For the best experience, open
https://m.hosakannada.com
on your mobile browser.
Advertisement

Indian Congress: 2024ರ ಲೋಕಸಭಾ ಚುನಾವಣೆ- ಕಾಂಗ್ರೆಸ್ ನಲ್ಲಿ ನಡೆಯಿತು ಊಹಿಸದಂತ ಮಹತ್ವದ ಬದಲಾವಣೆ!!

12:34 AM Jan 14, 2024 IST | ಹೊಸ ಕನ್ನಡ
UpdateAt: 12:36 AM Jan 14, 2024 IST
indian congress  2024ರ ಲೋಕಸಭಾ ಚುನಾವಣೆ   ಕಾಂಗ್ರೆಸ್ ನಲ್ಲಿ ನಡೆಯಿತು ಊಹಿಸದಂತ ಮಹತ್ವದ ಬದಲಾವಣೆ
Advertisement

Indian Congress: ಮುಂಬರುವ ಲೋಕಸಭಾ ಚುನಾವಣೆಯ(Parliament election)ಕಾವು ಇದೀಗ ದೇಶಾದ್ಯಂತ ರಂಗೇರಿದೆ. ಎಲ್ಲಾ ಪಕ್ಷಗಳು ಗೆಲುವಿನ ಮಂತ್ರವನ್ನು ಪಠಿಸುತ್ತಿವೆ. ಕೆಲವು ಪಕ್ಷಗಳು ಮೈತ್ರಿ ಮಾಡಿಕೊಂಡು ಈಗಲೇ ಗೆಲುವಿನ ನಗೆ ಬೀರುತ್ತಿದೆ. ಇತ್ತ ಪ್ರಧಾನಿ ಮೋದಿಯನ್ನು ಮಣಿಸಲು ವಿಪಕ್ಷಗಳ 'ಇಂಡಿಯಾ' ಮೈತ್ರಿ ಕೂಟ ಕೂಡ ಭಾರೀ ತಯಾರಿ ನಡೆಸುತ್ತಿದೆ. ಆದರೆ ಇದು ಕಾಂಗ್ರೆಸ್(Congress) ನಲ್ಲಿ ಯಾರೂ ಊಹಿಸದಂತ ಬದಲಾವಣೆ ಉಂಟುಮಾಡಲಿದೆ.

Advertisement

ಹೌದು, ಇಂಡಿಯಾ ಮೈತ್ರಿ ಕೂಟವು ಸತತ ಸಭೆ ನಡೆಸಿ, ತಮ್ಮ ಮುಖ್ಯಸ್ಥರಾಗಿ ಮಲ್ಲಿಕಾರ್ಜುನ ಖರ್ಗೆಯನ್ನು ಆಯ್ಕೆ ಮಾಡಿದೆ. ಇತರ ಕೆಲ ನಾಯಕರಿಗೂ ಜವಾಬ್ದಾರಿಗಳನ್ನು ಹಂಚಲಾಗಿದೆ. ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದು ಆಯಾ ರಾಜ್ಯದಲ್ಲಿನ ಸೀಟು ಹಂಚಿಕೆಯನ್ನು ಚರ್ಚಿಸಲಾಗಿದೆ. ವರದಿಗಳ ಪ್ರಕಾರ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನಗಳನ್ನು ಇತರ ಪಕ್ಷಗಳಿಗೆ ಬಿಟ್ಟುಕೊಡುತ್ತಿದ್ದು, 1947ರ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅತೀ ಕಡಿಮೆ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದು ದೇಶದ ಇತಿಹಾಸದಲ್ಲಿ ಹೆಮ್ಮರವಾಗಿ ಮೆರೆದ ಕಾಂಗ್ರೆಸ್ ಪಕ್ಷದಲ್ಲಿ ಯಾರು ಊಹಿಸದಂತ ಬದಲಾವಣೆಯಾಗಿದೆ. ಒಂದು ರಾಷ್ಟ್ರೀಯ ಪಕ್ಷಕ್ಕೆ, 60 ವರ್ಷಕ್ಕೂ ಹೆಚ್ಚು ದೇಶವನ್ನಾಳಿದ ಪಕ್ಷಕ್ಕೆ ಈ ಸ್ಥಿತಿ ಬರುತ್ತದೆ ಎಂದರೆ ಆದು ಊಹಿಸಲಾಗದ ಮಾತು.

ಇದನ್ನೂ ಓದಿ: Haveri: ಹಿಂದೂ ಯುವತಿಯ ಕಿಡ್ನಾಪ್ ಮಾಡಿದ ಮುಸ್ಲಿಂ ಯುವಕ - ಕಾಲೇಜಿಗೆ ಹೋಗಿದ್ದ ಯುವತಿಯನ್ನು ಈ ಪಾಪಿ ಕರೆದೊಯ್ದದ್ದೆಲ್ಲಿಗೆ?

Advertisement

ಎಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ?! 

ವರದಿಗಳ ಪ್ರಕಾರ ಕಾಂಗ್ರೆಸ್ 2024ರ ಲೋಕಸಭೆ ಚುನಾವಣೆಗೆ 543 ಕ್ಷೇತ್ರಗಳ ಪೈಕಿ 255 ಸ್ಥಾನಕ್ಕೆ ಮಾತ್ರ ಸ್ಪರ್ಧಿಸಲಿದೆ ಎಂದು ತಿಳಿದುಬಂದಿದೆ. ಮೈತ್ರಿಯಲ್ಲಿರುವ ಇತರ ಪಕ್ಷಗಳ ಬೇಡಿಕೆ, ಪ್ರಾಬಲ್ಯದಿಂದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಇತರ ಪಕ್ಷಗಳಿಗೆ ಬಿಟ್ಟುಕೊಡುತ್ತಿದೆ. ಹೀಗೇನಾದರೂ ಆದರೆ ಸ್ವಾತಂತ್ರ್ಯ ಭಾರತದಲ್ಲಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ಕಡಿಮೆ ಸ್ಥಾನಕ್ಕೆ ಸ್ಪರ್ಧಿಸುವ ಚುನಾವಣೆ ಇದಾಗಲಿದೆ.

Advertisement
Advertisement
Advertisement