Operation Mistake: ನಾಲ್ಕು ವರ್ಷದ ಬಾಲಕಿಯ ಬೆರಳಿಗೆ ಚಿಕಿತ್ಸೆ ಮಾಡುವ ಬದಲು ನಾಲಗೆಗೆ ಅಪರೇಷನ್ ಮಾಡಿದ ವೈದ್ಯರು
Operation Mistake: ಬಾಲಕಿಯ ಬೆರಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವ, ಬದಲು ಮಗುವಿನ ನಾಲಗೆಗೆ ಶಸ್ತ್ರಚಿಕಿತ್ಸೆ ನಡೆಸಿದ ಪ್ರಮಾದ ಕೇರಳದ ಕೋಯಿಕೋಡ್ ನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗುರುವಾರ ನಡೆದಿದೆ.
ಇದನ್ನೂ ಓದಿ: Mangaluru: 2 ದ್ವಿಚಕ್ರ ವಾಹನಗಳ ನಡುವೆ ಅಪಘಾತ ,ಓರ್ವ ಸಾವು
ನಾಲ್ಕು ವರ್ಷದ ಮಗುವಿಗೆ ಆರು ಬೆರಳುಗಳಿದ್ದವು. ಇದರಲ್ಲಿ ಆರನೇ ಬೆರಳನ್ನು ತೆಗೆಯಲು ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಆದರೆ ಬದಲಾಗಿ ಮಗುವಿನ ನಾಲಗೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸರ್ಜರಿ ನಂತರ ಮಗುವಿನ ಬಾಯಿಯಲ್ಲಿ ಹತ್ತಿ ತುಂಬಿರುವುದನ್ನು ನೋಡಿ ಪೋಷಕರು ಪ್ರಶ್ನಿಸಿದಾಗ ವೈದ್ಯರ ಎಡವಟ್ಟು ಬಯಲಿಗೆ ಬಂದಿದೆ.
ಇದನ್ನೂ ಓದಿ: Mangaluru: ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಪತ್ರಕರ್ತರಿಂದ ಅರ್ಜಿ ಆಹ್ವಾನ
"ಮಗುವಿನ ನಾಲಗೆಗೆ ಶಸ್ತ್ರಚಿಕಿತ್ಸೆ ನಡೆಸುವ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ, ವೈದ್ಯರ ಎಡವಟ್ಟಿನಿಂದ ನಮ್ಮ ಮಗು ಪರಿತಪಿಸುವಂತಾಗಿದೆ. ಈ ಬಗ್ಗೆ ಆಸ್ಪತ್ರೆ ವಿರುದ್ಧ ತನಿಖೆ ಕೈಗೊಳ್ಳಬೇಕು,'' ಮಗುವಿನ ಪೋಷಕರು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರನ್ನು ಆಗ್ರಹಿಸಿದ್ದಾರೆ. ಆರೋಗ್ಯ ಸಚಿವೆ ವೀಣಾ ಅವರು ಪ್ರಕರಣ ಸಂಬಂಧ ತಕ್ಷಣ ತನಿಖೆ ನಡೆಸಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಸೂಚಿಸಿದ್ದಾರೆ.
"ಇಂಥ ತಪ್ಪುಗಳು ಆಗಬಾರದು. ಈ ಶಸ್ತ್ರ ಚಿಕಿತ್ಸೆಯಿಂದ ಮಗುವಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾದರೆ ಆಸ್ಪತ್ರೆಯ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ. ಒಂದೇ ದಿನಾಂಕದಂದು ಇಬ್ಬರು ಮಕ್ಕಳಿಗೆ ಶಸ್ತ್ರಚಿಕಿತ್ಸೆಯನ್ನು ನಿಗದಿಪಡಿಸಿದ್ದರಿಂದ ತಪ್ಪಾಗಿದೆ,'' ಎಂದು ಸಚಿವರು ಹೇಳಿದ್ದಾರೆ.