For the best experience, open
https://m.hosakannada.com
on your mobile browser.
Advertisement

Indian Railway: ಒಂದು ರೈಲ್ವೆ ಟಿಕೆಟ್ - ಬರೀ ಪ್ರಯಾಣ ಮಾತ್ರವಲ್ಲ, ಇಷ್ಟೆಲ್ಲಾ ಫ್ರೀ ಸೇವೆಗಳು ನಿಮ್ಮದಾಗುತ್ತೆ !!

Indian Railway: ಕೆಲವು ರೈಲ್ವೆ ನಿಯಮಗಳು ನಿಮ್ಮ ಗಮನಕ್ಕಿರಬೇಕು. ಅದರಲ್ಲೂ ಕೂಡ ಒಂದು ರೈಲ್ವೆ ಟಿಕೆಟ್ ನಿಂದಾಗೋ ಪ್ರಯೋಜನಗಳು ಅನೇಕರಿಗೆ ತಿಳಿದೇ ಇಲ್ಲ. 
05:50 PM May 15, 2024 IST | ಸುದರ್ಶನ್
UpdateAt: 05:50 PM May 15, 2024 IST
indian railway  ಒಂದು ರೈಲ್ವೆ ಟಿಕೆಟ್   ಬರೀ ಪ್ರಯಾಣ ಮಾತ್ರವಲ್ಲ  ಇಷ್ಟೆಲ್ಲಾ ಫ್ರೀ ಸೇವೆಗಳು ನಿಮ್ಮದಾಗುತ್ತೆ
Advertisement

Indian Railway : ಭಾರತೀಯ ರೈಲ್ವೆ(Indian Railway) ಇಲಾಖೆ ಬಗ್ಗೆ ಎಲ್ಲರಿಗೂ ತಿಳಿದಿದೆ. ವಿಶ್ವದಾದ್ಯಂತ ನಾಲ್ಕನೇ ಅತಿ ದೊಡ್ಡ ರೈಲ್ವೆ ಪ್ಲಾಟ್ಫಾರ್ಮ್ ನಮ್ಮ ದೇಶದ್ದು ಎಂಬುದು ಎಲ್ಲರಿಗೂ ಹೆಮ್ಮೆಯ ಸಂಗತಿ. ದೇಶದ ಜೀವನಾಡಿಯಾದ ಈ ರೈಲುಗಳು ಪ್ರತಿದಿನ ಸುಮಾರು 2.5 ಕೋಟಿ ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತವೆ. ಹೆಚ್ಚಾಗಿ ಜನರು ರೈಲು ಪ್ರಯಾಣವನ್ನು ಅನುಸರಿಸುವ ಕಾರಣ ಕೆಲವು ರೈಲ್ವೆ ನಿಯಮಗಳು ನಿಮ್ಮ ಗಮನಕ್ಕಿರಬೇಕು. ಅದರಲ್ಲೂ ಕೂಡ ಒಂದು ರೈಲ್ವೆ ಟಿಕೆಟ್ ನಿಂದಾಗೋ ಪ್ರಯೋಜನಗಳು ಅನೇಕರಿಗೆ ತಿಳಿದೇ ಇಲ್ಲ.

Advertisement

ಇದನ್ನೂ ಓದಿ: Health Care: ದೇಹದ ಈ ಭಾಗದಲ್ಲಿ ಬೆಳೆಯುವ ಕೂದಲು ಬೇಗ ಬಿಳಿಯಾಗುತ್ತೆ ಅಂತೆ! ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್

ಹೌದು, ನೀವು ರೈಲಿನಲ್ಲಿ ಪ್ರಯಾಣಿಸಲು ಖರೀದಿಸಿದ ಬರೀ ರೈಲು ಪ್ರಯಾಣ ಮಾತ್ರ ಇರೋದಿಲ್ಲ. ಈ ಟಿಕೆಟ್ (IRCTC train ticket) ಕೇವಲ ರೈಲು ಪ್ರಯಾಣಕ್ಕೆ ಮಾತ್ರವೇ ಇರುವುದು ಎಂದೇ ಬಹುತೇಕರು ಭಾವಿಸಿದ್ದಾರೆ. ಆದರೆ ಆ ಒಂದೇ ಒಂದು ಟಿಕೆಟ್ ನಿಂದ ಅನೇಕ ಫ್ರೀ ಸವಲತ್ತುಗಳು ನಿಮ್ಮದಾಗುತ್ತೆ. ಆದರೆ ಈ ವಿಚಾರ ಹೆಚ್ಚಿನವರಿಗೆ ಗೊತ್ತಿಲ್ಲ. ಹಾಗಿದ್ರೆ ಏನೇನು ಪ್ರಯೋಜನ ದೊರೆಯುತ್ತದೆ? ಏನೆಲ್ಲಾ ಫ್ರೀ ಸೇವೆಗಳು ಸಿಗುತ್ತವೆ ಎಂದು ನೋಡೋಣ.

