KSET 2023 ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳೇ ಗಮನಿಸಿ, KEA ನೀಡಿದೆ ಬಿಗ್ ಅಪ್ಡೇಟ್!!
KSET 2023: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆಸೆಟ್ 2023 ಗೆ(Kset 2023)ಈಗಾಗಲೇ ಅಭ್ಯರ್ಥಿಗಳ ಅಡ್ಮಿಟ್ ಕಾರ್ಡ್ ಬಿಡುಗಡೆ ಮಾಡಿದ್ದು, ಬೆಲ್ ಸಮಯವನ್ನು ಕೂಡ ಪ್ರಕಟಿಸಿದೆ. ಇದೀಗ ಕೆಸೆಟ್ ಅರ್ಜಿ ಸಂಖ್ಯೆ ಕಳೆದುಕೊಂಡು ಅಡ್ಮಿಟ್ ಕಾರ್ಡ್ (Admit Card)ಡೌನ್‌ಲೋಡ್ ಮಾಡಲು ಸಾಧ್ಯವಾಗದೆ ಇರುವ ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ ಹೊರಡಿಸಿದೆ.
ಕೆಸೆಟ್ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವ ವಿಧಾನ ಹೀಗಿದೆ:
# ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬೇಕು.
# ತೆರೆದ ಮುಖಪುಟದಲ್ಲಿ ಇತ್ತೀಚಿನ ಪ್ರಕಟಣೆಗಳಲ್ಲಿ 'KSET-2023' ಪ್ರವೇಶ ಟಿಕೆಟ್ ಡೌನ್‌ಲೋಡ್ ಲಿಂಕ್' ಮೇಲೆ ಕ್ಲಿಕ್ ಮಾಡಿಕೊಳ್ಳಿ.
# ಆಗ ಮತ್ತೊಂದು ವೆಬ್‌ಪೇಜ್ ಓಪನ್ ಆಗಲಿದೆ.
# ಪರೀಕ್ಷೆ ಆಯ್ಕೆ ಮಾಡಿಕೊಂಡು, ಅರ್ಜಿ ಸಂಖ್ಯೆ, ನಿಮ್ಮ ಹೆಸರಿನ ಮೊದಲ 4 ಅಕ್ಷರ ಟೈಪ್ ಮಾಡಬೇಕು.
# ಇದಾದ ಬಳಿಕ 'Submit' ಮೇಲೆ ಕ್ಲಿಕ್ ಮಾಡಿಕೊಳ್ಳಿ.
'KSET 2023 ಗೆ ಅರ್ಜಿ ಹಾಕಿರುವವರು ತಮ್ಮ ಅರ್ಜಿಯ ಸಂಖ್ಯೆಯನ್ನು ಕಳೆದುಕೊಂಡಿದ್ದರೆ ಆ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ / ಅಂಚೆ ಕಚೇರಿಯ ಚಲನ್ ಪ್ರತಿ, ಮೊಬೈಲ್ ಸಂಖ್ಯೆ ಮತ್ತು ಅವರ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಸಾಫ್ಟ್ ಕಾಪಿಗಳನ್ನು ಇ-ಮೇಲ್ ವಿಳಾಸ - keakset2023@gmail.com ಗೆ ಮೇಲ್ ಮಾಡಬಹುದು. ಇಂತಹ ಅಭ್ಯರ್ಥಿಗಳಿಗೆ ವಿವರಗಳನ್ನು ಪರಿಶೀಲಿಸಿ ಅರ್ಜಿಯನ್ನು ಇಮೇಲ್ ಮಾಡಲಾಗುತ್ತದೆ. ಇದಾದ ಬಳಿಕ ಅಭ್ಯರ್ಥಿಗಳು ಅಡ್ಮಿಟ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದ,' ಎಂದು ತಿಳಿಸಿದೆ.