರ್​ ಹೇಳಿದ್ದರು.

ಸಂಸ್ಥೆಯ ನಿರ್ದೇಶಕ ಎಂ.ಜಿ.ಠಕ್ಕರ್ ಮತ್ತು ತಂಡ ಡಿನೋ ಫಾಸಿಲ್ ರಾಷ್ಟ್ರೀಯ ಉದ್ಯಾನವನದಲ್ಲಿ ಎಲ್ಲ ಪಳೆಯುಳಿಕೆಗಳ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದಾರೆ'' ಎಂದು ಡಾ.ಶಿಲ್ಪಾ ಪಾಂಡೆ ಹೇಳಿದರು.

ಜಿಲ್ಲೆಯ 120 ಕಿ.ಮೀ ಪ್ರದೇಶದಲ್ಲಿ ಈ ಮೊದಲು ಸುಮಾರು 256 ಡೈನೋಸಾರ್ ಮೊಟ್ಟೆಗಳು ಕಂಡು ಬಂದಿದ್ದವು. ಜೂನ್ 2023 ರಲ್ಲಿ ನೋಂದಾಯಿಸದ ಹೆಚ್ಚುವರಿ 20 ಹೊಸ ಡೈನೋಸಾರ್ ಮೊಟ್ಟೆಗಳು ಸಹ ಕಂಡು ಬಂದಿವೆ. ಇಲ್ಲಿನ ಜನರು ಡೈನೋಸಾರ್ ಮೊಟ್ಟೆಯ ಮೇಲೆ ಮುಖದ ಆಕಾರವನ್ನು ಕೆತ್ತಿ ತಮ್ಮ ಕುಲದೈವ ಕಾಕಡ್ ಭೈರವನೆಂದು ಪೂಜಿಸುತ್ತಿರುವ ಮಾಹಿತಿ ಇದೆ. ಕಲ್ಲಿನಂತಹ ವಸ್ತುವನ್ನು ಈ ಗ್ರಾಮಸ್ಥರು ತಮ್ಮ ಹೊಲಗಳ ಗದ್ದೆಯ ಮೇಲೆ ರೇಖೆಯ ಉದ್ದಕ್ಕೂ ಇಡುತ್ತಾರೆ. ಅದು ತಮ್ಮ ಹೊಲಗಳನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಇವರದ್ದು. ಇದಲ್ಲದೇ, ದೀಪಾವಳಿ ವೇಳೆ ಗರ್ಭಿಣಿ ಜಾನುವಾರುಗಳನ್ನು ಈ ಕಲ್ಲಿನಂತಹ ವಸ್ತುವಿನ ಮೇಲೆ ಹಾಯಿಸುವ ಸಂಪ್ರದಾಯ ಸಹ ಇದೆ. ಹೀಗೆ ಮಾಡುವುದರಿಂದ ಗರ್ಭಿಣಿ ಪ್ರಾಣಿ ಮತ್ತು ಹುಟ್ಟುವ ಮಗು ಎರಡೂ ಆರೋಗ್ಯವಾಗಿರುತ್ತವೆ ಅನ್ನೋದು ಇವರ ನಂಬಿಕೆ.

Advertisement
Advertisement
Advertisement