Uttar Pradesh: ಚರಂಡಿ ನೀರು ತುಂಬಿದ ರಸ್ತೆ ಮೇಲೆಯೇ ಜೋಡಿಯ ಮದುವೆ ಸಂಭ್ರಮ
ಉತ್ತರ ಪ್ರದೇಶದ ಆಗ್ರದಲ್ಲಿ ಜೋಡಿಯೊಂದು ರಸ್ತೆಯ ಕೆಸರು ನೀರಿನ ಮುಂದೆ ನಿಂತು ಮದುವೆಯಾಗಿದ್ದಾರೆ. ಹತ್ತು ಹದಿನೈದು ವರ್ಷಗಳಿಂದ ಮೂಲ ಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಮನವಿ ಮಾಡಿದರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆದರೆ ವಿನೂತನ ಮದುವೆಯ ಮೂಲಕ ಗಮನ ಸೆಳೆಯಲು ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: Madhu Bangarappa: ಚಕ್ರವರ್ತಿ ಸೂಲಿಬೆಲೆ ತಲೆಹರಟೆ, ಮಾನ, ಮರ್ಯಾದೆ, ಕಾಮನ್‌ಸೆಲ್ಸ್ ಇಲ್ಲ ಅವನಿಗೆ-ಸಚಿವ ಮಧು ಬಂಗಾರಪ್ಪ
ಇತ್ತೀಚೆಗೆ ದೇವಸ್ಥಾನದಲ್ಲಿ, ಕಲ್ಯಾಣ ಮಂಟಪದಲ್ಲಿ ಅಷ್ಟೇ ಅಲ್ಲದೇ ಆಸ್ಪತ್ರೆಯಲ್ಲೂ ಮದುವೆಯಾಗುವುದು ಸಾಮನ್ಯ ವಾಗಿದೆ. ಇದೀಗ ಹೊಸದಾಗಿ ಕೊಳೆತ ವಾಸನೆ ಬರುವ ಮೋರಿಯ ಬಳಿ ನಿಂತು ಮದುವೆಯಾಗುವುದನ್ನು ನೀವು ಕೇಳಿದ್ದೀರಾ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಆಗ್ರಾದ 12 ಪ್ರದೇಶದ ಮಂದಿ ಭಗವಾನ್ ಶರ್ಮಾ ಮತ್ತು ಉಷಾ ದೇವಿ ರವರ ಮದುವೆಗೆ ವಾಸನೆ ಮತ್ತು ಕಸದ ರಾಶಿಯ ನಡುವೆಯೇ ಹಾಜರಾಗಿದ್ದರು. 17ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಈ ಜೋಡಿ, ಅಧಿಕಾರಿಗಳ ಕಣ್ತೆರೆಯಲು ಈ ರೀತಿ ಚರಂಡಿ ನೀರಿನ ನಡುವೆ 'ಮರು ಮದುವೆ'ಯಾಗಿದ್ದಾರೆ. ಈ ಭಾಗದ ನಿವಾಸಿಗಳು ಹಳೆಯ ವಧು- ವರರನ್ನು ಹೊಸದಾಗಿ ಹಾರೈಸಿದ್ದಾರೆ.
ಅಲ್ಲಿನ ನಿವಾಸಿಗಳು ಇವರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಗಲಾದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು. ಈ ವಿಚಾರದಲ್ಲಿ ಕಳೆದ 15 ವರ್ಷಗಳಿಂದಲೂ ಇದೆ ಸಮಸ್ಯೆ ಎನ್ನುತ್ತಾರೆ. ಸಮಸ್ಯೆ ಬಗೆ ಹರಿಯದೆ ಇದ್ದರೇ ಮುಂದಿನ ದಿನಗಳಲ್ಲಿ ಬರ್ತ್ ಡೇ, ಗಳನ್ನು ಇಲ್ಲೇ ಆಚರಿಸುತ್ತೇವೆ ಎಂದು ಸ್ಥಳೀಯರು ಹೇಳಿದ್ದಾರೆ.
ಹೀಗಾಗಿ ನಾವು ಈಗೆ ಪ್ರತಿಭಟನೆ ನಡೆಸಲು ಉದ್ದೇಶಿಸಿದೆವು. ಇನ್ನಾದರೂ ಅವರು ಕ್ರಮ ಕೈಗೊಳ್ಳಲಿ ಎಂದು ಶರ್ಮಾ ತಿಳಿಸಿದರು. ಅನೇಕ ವರ್ಷಗಳಿಂದ ಅಲ್ಲಿನ ನಿವಾಸಿಗಳು ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ ಅಧಿಕಾರಿಗಳು ಮಾತ್ರ ಗಮನ ಕೊಡುತ್ತಿಲ್ಲ ಎಂದು ದೂರಿದರು. ಲಕ್ಷದ್ವೀಪ ಅಥವಾ ಮಾಲ್ಡೀವ್ಸ್‌ಗೆ ಹೋಗಿ ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮಾಚರಣೆ ನಡೆಸಲು ಆರಂಭದಲ್ಲಿ ಬಯಸಿದ್ದೆವು. ಆದರೆ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ, ಅಸಮರ್ಪಕ ಚರಂಡಿ ಮತ್ತು ತ್ಯಾಜ್ಯ ವಿಲೇವಾರಿ ಸೌಲಭ್ಯಗಳಿಲ್ಲದೆ ತಮ್ಮ ಪ್ರದೇಶದ ರಸ್ತೆಯು ಕೊಳಚೆ ಚರಂಡಿಯಂತಾಗಿದೆ. ಹೀಗಾಗಿ ಇಲ್ಲಿಯೇ ಮರು ಮದುವೆಯ ಮೂಲಕ ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸಿರುವುದಾಗಿ ಶರ್ಮಾ ತಿಳಿಸಿದರು.