ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

HSRP ನಂಬರ್ ಪ್ಲೇಟ್ ಅಳವಡಿಸದ ಮಾಲಿಕರೇ ಎಚ್ಚರ- ಜೂ. 1 ರಿಂದ ಫೈನ್ ಬೀಳೋದು ಫಿಕ್ಸ್ !!

09:55 PM Apr 08, 2024 IST | ಸುದರ್ಶನ್ ಬೆಳಾಲು
UpdateAt: 10:05 PM Apr 08, 2024 IST
Advertisement

HSRP ನಂಬರ್‌ ಪ್ಲೇಟ್ ಅಳವಡಿಸಲು ಸಾರಿಗೆ ಇಲಾಖೆ ಮೂರು ತಿಂಗಳು ಕಾಲಾವಕಾಶ ನೀಡಿದೆ. ಅಂದರೆ ಮೇ 31 ಕೊನೆಯ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿದೆ. ಇದರ ನಂತರವೂ ಯಾರು ನಂಬರ್ ಪ್ಲೇಟ್ ಹಾಕಿಸುವುದಿಲ್ಲವೋ ಅವರಿಗೆ ದಂಡ ಬೀಳುವುದು ಪಕ್ಕಾ ಎಂದು RTO ಹೇಳಿದೆ. ಅಂತೆಯೇ ಇದೀಗ ಈ ಕುರಿತಂತೆ ಹೊಸ ಅಪ್ಡೇಟ್ ಒಂದು ಹೊರಬಿದ್ದಿದೆ.

Advertisement

ಹೌದು, ದೇಶಾದ್ಯಂತ ಏಕೀಕೃತ ವಾಹನ ನೋಂದಣಿ ಸಂಖ್ಯೆ ಫಲಕ ಅಳವಡಿಕೆ ಹಾಗೂ ವಾಹನಗಳ ಸುರಕ್ಷತೆ ದೃಷ್ಟಿಯಿಂದಾಗಿ ಸಾರಿಗೆ ಇಲಾಖೆ 2019ರ ಏಪ್ರಿಲ್‌ಗಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಫೆಬ್ರವರಿ 17 HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಕೊನೆಯ ದಿನಾಂಕ ಎಂದಿದ್ದ ಸಾರಿಗೆ ಇಲಾಖೆಯು ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಏರಿಕೆ ಕಾಣುತ್ತಿದ್ದ ಕಾರಣ ಅದನ್ನು ಮೇ 31 ರ ತನಕ ವಿಸ್ತರಿಸಿತ್ತು. ಇದೀಗ ಇನ್ನೇನು ಎರಡು ತಿಂಗಳಲ್ಲಿ ಈ ಗಡುವೂ ಮುಕ್ತಾಯವಾಗಲಿದ್ದು ಜೂನ್ 1 ರಿಂದ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದವರಿಗೆ ಭಾರೀ ಮೊತ್ತದ ದಂಡ ಬೀಳೋದು ಫಿಕ್ಸ್ ಎಂದು ಹೇಳಿದೆ.

ಅಂದಹಾಗೆ ಫೆ. 17ರ ಗಡುವಿನ ನಂತರ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳದ ವಾಹನಗಳ ವಿರುದ್ಧ ದಂಡ ಪ್ರಯೋಗ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಕ್ರಮೇಣ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ವಾಹನ ಮಾಲೀಕರ ನೋಂದಣಿ ಪ್ರಮಾಣ ಹೆಚ್ಚಾಗಿ 18 ಲಕ್ಷಕ್ಕೆ ತಲುಪಿತ್ತು. ಇದೀಗ ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, ಒಟ್ಟಾರೆ 52 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಂಡಿವೆ.

Advertisement

ಮೇ 31 ರ ಬಳಿಕವೂ HARP ನಂಬರ್ ಪ್ಲೇಟ್ ಅಳವಡಿಸದಿದ್ದರೆ ಬೀಳುತ್ತೆ ಭಾರೀ ದಂಡ:

HSRP Number Plate ಇಲ್ಲದ ವಾಹನ ಮಾಲೀಕರೆ ಎಚ್ಚರ. ಯಾಕೆಂದರೆ ನೀವು ಈ ನಂಬರ್ ಪ್ಲೇಟ್ ಅಳವಡಿಸದೆ ಮೊದಲ ಬಾರಿಗೆ ರಸ್ತೆಗಿಳಿದರೆ 1000 ದಂಡ ಪಾವತಿಸಬೇಕು. ಇದರಿಂದಲೂ ಎಚ್ಚರಗೊಳ್ಳದೆ ನಂಬರ್ ಪ್ಲೇಟ್ ಹಾಕಿಸದೆ ಎರಡನೇ ಬಾರಿ ರಸ್ತೆಗಿಳಿದರೆ 2000 ಹಾಗೂ ಪದೇ ಪದೇ ಇದೆ ತಪ್ಪಾದರೆ ಇನ್ ಹೆಚ್ಚಿನ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಹೀಗಾಗಿ ದಯವಿಟ್ಟು ಎಲ್ಲರೂ ಮೇ 31ರ ಒಳಗೆ ಸರ್ಕಾರದ ಸೂಚನೆಂತೆ HSRP ಅಳವಡಿಸಿ.

HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?

ಮೊದಲಿಗೆ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ನಂತರ Book HSRP ನ್ನು ಕ್ಲಿಕ್‌ ಮಾಡಿ.

• ವಾಹನ ತಯಾರಕರನ್ನು ಆಯ್ಕೆ ಮಾಡಿ

• ವಾಹನದ ಮೂಲ ವಿವರ ಭರ್ತಿ ಮಾಡಿ

• ಡೀಲರ್‌ ಸ್ಥಳವನ್ನು ಆಯ್ಕೆ ಮಾಡಿ (HSRP ಅಳವಡಿಕೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ)

• HSRP ಶುಲ್ಕವನ್ನು ನಗದು ರೂಪದಲ್ಲಿ ಪಾವತಿ ಮಾಡಲು ಅವಕಾಶವಿಲ್ಲ, ಹಾಗಾಗಿ ಆನ್‌ಲೈನ್‌ನಲ್ಲಿ ಪಾವತಿಸಿ.

• ಆವಾಗ, ವಾಹನ ಮಾಲೀಕರ ಮೊಬೈಲ್‌ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.

• ನಿಮಗೆ ಯಾವಗ ಸೂಕ್ತ ಅನಿಸುತ್ತದೆಯೋ ಅದಕ್ಕೆ ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ

• ನಂತರ ನಿಮ್ಮ ವಾಹನದ ಯಾವುದೇ ತಯಾರಕ/ ಡೀಲರ್‌ ಸಂಸ್ಥೆಗೆ ಭೇಟಿ ನೀಡಿ.

Advertisement
Advertisement