ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Sleep: ನಿಮ್ಮಲ್ಲಿರುವ ಸಿಕ್ಸ್ಸೆನ್ಸ್ ನಿಮ್ಮನ್ನು ನಸು ಮುಂಜಾನೆ ಎಬ್ಬಿಸಿದ್ರೆ ಅದಕ್ಕೂ ಬಲವಾದ ಕಾರಣ ಇದೆಯಂತೆ!

Sleep: ನಿಮ್ಮಲ್ಲಿರುವ ಸಿಕ್ಸ್ಸೆನ್ಸ್ ನಿಮ್ಮನ್ನು ನಸು ಮುಂಜಾನೆ ( Early Morning) ಎಬ್ಬಿಸಿದ್ರೆ ಅದಕ್ಕೂ ಬಲವಾದ ಕಾರಣ ಇದೆಯಂತೆ!
12:15 PM May 31, 2024 IST | ಸುದರ್ಶನ್
UpdateAt: 12:17 PM May 31, 2024 IST
Advertisement

Sleep: ಮನುಷ್ಯನ ದೇಹವು ಸರಿಯಾಗಿ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿ ಕಾರ್ಯನಿರ್ವಹಿಸಲು ನಿದ್ರೆ ತುಂಬಾ ಮುಖ್ಯವಾಗಿದೆ. ದೇಹದಲ್ಲಿ ಜೀವಕೋಶಗಳ ಬೆಳವಣಿಗೆ, ಕೋಶಗಳ ದುರಸ್ತಿ ಮತ್ತು ನಿರ್ವಹಣೆ ನಿದ್ರೆಯ ಸಮಯದಲ್ಲಿ ಮಾತ್ರ ನಡೆಯುತ್ತದೆ. ಆದ್ದರಿಂದ ನಮ್ಮ ಆರೋಗ್ಯ ನಿದ್ರೆಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ನಿಮ್ಮಲ್ಲಿರುವ ಸಿಕ್ಸ್ಸೆನ್ಸ್ ನಿಮ್ಮನ್ನು ನಸು ಮುಂಜಾನೆ ಎಬ್ಬಿಸಿದ್ರೆ ಅದಕ್ಕೂ ಬಲವಾದ ಕಾರಣ ಇದೆಯಂತೆ! ಹೌದು, ನಿಮಗೆ ಮುಂಜಾನೆ 3 ರಿಂದ 4 ಗಂಟೆಗಳ ನಡುವೆ ನಿದ್ದೆಯಿಂದ (Sleep) ಎಚ್ಚರವಾಗುತ್ತಿದ್ದರೆ ಪ್ರಕೃತಿಯು ನಿಮಗೆ ಕೆಲವು ಸಂದೇಶವನ್ನು ನೀಡುತ್ತಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು.

Advertisement

ಇದನ್ನೂ ಓದಿ: Prajwal Revanna: ಪ್ರಜ್ವಲ್ ಬಂಧನ ಆಯ್ತು- ಮುಂದೆ SIT ಕೆಲಸವೇನು? ಯಾವೆಲ್ಲಾ ತನಿಖೆ ನಡೆಯುತ್ತೆ?

ಹೌದು, ಕೆಲವರಿಗೆ ಮುಂಜಾನೆ ಬ್ರಹ್ಮ ಮುಹೂರ್ತದ ಸಮಯದಲ್ಲಿ 3:00 - 4:00 AM ನಡುವೆ ಯಾವುದೇ ಅಲಾರಂ ಅಥವಾ ಎಚ್ಚರವಿಲ್ಲದೆ ಎಚ್ಚರಗೊಳ್ಳುತ್ತಾರೆ. ನಿಮಗೂ ಈ ರೀತಿ ಆಗುತ್ತಿದ್ದರೆ ಗಾಬರಿ ಪಡುವ ಅಗತ್ಯವಿಲ್ಲ. ಬೆಳಗಿನ ಜಾವ ನಿದ್ದೆಯಲ್ಲಿ ನಿಮಗೆ ಎಚ್ಚರ ಆಗುತ್ತಿದ್ದರೆ ನೀವು ಸಂತೋಷವಾಗಿರಬೇಕು. ಏಕೆಂದರೆ ಜ್ಯೋತಿಷ್ಯದಲ್ಲಿ ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮಗೆ ಮುಂಜಾನೆ 3 ರಿಂದ 4 ಗಂಟೆಗಳ ನಡುವೆ ನಿದ್ದೆಯಿಂದ ಎಚ್ಚರವಾಗುತ್ತಿದ್ದರೆ ಪ್ರಕೃತಿಯು ನಿಮಗೆ ಕೆಲವು ಸಂದೇಶವನ್ನು ನೀಡುತ್ತಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು ಎಂದು ಜ್ಯೋತಿಷಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: Bath Tips: ಆರೋಗ್ಯ ಕಾಪಾಡಲು ಈ 5 ಭಾಗಗಳನ್ನು ಸ್ನಾನ ಮಾಡುವಾಗ ತಪ್ಪದೇ ಸ್ವಚ್ಛ ಮಾಡಿಕೊಳ್ಳಿ!

