For the best experience, open
https://m.hosakannada.com
on your mobile browser.
Advertisement

Indian Government: ಖಾತೆ ಹಂಚಿಕೆ ಆಗುತ್ತಿದ್ದಂತೆ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ - ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣ !!

Indian Government: ಪ್ರಧಾನ ಮಂತ್ರಿ ಆವಾಸ್ ಯೋಜನೆ(PM Awas Scheme)ಅಡಿಯಲ್ಲಿ 3 ಕೋಟಿ ಮನೆಗಳನ್ನು ನಿರ್ಮಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.
12:24 PM Jun 11, 2024 IST | ಸುದರ್ಶನ್
UpdateAt: 12:44 PM Jun 11, 2024 IST
indian government  ಖಾತೆ ಹಂಚಿಕೆ ಆಗುತ್ತಿದ್ದಂತೆ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ   ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣ

Indian Government : NDA ಸರ್ಕಾರದ ಪ್ರಮಾಣವಚನ ಸ್ವೀಕಾರ ಮುಗಿದು ಸಚಿವರಿಗೆ ಖಾತೆ ಕೂಡ ಹಂಚಿಕೆಯಾಗಿದೆ. ಈ ಬೆನ್ನಲ್ಲೇ ಮೋದಿ ಕ್ಯಾಬಿನೆಟ್ ಸಭೆ(Cabinet Meeting)ನಡೆದಿದೆ. ಮೊದಲ ಸಭೆಯಲ್ಲಿಯೇ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆ(PM Awas Scheme)ಅಡಿಯಲ್ಲಿ 3 ಕೋಟಿ ಮನೆಗಳನ್ನು ನಿರ್ಮಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.

Advertisement

KSRTC Tickets: ಕೆಎಸ್‌ಆರ್‌ಟಿಸಿ ಪ್ರತಿಯೊಬ್ಬ ಪ್ರಯಾಣಿಕರಿಗೆ ಬಂಪರ್ ಗುಡ್ ನ್ಯೂಸ್!

ಹೌದು, ಸೋಮವಾರ(ಜೂ. 10) ದಿಲ್ಲಿಯ ಲೋಕ ಕಲ್ಯಾಣ್​ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(PM Modi) ಅವರ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದೆ. ಸಂಪುಟವು ತನ್ನ ಮೊದಲ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ 3 ಕೋಟಿ ಹೆಚ್ಚುವರಿ ಮನೆಗಳ ನಿರ್ಮಾಣಕ್ಕೆ ಅಸ್ತು ಎಂದಿದೆ. ಈ ಸಭೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್​ಡಿಎ) ಎಲ್ಲಾ ಮಿತ್ರಪಕ್ಷಗಳ ಸಚಿವರು ಭಾಗವಹಿಸಿದ್ದರು.

Advertisement

ಅಂದಹಾಗೆ ಅರ್ಹ ಕುಟುಂಬಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಅರ್ಹ ಕುಟುಂಬಗಳ ಸಂಖ್ಯೆ ಹೆಚ್ಚಳದಿಂದ ಉಂಟಾಗುವ ವಸತಿ ಅವಶ್ಯಕತೆಗಳನ್ನು ಪೂರೈಸಲು 3 ಕೋಟಿ ಹೆಚ್ಚುವರಿ ಗ್ರಾಮೀಣ ಮತ್ತು ನಗರ ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ನೆರವು ನೀಡಲು ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.


ಭಾರತ ಸರ್ಕಾರವು 2015-16ರಿಂದ ಪ್ರಧಾನ ಮಂತ್ರಿ ಆವಾಸ್​ ಯೋಜನೆಯನ್ನು ಜಾರಿಗೆ ತಂದಿದೆ. ಈ ಮೂಲಕ ಅರ್ಹ ಗ್ರಾಮೀಣ ಮತ್ತು ನಗರ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳುಳ್ಳ ಮನೆಗಳನ್ನು ನಿರ್ಮಿಸಿ ಕೊಟ್ಟು ಸೂರು ಇಲ್ಲದವರಿಗೆ ನೆರವಾಗುತ್ತಿದೆ. PMAY ಅಡಿಯಲ್ಲಿ ಕಳೆದ 10 ವರ್ಷಗಳಲ್ಲಿ ವಸತಿ ಯೋಜನೆಗಳ ಅಡಿಯಲ್ಲಿ ಅರ್ಹ ಬಡ ಕುಟುಂಬಗಳಿಗೆ ಒಟ್ಟು 4.21 ಕೋಟಿ ಮನೆಗಳನ್ನು ಪೂರ್ಣಗೊಳಿಸಲಾಗಿದೆ.

Belthangady: ಬೆಳ್ತಂಗಡಿಯಲ್ಲಿ 25 ಮೇಕೆಗಳಿಗೆ ವ್ಯಕ್ತಿಗಳ ಫೋಟೋ ಅಂಟಿಸಿ ತಲೆ ಕಡಿದು ವಿಕೃತಿ - ಜಾಗದ ವಿಚಾರಕ್ಕೆ ನಡೆಯಿತಾ ವಾಮಾಚಾರ ?!

Advertisement
Advertisement
Advertisement