For the best experience, open
https://m.hosakannada.com
on your mobile browser.
Advertisement

Indian parliament : ಸಂಸತ್ ಭದ್ರತಾ ವಿಚಾರ - ಚುನಾವಣೆ ಹೊತ್ತಲ್ಲೇ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ!!

02:44 PM Dec 21, 2023 IST | ಹೊಸ ಕನ್ನಡ
UpdateAt: 03:40 PM Dec 21, 2023 IST
indian parliament   ಸಂಸತ್ ಭದ್ರತಾ ವಿಚಾರ   ಚುನಾವಣೆ ಹೊತ್ತಲ್ಲೇ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ
Advertisement

Indian parliament : ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಗುಲವಾಗಿರುವ ಭಾರತೀಯ ಸಂಸತ್ತಿನೊಳಗೆ(Indian parliament)ಇತ್ತೀಚಿಗೆ ಆಗಂತಕರು ನುಗ್ಗಿ ದಾಳಿ ನಡೆಸಿದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೆಳಿಸಿತ್ತು. ಈ ಕುರಿತು ತನಿಖೆಗಳೂ ನಡೆಯುತ್ತಿವೆ. ಆದರೀಗ ಈ ನಡುವೆಯೆ ಸಂಸತ್ತು ಭದ್ರತಾ ವಿಚಾರವಾಗಿ ಕೇಂದ್ರ ಸರ್ಕಾರವು ಒಂದು ದಿಟ್ಟ ನಿರ್ಧಾರವನ್ನು ಕೈಗೊಂಡಿದೆ.

Advertisement

ಹೌದು, ಭಾರೀ ಬಂದೋಬಸ್ತ್ ಇದ್ದರೂ ಕೂಡ ಸಂಸತ್ ಒಳಗೆ ನುಸುಳುಕೋರರು ನುಗ್ಗಿದ್ದು ಆಘಾತಕಾರಿ ವಿಚಾರ. ಹೀಗಾಗಿ ಈ ಬಗ್ಗೆ ಎಚ್ಚರಿಕೆಯ ನಡೆಯನ್ನು ಇಡುತ್ತಿರುವ ಮೋದಿ ಸರ್ಕಾರ ಸಂಸತ್ತಿನ ಸಂಕೀರ್ಣದ ಪ್ರವೇಶದ ಭದ್ರತೆಯನ್ನು ಇನ್ಮುಂದೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)ಗೆ ಹಸ್ತಾಂತರಿಸಲು ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ಇಂದು ತಿಳಿಸಿವೆ.

ಇದನ್ನು ಓದಿ: Yuvanidhi Scheme: ಇವರೆಲ್ಲರ ಖಾತೆಗೆ ಈ ದಿನ ಜಮಾ ಆಗುತ್ತೆ 'ಯುವನಿಧಿ' ಹಣ !!

Advertisement

ಅಂದಹಾಗೆ CISF ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF) ಆಗಿದ್ದು, ಇದು ಪ್ರಸ್ತುತ ದೆಹಲಿಯಲ್ಲಿನ ಅನೇಕ ಕೇಂದ್ರ ಸರ್ಕಾರದ ಸಚಿವಾಲಯದ ಕಟ್ಟಡಗಳನ್ನು ಪರಮಾಣು ಮತ್ತು ಏರೋಸ್ಪೇಸ್ ಡೊಮೇನ್, ಸಿವಿಲ್ ಏರ್‌ಪೋರ್ಟ್‌ಗಳು ಮತ್ತು ದೆಹಲಿ ಮೆಟ್ರೋದಲ್ಲಿನ ಸ್ಥಾಪನೆಗಳನ್ನು ರಕ್ಷಿಸುತ್ತಿದೆ. ಹೀಗಾಗಿ ಇನ್ಮುಂದೆ ಹೊಸ ಮತ್ತು ಹಳೆಯ ಸಂಸತ್ತಿನ ಸಂಕೀರ್ಣ ಮತ್ತು ಅದರ ಮಿತ್ರ ಕಟ್ಟಡಗಳನ್ನು ಸಿಐಎಸ್‌ಎಫ್‌ನ ಸಮಗ್ರ ಭದ್ರತೆಯ ಅಡಿಯಲ್ಲಿ ತರಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.

Advertisement
Advertisement
Advertisement