ಮುಂಜಾನೆ 3 ರಿಂದ 4 ಗಂಟೆಗಳ ನಡುವಿನ ಸಮಯದಲ್ಲಿ ಎದ್ದೇಳಬೇಕು ಎಂದು ಪ್ರಕೃತಿ ಹೇಳುತ್ತಿದೆ. ಈ ಸಮಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ಏಕೆಂದರೆ ಈ ಸಮಯದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ. ಇದರ ಸದುಪಯೋಗ ಪಡೆದು ಜೀವನವನ್ನು ಸುಧಾರಿಸಿಕೊಳ್ಳಬಹುದು. ಈ ಸಮಯದಲ್ಲಿ ಹೊಳೆಯುವ ಉಪಾಯ ನಿಮ್ಮ ಯಶಸ್ಸಿಗೆ ಕಾರಣ ಆಗಬಹುದು. ಅಥವಾ ಈ ಸಮಯದಲ್ಲಿ ಎದ್ದು ನಿಮ್ಮ ನೆಚ್ಚಿನ ದೇವರನ್ನು ಪ್ರಾರ್ಥಿಸಿ. ಇದರಿಂದ ನೀವು 5 ಪಟ್ಟು ಪ್ರಯೋಜನ ಪಡೆಯುತ್ತೀರಿ. ನಿಮಗೆ ಏನೂ ತೋಚದೆ ಇದ್ದಲ್ಲಿ ನೀವು ಶಾಂತವಾಗಿ ಕುಳಿತು ನಿಮ್ಮ ನೆಚ್ಚಿನ ದೇವತೆಯ ಹೆಸರನ್ನು ಜಪಿಸಬಹುದು, ಇದು ಕೂಡ ಅಷ್ಟೇ ಫಲಪ್ರದವಾಗಿದೆ ಎಂದು ಜ್ಯೋತಿಷಿ ಸಲಹೆ ನೀಡಿದ್ದಾರೆ.

ಅನೇಕ ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಒಂದು ವೇಳೆ ನಿಮಗೆ ನಿದ್ರಾಹೀನತೆಯಿಂದ ಹೀಗೆ ಆಗುತ್ತಿದೆ ಎಂದು ಅನಿಸಿದರೆ ನಿಮ್ಮ ದೇಹವನ್ನು ನೀವು ಪರಿಶೀಲಿಸಬಹುದು, ನಿಮಗೆ ಸಮಸ್ಯೆ ಇದೆಯೇ? ಅಥವಾ ಅಂತಹ ಸಮಸ್ಯೆಯಿಲ್ಲದೆ ನಿದ್ರೆಯಿಂದ ಎಚ್ಚರವಾಗುತ್ತಿದ್ದರೆ ಪ್ರಕೃತಿಯು ನಿಮ್ಮೊಂದಿಗೆ ಸಂಪರ್ಕ ಹೊಂದಲು ಬಯಸುತ್ತದೆ ಎಂದು ಅರ್ಥಮಾಡಿಕೊಳ್ಳಿ ಎಂದು ಸಂತೋಷ್ ಕುಮಾರ್ ಹೇಳಿದ್ದಾರೆ.

ಈ ಸಮಯವನ್ನು ನೀವು ಸದುಪಯೋಗಪಡಿಸಿಕೊಂಡರೆ ನಿಮ್ಮ ಜೀವನದಲ್ಲಿ ಅದ್ಭುತವಾದ ಬದಲಾವಣೆಯನ್ನು ಕಾಣುವಿರಿ. ಅಂತಹ ವ್ಯಕ್ತಿಯು ಸಕಾರಾತ್ಮಕ ಶಕ್ತಿ, ಗೌರವ ಮತ್ತು ಪ್ರತಿಷ್ಠೆಯೊಂದಿಗೆ ಜೀವನದಲ್ಲಿ ಪ್ರಗತಿಯನ್ನು ಪಡೆಯುತ್ತಾನೆ ಎಂದು ತಿಳಿಸಿದ್ದಾರೆ.

Advertisement
Advertisement