Tulsi Root: ತುಳಸಿ ಬೇರನ್ನು ಈ ರೀತಿ ಬಳಸಿದರೆ ಅದೃಷ್ಟ ನಿಮ್ಮ ಪಾಲಾಗುವುದು ಖಂಡಿತಾ!
Tulsi Root: ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ತುಳಸಿ ಗಿಡವು ಮನೆಯ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ ಮತ್ತು ಮನೆಯಲ್ಲಿ ಸಂತೋಷ, ಶಾಂತಿಯನ್ನು, ತರುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ ತುಳಸಿ ಗಿಡವನ್ನು ಸಾಕ್ಷಾತ್ ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಪವಿತ್ರ ಗಿಡವನ್ನು ನಾವು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನೀವು ಯಾವುದೇ ರೀತಿಯಾದ ಹಣಕಾಸಿನ ಅಥವಾ ಆರ್ಥಿಕ ಸಮಸ್ಯೆ ನಿವಾರಣೆ ಆಗುತ್ತದೆ.
ಇದನ್ನೂ ಓದಿ: CET Result: ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶದ ನಂತರ ಸಿಇಟಿ ಫಲಿತಾಂಶ ಪ್ರಕಟ
ಆದರೆ ತುಳಸಿ ಗಿಡದಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನಾವೀಗಾಗಲೇ ಸಾಕಷ್ಟು ಬಾರಿ ನೋಡಿದ್ದೇವೆ. ಅದೇ ರೀತಿ ಒಣಗಿದ ತುಳಸಿ ಬೇರಿನಿಂದಲೂ (Tulsi Root) ನಮಗೆ ಅನೇಕ ಪ್ರಯೋಜನಗಳಿವೆ. ಹೌದು, ತುಳಸಿಯ ಒಣಗಿದ ಬೇರುಗಳನ್ನು ಮನೆಯ ಈ ಸ್ಥಳದಲ್ಲಿ ನೇತುಹಾಕಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ನೋಡೋಣ.
ಶಾಸ್ತ್ರದಲ್ಲಿ ತುಳಸಿ ಗಿಡವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ತುಳಸಿ ಬೇರನ್ನು ಮನೆಯ ಮುಖ್ಯ ದ್ವಾರದ ಮೇಲೆ ತಲೆಕೆಳಗಾಗಿ ನೇತು ಹಾಕುವುದರಿಂದ ಅದೃಷ್ಟವನ್ನು ತರುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಮುಖ್ಯವಾಗಿ ತುಳಸಿ ಗಿಡದ ಬೇರನ್ನು ಮನೆಯ ಮುಖ್ಯ ದ್ವಾರದ ಮೇಲೆ ತಲೆಕೆಳಗಾಗಿ ನೇತು ಹಾಕುವುದರಿಂದ ಅದು ಮನೆಗೆ ನಕಾರಾತ್ಮಕ ಶಕ್ತಿಗಳು ಬರುವುದನ್ನು ತಡೆಯುತ್ತದೆ. ಇದು ನಿಮ್ಮ ಮನೆಯಲ್ಲಿನ ಎಲ್ಲಾ ವಾಸ್ತು ದೋಷಗಳನ್ನು ತೆಗೆದುಹಾಕುವ ಜೊತೆಗೆ, ಯಾವುದೇ ಕೆಟ್ಟ ಶಕ್ತಿಗಳು ನಿಮ್ಮ ಮನೆಗೆ ಬರುವುದಿಲ್ಲ. ಅಷ್ಟು ಮಾತ್ರವಲ್ಲ, ಇದು ನಿಮ್ಮ ಮನೆಯಲ್ಲಿನ ಎಲ್ಲಾ ವಾಸ್ತು ದೋಷಗಳನ್ನು ತೆಗೆದುಹಾಕುತ್ತದೆ.
ತುಳಸಿ ಗಿಡವನ್ನು ಮನೆಯ ಮುಖ್ಯ ದ್ವಾರದಲ್ಲಿ ನೇತುಹಾಕುವುದರಿಂದ ನೀವು ಪ್ರಯೋಜನಗಳನ್ನು ಪಡೆದುಕೊಳ್ಳಬೇಕಾದರೆ, ಇದಕ್ಕಾಗಿ ನೀವು ಒಣಗಿದ ತುಳಸಿ ಗಿಡದ ಬೇರನ್ನು ತೆಗೆದುಕೊಂಡು ಅದನ್ನು ಒಂದು ಕೆಂಪು ಬಟ್ಟೆಯಲ್ಲಿ ಇಟ್ಟು ಅಕ್ಕಿಯನ್ನು ಹಾಕಿ ಇದರೊಂದಿಗೆ ಕೆಂಪು ಬಣ್ಣದ ದಾರವನ್ನು ಕಟ್ಟಿಕೊಳ್ಳಿ. ನಂತರ ಈ ಗಂಟನ್ನು ನಿಮ್ಮ ಮನೆಯ ಪ್ರವೇಶ ದ್ವಾರದ ಮೇಲೆ ಅಥವಾ ಬಾಗಿಲಿಗೆ ನೇತುಹಾಕುವುದು ಉತ್ತಮ ಎಂದು ಶಾಸ್ತ್ರ ದಲ್ಲಿ ಹೇಳಲಾಗಿದೆ.