Advertisement

ಇದನ್ನೂ ಓದಿ: New Delhi: ಹೆಣ್ಣುಮಕ್ಕಳಿಗೆ ದೊರೆಯಲಿ ಸಂಪೂರ್ಣ ಹಕ್ಕು; ತಂತ್ರಜ್ಞಾನ ಕ್ಷೇತ್ರದಲ್ಲಿ ಪುರುಷರಷ್ಟೇ ಸಮಾನ ಪಾಲು: ಇಶಾ ಅಂಬಾನಿ

ಕನ್ಫರ್ಮ್ಡ್ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಇರುವ ಸೌಲಭ್ಯಗಳು

* ರೈಲು ಹೊರಡುವ ಕಾಲಕ್ಕೆ ಎರಡು ಗಂಟೆ ಮುಂಚೆ ಬಿಎಂಟಿಸಿ ಇತ್ಯಾದಿ ಸರ್ಕಾರದ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಓಡಾಡಬಹುದು.

* ಟಿಕೆಟ್ ಮೇಲೆ ಕೇವಲ 35 ಪೈಸೆ ಹೆಚ್ಚುವರಿ ಹಣಕ್ಕೆ ಟ್ರಾವಲಿಂಗ್ ಇನ್ಷೂರೆನ್ಸ್ ಸಿಗುತ್ತದೆ.

* ರೈಲು ವಿಳಂಬವಾಗಿದ್ದರಿಂದಲೂ ಮತ್ಯಾವ ಕಾರಣದಿಂದಲೋ ನಿಮಗೆ ವಿಶ್ರಾಂತಿ ಕೊಠಡಿ ಬೇಕಿದ್ದಲ್ಲಿ ಅದೂ ಲಭ್ಯ ಇರುತ್ತದೆ. ಒಂದು ದಿನಕ್ಕೆ 20 ರೂಗೆ ಇದು ಸಿಗುತ್ತದೆ.

* ರಿಟೈರಿಂಗ್ ರೂಮ್ ಬೇಡ, ಬರೀ ಡಾರ್ಮಿಟರಿ ಮಾತ್ರ ಸಾಕು ಎಂದರೆ ದಿನಕ್ಕೆ 10 ರೂಗೆ ಅದು ಸಿಗುತ್ತದೆ. ಈ ಡಾರ್ಮಿಟರಿ ರೂಮ್ನಲ್ಲಿ ದಿಂಬು ಕೊಡಲಾಗುತ್ತದೆ.

* ರೈಲು ಪ್ರಯಾಣದ ವೇಳೆ ಅನಾರೋಗ್ಯವಾದರೆ ಚಿಕಿತ್ಸೆ ಲಭ್ಯ ಇರುತ್ತದೆ.

* ರೈಲು ಹೊರಡುವುದು ಎರಡು ಗಂಟೆಗೂ ಹೆಚ್ಚು ಕಾಲ ವಿಳಂಬವಾದರೆ ಐಆರ್ಸಿಟಿಸಿ ಕ್ಯಾಂಟೀನ್ನಿಂದ ಉಚಿತವಾಗಿ ಊಟ ಮಾಡಬಹುದು.

* ರೈಲು ನಿಲ್ದಾಣಗಳಲ್ಲಿರುವ ಲಾಕರ್ ರೂಮ್, ಕ್ಲೋಕ್ ರೂಮ್ ಸೌಲಭ್ಯಗಳನ್ನು ನಿರ್ದಿಷ್ಟ ಶುಲ್ಕ ತೆತ್ತು ಪಡೆಯಬಹುದು.

ಊಟದ ವ್ಯವಸ್ಥೆಯೂ ಇರುತ್ತದೆ:

ಪ್ರೀಮಿಯಂ ರೈಲು ಟಿಕೆಟ್ ಅನ್ನು ಬುಕ್ ಮಾಡಿದ್ದರೆ ಮತ್ತು ಈ ರೈಲು 2 ಗಂಟೆಗಳಿಗಿಂತ ಹೆಚ್ಚು ವಿಳಂಬವಾಗಿದ್ದರೆ, IRCTC ಕ್ಯಾಂಟೀನ್‌ನಿಂದ ಉಚಿತ ಆಹಾರ ಪಡೆಯಬಹುದು. ಒಂದು ರೈಲು ಟಿಕೆಟ್ ಇದ್ದರೆ ಉಚಿತ ಆಹಾರದಿಂದ ಹಿಡಿದು ಕ್ಲೋಕ್ ರೂಮ್ವರೆಗೆ ಹಲವು ರೀತಿಯ ಸೌಲಭ್ಯಗಳ ಅವಕಾಶ ನಿಮಗೆ ಸಿಗುತ್ತದೆ.

Advertisement
Advertisement
Advertisement