Demonetisation: ದೇಶಾದ್ಯಂತ 100 ರೂಪಾಯಿ ನೋಟು ನಿಷೇದ ?! RBI ನಿಂದ ಮಹತ್ವದ ಮಾಹಿತಿ
07:39 AM Dec 26, 2023 IST | ಹೊಸ ಕನ್ನಡ
UpdateAt: 08:21 AM Dec 26, 2023 IST
Advertisement
Demonetisation'ಹಳೆಯ 100 ರೂಪಾಯಿ ನೋಟು ಇನ್ನು ಮುಂದೆ ಮಾನ್ಯವಾಗುವುದಿಲ್ಲ. ನೋಟುಗಳ ವಿನಿಮಯಕ್ಕೆ ಆರ್ಬಿಐ ಮಾರ್ಚ್ 31, 2024 ಕೊನೆಯ ದಿನಾಂಕ ನೀಡಿದೆ' ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯೊಂದು ಭಾರೀ ವೈರಲ್ ಆಗುತ್ತಿದೆ. ಇದೀಗ ಈ ಬಗ್ಗೆ RBI ಸ್ಪಷ್ಟೀಕರಣ ನೀಡಿದೆ.
Advertisement
ಹೌದು, ಪ್ರಸ್ತುತ ಚಲಾವಣೆಯಲ್ಲಿರುವ ₹100 ಮುಖಬೆಲೆಯ ಹಳೆಯ ನೋಟುಗಳನ್ನು ಮಾರ್ಚ್ ಅಂತ್ಯದ ಹೊತ್ತಿಗೆ ಸಂಪೂರ್ಣವಾಗಿ ಹಿಂಪಡೆಯಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಇದು ಡಿಮಾನಿಟೈಸೇಷನ್ ಅಲ್ಲ. ಹಾಗಾಗಿ ಭೀತಿ ಬೇಡ. ಜೊತೆಗೆ, ಮಾರ್ಚ್ ನಂತರದಲ್ಲಿ ಹೊಸದಾದ ₹100 ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲಿವೆ. ಹಳೆಯ ₹100 ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬೇಕು ಎಂದು ಆರ್‌ಬಿಐ ಹೇಳಿದೆ ಎಂದು ಹೇಳಾಗುತ್ತಿರುವ ಸುದ್ದಿ ಸುಳ್ಳು ಸುದ್ದಿಯಾಗಿದೆ. ಈ ಸಂಬಂಧಿಸಿದಂತೆ ಆರ್‌ಬಿಐ ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ. ಜನರು ಈ ಬಗ್ಗೆ ಯಾವುದೇ ಆತಂಕ ಪಡುವುದು ಬೇಡ !!
Advertisement
Advertisement