ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Mangaluru: ಕರಾವಳಿಯ ಕೋಳಿ ಅಂಕಕ್ಕೆ ಕೊನೆಗೂ ಸಿಕ್ತು ಗ್ರೀನ್ ಸಿಗ್ನಲ್ !! ಆದ್ರೆ ಷರತ್ತು ಅನ್ವಯ, ಏನದು ಗೊತ್ತಾ?!

12:12 AM Jan 14, 2024 IST | ಹೊಸ ಕನ್ನಡ
UpdateAt: 12:12 AM Jan 14, 2024 IST
Advertisement

Mangaluru: ಕರಾವಳಿಯ ಸಾಂಪ್ರದಾಯಿಕ ಆಚರಣೆ, ಆಟವಾದ ಕೋಳಿ ಅಂಕವನ್ನು ನಡೆಸಲು ಅನುಮತಿ ನೀಡಬೇಕೆಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ (Harish Poonja) ಅವರು ಧ್ವನಿ ಎತ್ತಿ ಈ ಬಗ್ಗೆ ಆಗ್ರಹಿಸಿದ್ದರು. ಕೊನೆಗೂ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೋಳಿ ಅಂಕ ನಡೆಸಲು ಅನುಮತಿ ದೊರೆತಿದೆ. ಆದರೆ ಈ ಎಲ್ಲಾ ಷರತ್ತುಗಳನ್ನು ತಪ್ಪದೇ ಪಾಲಿಸಬೇಕಿದೆ.

Advertisement

ಹೌದು, ಮಂಗಳೂರಿ(Mangaluru) ನಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆದಿದ್ದು, ಇದರಲ್ಲಿ ಭಾಗವಹಿಸಿದ್ದ ಶಾಸಕ ಹರೀಶ್ ಪೂಂಜಾ, ದಕ್ಷಿಣ ಕನ್ನಡ(Dakshina Kannada)ಜಿಲ್ಲೆಯಲ್ಲಿ ದೈವ – ದೇವಸ್ಥಾನಗಳಲ್ಲಿ ನೇಮ, ಕೋಲ ಉತ್ಸವಗಳ ಸಲುವಾಗಿ ಕೋಳಿ ಅಂಕ ನಡೆಯುತ್ತದೆ. ಕೋಳಿ ಅಂಕಗಳಿಗೆ(Cock Fighting)ಪೊಲೀಸರು ದಾಳಿ ಮಾಡುವ ಪ್ರಕರಣಗಳು ನಡೆಯುತ್ತಿದ್ದು, ನಿಯಮಾನುಸಾರ ನಡೆಯುವ ಕೋಳಿ ಅಂಕಗಳೂ ನಿಂತಹೋಗಿವೆ. ಹೀಗಾಗಿ ಜಿಲ್ಲೆಯಲ್ಲಿ ದೈವಸ್ಥಾನ ದೇವಸ್ಥಾನಗಳಲ್ಲಿ ನೇಮ, ಕೋಲ ಉತ್ಸವಗಳ ನಂತರ ನಡೆಯುವ ಕೋಳಿ ಅಂಕಕ್ಕೆ ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿದ್ದರು.

ಶಾಸಕರ ಆಗ್ರಕ್ಕೆ ದ.ಕ ಪೋಲೀಸ್ ವರಿಷ್ಠಾಧಿಕಾರಿ ಆಕ್ಷೇಪ ವ್ಯಕ್ತಪಡಿಸಿ ಕೋಳಿ ಅಂಕಕ್ಕೆ ಅನುಮತಿ ಕೇಳಿ ಯಾರೂ ನಮ್ಮ ಬಳಿ ಬರಬೇಡಿ. ಇದಕ್ಕೆ ಅನುಮತಿ ಸಿಗುವುದಿಲ್ಲ, ಕಾನೂನಿನಲ್ಲಿ ಅವಕಾಶ ಇಲ್ಲ ಎಂದರು. ಅಲ್ಲದೆ ದೈವ ದೇವರ ಹೆಸರು ಹೇಳಿ ಕೆಲವೆಡೆ ಜೂಜಾಟದ ಕೋಳ ಅಂಕ ನಡೆಯುತ್ತಿದೆ ಎಂದರು. ಕೆಲ ಹೊತ್ತು ಈ ಬಗ್ಗೆ ಭಾರೀ ಚರ್ಚೆ ನಡೆಯಿತು. ನಂತರ ಜಿಲ್ಲಾ ಉಸ್ತುವಾರಿ ಸಚಿವರು ಸದ್ಯ ಶಾಸಕರ ಮನವಿಯನ್ನು ಪುರಸ್ಕರಿಸಲು ಒಪ್ಪಿದ್ದು, ಕಾರವಳಿಯಲ್ಲಿ ಕೋಳಿ ಅಂಕಕ್ಕೆ ಷರತ್ತಬದ್ಧ ಅನುಮತಿ ನೀಡಿದ್ದಾರೆ.

Advertisement

ಏನು ಷರತ್ತುಗಳು?

ಕಾನೂನಿನಲ್ಲಿ ಕೋಳಿ ಅಂಕಕ್ಕೆ ಅನುಮತಿ ಇಲ್ಲದಿದ್ದರೂ ಪೋಲೀಸ್ ಇಲಾಖೆಯಿಂದ ಅನುಮತಿ ನೀಡುತ್ತೇವೆ. ಇದಕ್ಕೆ ಯಾವುದೇ ಅಡಿ, ಆತಂಕ ಬರದಂತೆ ನೋಡಿಕೊಳ್ಳುತ್ತೇವೆ. ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಯಾವುದೇ ತಡೆ ನೀಡುವುದಿಲ್ಲ. ಆದರೆ ಯಾರೂ ಜೂಜಿಗಾಗಿ ಕೋಳಿ ಅಂಕ ನಡೆಸಬಾರದು.

Advertisement
Advertisement