ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Anganawadi: ಹೆಚ್ಚಿದ ತಾಪಮಾನ; ರಾಜ್ಯದ ಈ 8 ಜಿಲ್ಲೆಗಳ ಅಂಗನವಾಡಿ ಸಮಯ ಬದಲಾವಣೆ-ಸರಕಾರ ಆದೇಶ

Anganawadi: ರಾಜ್ಯದಲ್ಲಿ ಉಷ್ಣತೆ ಹೆಚ್ಚಳವಾಗಿದೆ. ಪುಟ್ಟಮಕ್ಕಳಿಗಾಗಿ ಸರಕಾರ ಇದೀಗ ಅಂಗನವಾಡಿಗಳ ಸಮಯವನ್ನು ಎರಡು ತಿಂಗಳ ಕಾಲ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
08:49 PM Apr 02, 2024 IST | ಮಲ್ಲಿಕಾ ಪುತ್ರನ್
UpdateAt: 08:53 PM Apr 02, 2024 IST
Image Credit: News 18
Advertisement

Anganawadi: ರಾಜ್ಯದಲ್ಲಿ ಉಷ್ಣತೆ ಹೆಚ್ಚಳವಾಗಿದೆ. ತಾಪಮಾನದ ಏರಿಕೆ ಇನ್ನೂ ಕೆಲ ದಿನಗಳ ಕಾಲ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪುಟ್ಟ ಪುಟ್ಟ ಮಕ್ಕಳು ರಣ ಬಿಸಿಲಿಗೆ ಅಂಗನವಾಡಿಗೆ ಹೋಗಲು ಹಿಂದೇಟು ಹಾಕುತ್ತಿರುವ ಕುರಿತು ಅರಿತ ಸರಕಾರ ಇದೀಗ ಅಂಗನವಾಡಿಗಳ ಸಮಯವನ್ನು ಎರಡು ತಿಂಗಳ ಕಾಲ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

Advertisement

ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬಳ್ಳಾರಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀದರ್ ಮತ್ತು ಕಿತ್ತೂರು ಕರ್ನಾಟಕ ಭಾಗದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ: Beauty Tips: ಎಕ್ಸಸೈಜ್, ಡಯಟ್, ಔಷಧಿ ಯಾವುದೂ ಇಲ್ಲದೆ ಸಣ್ಣ ಆಗೋದು ಹೇಗೆ?! ಜಸ್ಟ್ ಹೀಗೆ ಮಾಡಿ, 15 ದಿನಗಳಲ್ಲಿ ಬೊಜ್ಜು ಕರಗಿ ಹೋಗುತ್ತೆ !!

Advertisement

ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಕಾರ್ಯ ನಿರ್ವಹಿಸಲಿದೆ ಈ ಎಂಟು ಜಿಲ್ಲೆಯಲ್ಲಿನ ಅಂಗನವಾಡಿಗಳು. ಬದಲಾದ ವೇಳಾಪಟ್ಟಿಗೆ ತಕ್ಕಂತೆ ಐಸಿಡಿಎಸ್‌ ಸೇವೆ ನಿಯಮಾನುಸಾರ ಅಡೆತಡೆಗಳಿಲ್ಲದೆ ಅಂಗನವಾಡಿ ಫಲಾನುಭವಿಗಳಿಗೆ ತಲುಪಿಸಲು ಅಗತ್ಯ ಕ್ರಮ ವಹಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: Car Insurance: ಓನ್ ಡ್ಯಾಮೇಜ್ ಇನ್ಸೂರೆನ್ಸ್ ಅಂದ್ರೆ ಏನು, ಅದನ್ನು ಕೊಂಡರೆ ಏನು ಲಾಭ ?, ಇಲ್ಲಿದೆ ಸಮಗ್ರ ಮಾಹಿತಿ !

Related News

Advertisement
Advertisement